ಶ್ರಿ ರಾಮ

ಶ್ರಿ ರಾಮ ಕವನ
ಪುರಾಣ ಪುರುಷೋತ್ತಮ ಶ್ರೀ ರಾಮ
ದಶರಥ ನಂದನ ಶ್ರೀ ರಾಮ
ಸದ್ಗುಣ ಸಂಪನ್ನ ಶ್ರೀ ರಾಮ
ಪಿತೃ ವಾಕ್ಯ ಪರಿಪಾಲಕ ಶ್ರೀ ರಾಮ
ಪರಮ ಪಾವನ ಶ್ರಿ ರಾಮ
ನಿನಗೆ ವಂದನೆ ಅಭಿನಂದನೆ.!
ದುಷ್ಟ ರಕ್ಕಸರ ಸದೆ ಬಡಿಯಲೆಂದು ಅವತರಿಸಿದೆ
ದುಷ್ಟ ರಕ್ಕಸರ ಸಂಹಾರ ಮಾಡಿದೆ
ನಿನ್ನ ನಾಮ ಜಗದಗಲ ಮೊಳಗಿದೆ
ಮರೆಯಲಾಗದ ಮಾಣಿಕ್ಯ ನೀನು.
ಮನುಕುಲದ ಶ್ರೇಷ್ಟ ಮರ್ಯಾದ ಪುರುಷೋತ್ತಮ
ನಿನಗೆ ಒಂದನೇ ಅಭಿನಂದನೆ.!
ಆದರ್ಶ ವ್ಯಕ್ತಿ ನೀನಾದೆ .
ಜನಮಾನಸದಲ್ಲಿ ನೀ ನೆಲಸಿದೆ
ತನಯ ವಿನಯ ಪುರುಷ ನೀನು
ಸೀತಾ ಮಾತೆಯ ರಮಣ ನೀನು
ನಿನಗೆ ಒಂದನೇ ಅಭಿನಂದನೆ.!
ರವಿಕುಲದ ತಿಲಕ ನೀನು
ಮನು ಕುಲದ ಕನಕ ನೀನು
ರಾಮಾಯಣ ನಿನ್ನ ಚರಿತೆಯಾಯಿತು
ಸರ್ವಕಾಲಕೂ ಅದು ಚಿರಾಯು ವಾಯ್ತು
ಮತ್ತೊಮ್ಮೆ ನೀನು ಅವತರಿಸಿ ಬಾ
ಕಲಿಯುಗದ ರಕ್ಕಸರ ಸಂಹರಿಸು ಬಾ ತಂದೆ
ನಿನಗೆ ಒಂದನೇ ಅಭಿನಂದನೆ.!
ಅಂದಿದ್ದ ಸಾಮರಸ್ಯ ಇಂದು ಇಲ್ಲವಾಗಿದೆ.
ಶಾಂತಿ,ಸಹನೆ,ಕರುಣೆ ,ಮಮತೆ ಸತ್ತು ಹೋಗಿದೆ.
ಜಾತಿ ಮತದ ಬೇದದ ಕಿಚ್ಚು ಹೊತ್ತಿ ಕೊಂಡಿದೆ
ಜಾತಿ ಧರ್ಮದೊಳಗೆ ದ್ವೇಷ ದಗ ದಗನೆ ಉರಿಯುತಿದೆ
ಸುಜ್ಞಾನವೆಂಬ ಮಳೆಯ ಸುರಿಸಿ ಬಾ..
ಕೋಮು ದ್ವೇಷ ನಂದಿಸಲು ಬಾ
ದ್ವೇಷ ಉಳ್ಳ ಮನದೊಳಗೆ ಸ್ನೇಹ ಜ್ಯೋತಿ ಬೆಳಗಿಸಲು ಬಾ
*ರಾಮರಾಜ್ಯ* ಉದಯಿಸಲು ಮತ್ತೆ ಜಗದಿ ಅವತರಿಸಿ
ಬಾ ಶ್ರೀ ರಾಮ ಅವತರಿಸಿ ಬಾ.
- ಓಂಕಾರ ಪಾಟೀಲ