ಸಾವಿತ್ರಿಬಾಯಿ ಫುಲೆಯವರ ಕೊಡುಗೆ ಅವಿಸ್ಮರಣಿಯ: ಧರ್ಮಾ ಬಂಗರಗಾ
ಸಾವಿತ್ರಿಬಾಯಿ ಫುಲೆಯವರ ಕೊಡುಗೆ ಅವಿಸ್ಮರಣಿಯ: ಧರ್ಮಾ ಬಂಗರಗಾ
ಆಳಂದ: ತಾಲೂಕಿನ ಕಿಣ್ಣಿಸುಲ್ತಾನ ಅರಿವು ಶಿಕ್ಷಣ ಕೇಂದ್ರದಲ್ಲಿ ಅಕ್ಷರದ ಅವ್ವ ಮಾತೆ ಸಾವಿತ್ರಿಬಾಯಿ ಫುಲೆ ಅವರ 129ನೇ ಪುಣ್ಯ ಸ್ಮರಣೆ ಆಚರಣೆ ಮಾಡಲಾಯಿತು ಅತಿಥಿಗಳಾಗಿ ಧರ್ಮಾ ಬಂಗರಗಾ ದಲಿತ ಸೇನೆ ತಾಲೂಕ ಅಧ್ಯಕ್ಷರು ಬಸವರಾಜ್, ಯುವ ಮುಖಂಡರು ಡಾ. ಬಾಬುರಾವ್ ಶೃಂಗೇರಿ ಸಹ ಶಿಕ್ಷಕಿ ಪ್ರಿಯ ಜ್ಯೋತಿ ಅದು ಶಿಕ್ಷಣ ಕೇಂದ್ರ ಸಂಸ್ಥಾಪಕರಾದ ಮಲ್ಲಿಕಾರ್ಜುನ್ ಶೃಂಗೇರಿ ಉಪಸ್ಥಿತಿ ಇದ್ದರು ಕಾರ್ಯಕ್ರಮದ ಕುರಿತು ಮಾತನಾಡಿ ಬಾಬುರಾವ್ ಶೃಂಗೇರಿ ಅವರು ಸಾವಿತ್ರಿಬಾಯಿ ಅವರ ಶಿಕ್ಷಣಕ್ಕಾಗಿ ಹೋರಾಟ ಮಾಡಿದ ಧೀರ ಮಹಿಳೆ ಎಂದು ಮಕ್ಕಳಿಗೆ ಹೇಳಿದರು ಧರ್ಮಾ ಬಂಗರಗಾ ಮಾತನಾಡಿ ಮಹಿಳೆಯರಿಗೆ ಶಿಕ್ಷಣ ಬಹಳ ಮುಖ್ಯ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆಯವರು ಮಹಿಳೆಯರಿಗೆ ಶಿಕ್ಷಣ ನೀಡಲು ಬಹಳ ಶ್ರಮ ಪಟ್ಟಿದ್ದಾರೆ ಅವರ ಕೊಡುಗೆ ಅವಿಸ್ಮರಣಿಯ ಎಂದು ಹೇಳಿದರು ಕಾರ್ಯಕ್ರಮದಲ್ಲಿ ವಿಕಾಸ್ ಅಮಿತ್ ಸಂಘರ್ಷ ಕೈಲಾಸ್ ವಿನುತಾ ನಿಶಾ ಪಂಚಶೀಲ ಅರಿವು ಶಿಕ್ಷಣ ಕೇಂದ್ರದ ಮುದ್ದು ಮಕ್ಕಳು ಗ್ರಾಮಸ್ಥರು ಯುವಕರು ಉಪಸ್ಥಿತರಿದ್ದರು.
ನಿರೂಪಣೆ ಗೌತಮ್ ಶೃಂಗೇರಿ ಸ್ವಾಗತ ಸಂಕೇತ್ ಹಿರಿನಾಯಕ್ ವಂದನಾರ್ಪಣೆ ಪೃಥ್ವಿರಾಜ್ ದಿಡ್ಡಿಮನಿ ನಿರ್ವಹಿಸಿದರು
ವರದಿ ಡಾ. ಅವಿನಾಶ S. ದೇವನೂರ
