ವಾಟ್ಸಪ್ ನಲ್ಲಿ ಬಂದ `.apk` ಫೈಲ್ ಮುಟ್ಟಬೇಡಿ.. — ಡೇಂಜರ್ ಎಚ್ಚರಿಕೆ.

ವಾಟ್ಸಪ್ ನಲ್ಲಿ ಬಂದ `.apk` ಫೈಲ್ ಮುಟ್ಟಬೇಡಿ.. — ಡೇಂಜರ್ ಎಚ್ಚರಿಕೆ
ಕಲಬುರಗಿ :ವಾಟ್ಸಪ್ ಮೂಲಕ `.apk` ಫೈಲ್‌ಗಳ ರೂಪದಲ್ಲಿ ಬಂದಿರುವ ಅಪರಿಚಿತ ಆಪ್‌ಗಳನ್ನು ಯಾರೂ ತೆರೆಯಬಾರದು ಅಥವಾ ಡೌನ್‌ಲೋಡ್ ಮಾಡಿಕೊಳ್ಳಬಾರದು ಎಂದು ಜನತೆಗೆ ಎಚ್ಚರಿಕೆ ನೀಡಲಾಗಿದೆ.
ಗುಂಡುರಾವ್ ಕಡಣಿ ಅಭಿನಂದನ ಗ್ರಂಥ ಗುಂಪಿನಲ್ಲಿ ಬಂದಿದ್ದ `.apk` ಫೈಲ್‌ನ್ನು ತಕ್ಷಣವೇ ತೆಗೆದುಹಾಕಲಾಗಿದೆ. ಈ ರೀತಿಯ ಫೈಲ್‌ಗಳು ತೆರೆಯುತ್ತಿದ್ದಂತೆಯೇ ಮೊಬೈಲ್‌ನಲ್ಲಿರುವ ಎಲ್ಲ ಡೇಟಾ ಮತ್ತು ಬ್ಯಾಂಕ್ ಖಾತೆಯ ಹಣ ಸೈಬರ್ ಅಪರಾಧಿಗಳಿಗೆ ಸಿಕ್ಕಿ ಹೋಗುವ ಅಪಾಯವಿದೆ ಎಂದು ತಿಳಿಸಲಾಗಿದೆ.
ಈ ಕುರಿತು ಶರಣಗೌಡ ಪಾಟೀಲ ಪಾಳಾ ಅವರು ಎಚ್ಚರಿಕೆ ನೀಡುತ್ತಾ, “ಯಾರೂ ಪರಿಶೀಲನೆ ಇಲ್ಲದೆ ಅಪರಿಚಿತ ಮೂಲಗಳಿಂದ ಬಂದ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಾರದು. ಈಗಾಗಲೇ `.apk` ಫೈಲ್ ಡೌನ್‌ಲೋಡ್ ಮಾಡಿಕೊಂಡ ಕೆಲ ಶಿಕ್ಷಕರು ಹಣ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಬಂದಿದೆ,” ಎಂದು ತಿಳಿಸಿದ್ದಾರೆ.
ಸೈಬರ್ ಸುರಕ್ಷತೆಗಾಗಿ ಎಲ್ಲರೂ ಜಾಗೃತರಾಗಿರಿ ಎಂದು ಅವರು ಮನವಿ ಮಾಡಿದ್ದಾರೆ.