ಹೃದಯದೊಳು ಅರಳಿದ ಹೂ (ಗಜಲ್ )

ಹೃದಯದೊಳು ಅರಳಿದ ಹೂ (ಗಜಲ್ )

ಹೃದಯದೊಳು ಅರಳಿದ ಹೂ (ಗಜಲ್ )

ಹೃದಯದೊಳು ಅರಳಿದ ಹೂ ಕಿತ್ತೆಸೆದರೆ ಉಳಿಯಲುಂಟೆ

ಜೀವದುಸಿರಲೊಂದಾಗಿ ಕಲೆತ ಹೆಸರ ಮರೆತರೆ ಬದುಕಲುಂಟೆ

ನಿನ್ನ ಮರೆತ ಕ್ಷಣ ನನ್ನ ಮರಣವೆಂಬುದು ಸತ್ಯವಲ್ಲವೇ 

ಸಾಗೋ ಪಯಣದ ಹಾದಿಯಲಿ ಜೊತೆ ನೀನಿರದೆ ಇರಲುಂಟೆ

ಬಾಳ ಬುತ್ತಿಯ ತುಂಬ ನಿನ್ನಯ ನೆನಪಿನ ಕನಸುಗಳ ಕಟ್ಟು 

ಮನದಾಳದಿ ಅಚ್ಚಾದ ಬಯಕೆಗಳ ಕಿತ್ತೆಸಿದರೆ ಬಾಳಲುಂಟೆ

ನಕ್ಕ ನಲುಮೆಯ ಹೂವುಗಳ ಗುಚ್ಚ ಬಾಡಿದರೆ ಏನು ಚೆನ್ನ 

ಒಡಲ ಕಡಲೊಳು ಮೊಳೆತ ಆಸೆ ಬತ್ತಿಸಿದರೆ ಉಸಿರುಂಟೆ 

ನೋಟ ಬೆರೆತು ಹಸಿರಾದ ಬನದಿ ಮಲ್ಲಿಗೆಯ ಸುಮವಿತ್ತು 

ಅಂತರಾಳದ ಪ್ರೀತಿ ಹಂಬಲಗಳ ಬತ್ತಿಸಿದರೆ ಸಹಿಸಲುಂಟೆ 

ಭಾವ ಬಿತ್ತಿಯಾ ತುಂಬ ಸ್ವಾತಿಮಳೆಯ ಪ್ರೀತಿಯ ಮುತ್ತುಗಳು 

ನರನಾಡಿಗಳಲಿ ಉಲಿದ ಪ್ರೇಮ ಘಾಸಿಸಿದರೆ ಉಳಿಯಲುಂಟೆ

ಅನುಳೆದೆ ಬಣದಲಿ ಅಚ್ಚಾದ ಒಲವಿನ ಅಕ್ಷರಗಳ ಮೊರೆತ 

ರಕುತನ ಕಣಕಣದಿ ಸೇರಿದ ನೆನಪೆ ನಲುಗಿದರೆ ಜೀವವುಂಟೆ

ಡಾ ಅನ್ನಪೂರ್ಣ ಹಿರೇಮಠ