ಕಂಗಾಲಾಗಿ ಕಾಯುತ್ತಿರುವೆ (ಕವನ)

ಕಂಗಾಲಾಗಿ ಕಾಯುತ್ತಿರುವೆ (ಕವನ)

ಕವನದ ಶೀರ್ಷಿಕೆ : ಕಂಗಾಲಾಗಿ ಕಾಯುತ್ತಿರುವೆ

ನಿನ್ನೊಲುಮೆಯೊಂದು ಕನಸೆಂದುಕೊಳ್ಳಲೆ ಸವಿನೆನಪೆಂದು ಸವಿಯಲೆ ತಿಳಿಯದೆ ಕಂಗಾಲಾಗಿಹೆ ನಿಲ್ಲಿ 

ಪ್ರತಿ ಇರುಳ ಕನಸಿನಲಿ ನೀ ಬಂದು ಪೀಡಿಸುತ್ತಿರೆ ಹಂಬಲಿಸುತ್ತಿರುವೆ ನಾ ನಿನ್ನ ಮರೆಯಲು ಮರೆಯಲಾಗದೆ ಕಂಗಾಲಾಗಿಹೆ ನಿಲ್ಲಿ 

ನಿನ್ನ ನೆನಪಿನಂಗಳದಿ ವಿರಹದಿ ಬೇಯುತ್ತಿರೆ 

ದಾಹ ತೀರಿಸಲು ನೀ ಬರುವೆಯೆಂದು 

ಕಾಯುತ್ತಾ ಕಂಗಾಲಾಗಿಹೆ ನಿಲ್ಲಿ 

ನೀ ಸರನೆ ಬಂದು ಬಿರನೆ ಮರೆಯಾದೆ 

ನನ್ನ ನೀ ನೋಡದೆ ಹೋದೆ ಇನಿಯಾ

ನಾ ಚಡಪಡಿಸುತ್ತಾ ಕಂಗಾಲಾಗಿಹೆ ನಿಲ್ಲಿ

ಕಾವ್ಯನಾಮ: ಶೋಭಾಯಾಮಾನ

ರಚನೆ: ಬಂತನಾಳ ಶೋಭಾರಾಣಿ ಕಲಬುರಗಿ