ದಸರಾ ಹಬ್ಬ ಪ್ರಯುಕ್ತ ಸೀಮೋಲ್ಲಂಘನ ಪೂಜೆ

ದಸರಾ ಹಬ್ಬ ಪ್ರಯುಕ್ತ ಸೀಮೋಲ್ಲಂಘನ ಪೂಜೆ
ಕಮಲನಗರ: ತಾಲೂಕಿನ ಡಿಗ್ಗಿ ಗ್ರಾಮದಲ್ಲಿ ದಸರಾ ಹಬ್ಬ ಪ್ರಯುಕ್ತ ಗುರುವಾರ ಗ್ರಾಮದ ಹೊರ ವಲಯದಲ್ಲಿ ಇರುವ ಬಾಬುರಾವ ಹರಪ್ಪಳೆ ಅವರ ಹೊಲದಲ್ಲಿ ಬನ್ನಿ ಗಿಡಕ್ಕೆ ಸೀಮೋಲ್ಲಂಘನ ಪೂಜೆ ಮಾಡಿ ದಸರಾ ಹಬ್ಬಕ್ಕೆ ಚಾಲನೆ ನೀಡಲಾಯಿತು.
ಸೀಮೋಲ್ಲಂಘನ ಎನ್ನುವುದು ದಸರಾ ಹಬ್ಬದ ಅಂಗವಾಗಿ ನಡೆಸುವ ಪೂಜಾ ಕಾರ್ಯಕ್ರಮವಾಗಿದ್ದು, ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಬಾಣ ಬಿಡುವ ಸಂಪ್ರದಾಯವಾಗಿದೆ. ಈ ಆಚರಣೆಯು ಮುಖ್ಯವಾಗಿ ಶಸ್ತ್ರಾಸ್ತ್ರಗಳ ಪೂಜೆ, ಶೌರ್ಯ ಪ್ರದರ್ಶನ ಮತ್ತು ಸೀಮಾ ಉಲ್ಲಂಘನೆಯ ಸಂಕೇತವಾಗಿದೆ. ಇದು ಹಿಂದೆ ರಾಜರು ಮತ್ತು ಸೈನಿಕರು ಯುದ್ಧಕ್ಕೆ ಹೊರಡುವ ಮುನ್ನ, ಅಥವಾ ತಮ್ಮ ಗಡಿಗಳನ್ನು ವಿಸ್ತರಿಸುವ ಮೊದಲು ನಡೆಸುತ್ತಿದ್ದ ಒಂದು ಸಾಂಕೇತಿಕ ಆಚರಣೆಯಾಗಿದೆ.
ಈ ಪರಂಪರೆಯನ್ನು ಡಿಗ್ಗಿ ಗ್ರಾಮಸ್ಥರು ಪ್ರತಿ ವರ್ಷ ದಸರಾ ಹಬ್ಬದಿನ ಆಚರಣೆ ಮಾಡುವರು, ಸಂಜೆ ಹೊತ್ತಿಗೆ ಗ್ರಾಮದ ಹಿರಿಯರು ಯುವಕರು ಭಾಜಾ ಬಂಜಂತ್ರಿ ಯೊಂದಿಗೆ ತೆರಳಿ, ಬನ್ನಿ ಮತ್ತು ಅಪ್ಪಟೆ ಗಿಡದ ಎಲೆಗಳನ್ನು ತೆಗೆದುಕೊಂಡು ಪರಸ್ಪರ ವಿನಿಮಯ ಮಾಡಿಕೊಂಡು ದಸರಾ ಹಬ್ಬದ ಶುಭಕೋರಿ ಸಂಭ್ರಮದಿಂದ ಆಚರಣೆ ಮಾಡಲಾಯಿತು.