ಬೆನಕನಹಳ್ಳಿ - ಕನ್ಯಾಕೊಳ್ಳೂರು ರಸ್ತೆಗೆ ಸೇತುವೆ ನಿರ್ಮಿಸಿ.

ಬೆನಕನಹಳ್ಳಿ - ಕನ್ಯಾಕೊಳ್ಳೂರು ರಸ್ತೆಗೆ ಸೇತುವೆ ನಿರ್ಮಿಸಿ.
ಶಹಪುರ : ತಾಲೂಕಿನ ಬೆನಕನಹಳ್ಳಿ ಕನ್ಯಾಕುಳ್ಳೂರು ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ನೀರು ಹರಿಯುತ್ತಿದ್ದು ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ, ಆದ್ದರಿಂದ ಈ ರಸ್ತೆಗೆ ಶಾಶ್ವತವಾಗಿ ಸೇತುವೆ ನಿರ್ಮಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮದ ಯುವ ಮುಖಂಡ ಮಲ್ಲಿಕಾರ್ಜುನ್ ಹೊಸಮನಿ ಆಗ್ರಹಿಸಿದ್ದಾರೆ.
ನಿರಂತರವಾಗಿ ಮಳೆ ಸುರಿಯುವುದರಿಂದ ಊರಿನ ಕೆರೆ ತುಂಬಿ ಹೆಚ್ಚುವರಿ ನೀರು ನಾಲಾ ಮುಖಾಂತರ ನೀರು ಹರಿದು ಸಂಚಾರಕ್ಕೆ ಅಡ್ಡಿಪಡಿಸುತ್ತಿದೆ, ವೃದ್ಧರು ಮತ್ತು ಶಾಲಾ ವಿದ್ಯಾರ್ಥಿಗಳು ರಸ್ತೆ ದಾಟಬೇಕೆಂದರೆ ಹರ ಸಾಹಸ ಪಡಬೇಕಾಗುತ್ತದೆ,ಅಲ್ಲದೆ ಕೆಲವೊಮ್ಮೆ ರಸ್ತೆ ಮೇಲೆ ನೀರು ಜಾಸ್ತಿ ಹರಿದಾಗ ಬಸ್ ಗಳು ಸಂಚರಿಸುವುದಿಲ್ಲ ಇದರಿಂದಾಗಿ ಖಾಸಗಿ ವಾಹನಗಳ ಮರೆಹೋಗಬೇಕಾಗುತ್ತದೆ
ಈ ಸಮಸ್ಯೆ ಸುಮಾರು 20 ವರ್ಷಗಳಿಂದ ಇದ್ದರು ಯಾವೊಬ್ಬ ಜನಪ್ರತಿನಿಧಿ ಇದರ ಬಗ್ಗೆ ತಲೆ ಕೊಡಿಸಿಕೊಂಡಿರುವುದಿಲ್ಲ ಎಂಬುದೇ ವಿಷಾದಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಅಧಿಕಾರಿಗಳು,ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಅಶ್ವತ ಸೇತುವೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಇದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ,