ಶಶಿಕಾಂತ ಶಂಬೆಳ್ಳಿ ಅವರಿಗೆ ಅಧಿಕೃತ ಆಹ್ವಾನ .

ಶಶಿಕಾಂತ ಶಂಬೆಳ್ಳಿ ಅವರಿಗೆ ಅಧಿಕೃತ ಆಹ್ವಾನ .

ಶಶಿಕಾಂತ ಶಂಬೆಳ್ಳಿ ಅವರಿಗೆ ಅಧಿಕೃತ ಆಹ್ವಾನ .

ಬೀದರ : ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನ ಮಹಾಶೈವ ಧರ್ಮಪೀಠದ 2025ನೇ ಸಾಲಿಗೆ ಕೊಡಮಾಡುವ ಮಹಾ ತಪಸ್ವಿ ಶ್ರೀ ಕುಮಾರಸ್ವಾಮಿ ಪತ್ರಿಕಾ ಭೂಷಣ ಪ್ರಶಸ್ತಿಗೆ ಜನ ಸೇವಾ ಪತ್ರಿಕೆಯ ಬದ್ಧತೆಯ ಸೇವೆಗಾಗಿ ಬೀದರ ಜಿಲ್ಲಾ ಪ್ರಜಾವಾಣಿ ದಿನಪತ್ರಿಕೆಯ ವರದಿಗಾರರಾದ ಶ್ರೀ ಶಶಿಕಾಂತ್ ಶಂಬೆಳ್ಳಿ ಅವರಗೆ ಇಂದು ಅವರ ಗೃಹದಲ್ಲಿ ಸನ್ಮಾನಿಸಿ ಅಧಿಕೃತವಾಗಿ ಆಹ್ವಾನ ನೀಡಲಾಯಿತು.

ಶಶಿಕಾಂತ್ ಶೇಂಬೆಳ್ಳಿ ಅವರ ಸಾಮಾಜಿಕ ಕಳಕಳಿ,ಬದ್ಧತೆ ತಮ್ಮ ಮೊನಚಾದ ಬರವಣಿಗೆಗಳ ಮೂಲಕ ಬೆಳಕು ಚೆಲ್ಲಿ ಸಾಕಷ್ಟು ಸಮಾಜಸೇವೆ ಮಾಡಿದ್ದಾರೆ, ಅದರಿಂದ ಪತ್ರಿಕಾ ರಂಗಕ್ಕೆ ಇವರ ಕೊಡುಗೆ ಅಪಾರವಾದದ್ದು ಎಂದು ಬಸವರಾಜ ಶಿಣ್ಣೂರ ಸಂದರ್ಭದಲ್ಲಿ ನುಡಿದರು.

ಆಗಸ್ಟ್ 9 ನೂಲು ಹುಣ್ಣಿಮೆಯ ದಿನದಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಬೇಕೆಂದು ಮಹಾಶೈವ ಧರ್ಮಪೀಠದ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಬಸವರಾಜ ಶಿಣ್ಣೂರ ಗೌರವ ಪೂರಕವಾಗಿ ಫಲ ತಾಂಬೂಲ ನೀಡಿ ವಿನಂತಿಸಿಕೊಂಡರು.

 ಸಂದರ್ಭದಲ್ಲಿ ಮಾತೃ ಛಾಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ತಿಪ್ಪಣ್ಣ ಖ್ಯಾತನಾಳ, ಸಮಾಜ ಸೇವಕ ಹನುಮಂತ ಹಳಿಸಗರ, ಚಂದ್ರು ಹಂಚಿನಾಳ ಸೇರಿದಂತೆ ಇನ್ನಿತರರು ಹಾಜರಿದ್ದರು.