ಸೇಡಂನಲ್ಲಿ ಸೌಹಾರ್ದತೆ ಮುನ್ನಡೆಸಿದ ಸಚಿವ ಡಾ.ಶರಣಪ್ರಕಾಶ

ಸೌಹಾರ್ದತೆಗೆ ಮುನ್ನೆಡುಸಿದ ಈದ್ ಉಲ್-ಫಿತರ್ ಹಬ್ಬ : ಸಚಿವ ಶರಣಪ್ರಕಾಶ ಪಾಟೀಲ
ಸೇಡಂ: ಈದ್ ಉಲ್-ಫಿತರ್ ಹಬ್ಬದ ಹಿನ್ನೆಲೆಯಲ್ಲಿ ಸೋಮವಾರ ಮುಂಜಾನೆ ಸೇಡಂ ಪಟ್ಟಣದ ಸಾದೇ ಸಾಬ್ ದರ್ಗಾದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರೊಂದಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು, ಆಲಿಂಗನಗೈದು ಶುಭಾಶಯಗಳನ್ನು ತಿಳಿಸಿದ್ದಾರೆ.
ಸೇಡಂ ಮತಕ್ಷೇತ್ರದ ಮುಸ್ಲಿಂ ಸಮುದಾಯದ ಜನತೆಗೆ ಹಬ್ಬದ ಶುಭಾಶಯಗಳೊಂದಿಗೆ, ಸಂಪೂರ್ಣ ಸಂತೋಷ, ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಸಚಿವರು ನೀಡಿದ್ದಾರೆ. ಹಬ್ಬವು ಸಾಮಾಜಿಕ ಸೌಹಾರ್ದತೆಯನ್ನು ಉತ್ತೇಜಿಸುವುದಕ್ಕೆ ಹಾಗೂ ಭಾವೈಕ್ಯತೆಯನ್ನು ಬಲಪಡಿಸಲು ಸಹಕಾರಿಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳು, ಹಾಗೂ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು. ಸಾದೇ ಸಾಬ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಹಬ್ಬದ ಸಂಭ್ರಮವನ್ನು ಮುಡಿಪಾಗಟ್ಟರು.