ಬಾಲೆಯು ಬಾಳಿ ಬೆಳಗಲಿ

ಬಾಲೆಯು ಬಾಳಿ ಬೆಳಗಲಿ

ಬಾಲೆಯು ಬಾಳಿ ಬೆಳಗಲಿ

ಹೆಣ್ಣು ಹುಟ್ಟಿತ್ತೆಂದು ಹೆಣಗಾಡುವಿರಾ!!?

ಹೆಣ್ಣೆತ್ತವಳೆಂದು ಅಣುಕಿಸುವಿರಾ!!?

ಹುಟ್ಟವ ಮುನ್ನವೇ ಹೆಣ್ಣೆಂದು ಹೊಸಕಿ ಹಾಕುವಿರಾ!?

ನಿಮ್ಮ ಹೆತ್ತವಳು ಹೆಣ್ಣಲ್ಲವೇ?..

ನಿಮಗೆ ಒಲವಿನ ತೃಷೆಯ ತಣಿಸಿದವಳುಹೆಣ್ಣಲ್ಲವೇ?

ಮಹಿಳೆ ಇಳೆಯಂತೆ ತ್ಯಾಗಗುಣಿ 

ಹೊಂದಿಕೊಂಡರೆ ನಮ್ರತೆ ನಾರಿಮಣಿ 

ಎಲ್ಲ ಕ್ಷೇತ್ರದಿ ಸಾದಿಸುತಿಹ ಅಗ್ರಗಣಿ 

ಮುಟ್ಟಿನ ನೆಪದಿ ಸೂತಕ ಹಣೆಪಟ್ಟಿಕಟ್ಟಬೇಡಿರಿ 

ಅದು ಜೈವಿಕ ಕ್ರಿಯೆಯೆಂದರಿಯಿರಿ 

ಅತ್ಯಾಚಾರ ಅಟ್ಟಹಾಸದಿ ಮಾಡಬೇಡಿರಿ ಹಾಳು 

ಹೆಣ್ಣೇ ಹೆಣ್ಣೆಗೆ ಶತ್ರುವಾದರೆ ಶೋಚನಿಯಳು 

ಶೋಷಣೆಗೈದು ಕೊಡುವಿರೇಕೆ ಗೋಳು 

ಹೊತ್ತೋತ್ತಿಗೆ ಕೊಡುವಳು ಕೂಳು 

ನೆಮ್ಮದಿಲಿ ಅರಳಲಿ ಅವಳ ಬಾಳು 

ತೊಟ್ಟಿಲು ತೂಗಬಲ್ಲಳು 

ನಾಡನ್ನು ಮುನ್ನೆಡೆಸುವಳು 

ಒಳಗೂ ಹೊರಗೂ ದಣಿವರಿಯದೆ ದುಡಿವಳು 

ಮನೆ ಮನವ ಬೆಳಗುವಳು 

ಹೆಣ್ಣು ಜಗದ ಕಣ್ಣವಳು 

ಭವ್ಯ ಸುಧಾಕರಜಗಮನೆ