ಸನ್ನತಿಯ ಕೆಇಬಿ ಮುಂದೆ ರೈತರ ಪ್ರತಿಭಟನೆ

ಸನ್ನತಿಯ ಕೆಇಬಿ ಮುಂದೆ ರೈತರ ಪ್ರತಿಭಟನೆ
ನಾಲವಾರ : ಸಮೀಪ ದ ಸನ್ನತಿಯ ಕೆಇಬಿ ಮುಂದೆ ನೂರಾರು ರೈತರು ತಮ್ಮ ಬೇಡಿಕೆ ಈಡೇರಿಕೆಗಾಗಿ ಒಂದು ದಿನದ ಪ್ರತಿಭಟನೆ ಮಾಡಿದರು, ರೈತರಿಗೆ ತುಂಬಾ ತೊಂದರೆ ಉಂಟಾಗಿ ಬೆಳೆಗಳು ಹಾಳಾಗುತ್ತಿದಾವೆ ಇದಕ್ಕೆ ಕಾರಣ ಕೆಇಬಿ ಯವರು ಯಾಕೆಂದ್ರೆ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ, 5-6 ಗ್ರಾಮಗಳ ನಡುವೆ ಒಬ್ಬರೇ ಲೈನ್ ಮೆನ್ ಇದಾರೆ. ಇನ್ನು ಅನೇಕ ಸಮಸ್ಯೆಗಳನ್ನು ಮುಂದೆ ಇಟ್ಕೊಂಡು ಹೋರಾಟ ಮಾಡಿದ್ದಾರೆ. ಸಮಸ್ಯೆ ಗಳು :
1. F2 ಲೈನ್ ಕೊಲ್ಲೂರು, ಮಾರಡಗಿ. ಏನ್. ತರಕಸ್ಪೇಟ್, ಚೌಕಂಡಿ ತಾಂಡಾ, ಸನ್ನತಿ ಬಾಲಬಿಬಿ, ಇಷ್ಟು ಗ್ರಾಮಗಳ ನಡುವೆ ಹೊಲ ಗದ್ದೆಗಳ ನಡುವೆ ಒಂದೇ ಲೈನ್ ಇರುವುದರಿಂದ ಎಲ್ಲಿಯಾದರೂ ಒಂದು ಸ್ಥಳದಲ್ಲಿ ಸಮಸ್ಯೆ ಆದರೆ ಎಲ್ಲಾ ಗ್ರಾಮಗಳಲ್ಲಿ ಕರೆಂಟ್ ಕಟ್ ಆಗುತ್ತೆ, ಅದಕ್ಕಾಗಿ ಬೇರೆ ಬೇರೆ ಗ್ರಾಮಗಳಿಗೆ ಬೇರೆ ಬೇರೆ ಲೈನ್ ಕೊಟ್ಟು ರೈತರಿಗೆ ಅನುಕೂಲ ಮಾಡಿಕೊಡಬೇಕು.
2. ಸುತ್ತಮುತ್ತಲಿನ ಎಲ್ಲಾ ಗ್ರಾಮಗಳಿಗೆ ಒಬ್ಬರೇ ಲೈನ್ ಮೆನ್ ಇದಾರೆ ಇದರಿಂದ ತುಂಬಾ ತೊಂದರೆ ಆಗುತ್ತೆದೆ. ಅದರಿಂದ ಪ್ರತಿಯೊಂದು ಗ್ರಾಮಗಳಿಗೆ ಒಬ್ಬರಂತೆ ಲೈನ್ ಮೆನ್ ಕೊಡಬೇಕು.
3. ರೈತರಿಗೆ ಪ್ರತಿದಿನ 7 ಗಂಟೆ ವಿದ್ಯುತ್ ನೀಡಬೇಕು. ಹೇಳಿ
ಹೀಗೆ ಅನೇಕ ಸಮಸ್ಯೆಗಳ ಹಿಡೇರಿಕೆಗಾಗಿ ಹೋರಾಟ ಮಾಡಿದ್ದಾರೆ. ಸ್ಥಳಕ್ಕೆ ಕೆಇಬಿ ಅಧಿಕಾರಿ ಶ್ರೀ ಯುನುಸ್ ಅನವಾರ ಶಹಾಬಾದ ಅವ್ರು ಭೇಟಿ ಕೊಟ್ಟು ರೈತರ ಸಮಸ್ಯೆ ಗಳಿಗೆ ಸ್ಪಂದಿಸಿ ರೈತರ ಎಲ್ಲಾ ಬೇಡಿಕೆ ಗಳಿಗೆ ತಕ್ಷಣ ಒಪ್ಪಿಗೆ ನೀಡಿದರು. ಈ ಸಮಯದಲ್ಲಿ ಅಧಿಕಾರಿಗಳು ಹಾಗೂ ರೈತರ ಮದ್ಯೆ ಮಾತಿನ ಚಕಮಕಿ ಜೋರಾಗಿಯೇ ನಡೆಯಿತು. ಈ ಸಂದರ್ಭದಲ್ಲಿ ಚೌಡಪ್ಪ ಕಳಸದ, ಶಿವು ಪೂಜಾರಿ, ನಾಗರಾಜ್ ಸನ್ನತಿ, ಋಷಿ ರಾಜ್ ಸನ್ನತಿ, ಸುಬ್ಬರಾಜ್, ಚಂದ್ರಶೇಖರ ಕರೆಡ್ಡಿ, ರಾಮಕೃಷ್ಣ, ರವಿ ತರಕಸಪೇಟ್, ಶಿವಯ್ಯ ಸ್ವಾಮಿ ಸನ್ನತಿ, ಮಲ್ಲುಗೌಡ ಸನ್ನತಿ, ಸಿದ್ದಯ್ಯ ಸ್ವಾಮಿ ಕನಗನಹಳ್ಳಿ, ಶ್ರೀನಿವಾಸ್ ಮಾರಡಗಿ, ದೌಲ ಸಾಬ್ ಸನ್ನತಿ, ಶಿವಶರಣಪ್ಪ, ಆಕಾಶ ಮತ್ತು ಲೈನ್ ಮೆನ್ ಆಗಿರುವ ಶ್ರೀ ಮಲ್ಕಣ್ಣ ಅವ್ರು ಇದ್ದರು.