ರಘುನಾಥ ಜಾಧವ್ ಹೃದಯಘಾತದಿಂದ ನಿಧನ

ರಘುನಾಥ ಜಾಧವ್ ಹೃದಯಘಾತದಿಂದ ನಿಧನ
ಕಲಬುರಗಿ: ಮಾಜಿ ಸಂಸದರಾದ ಡಾ.ಉಮೇಶ ಜಾಧವ ಅವರ ಮೊಮ್ಮಗ ಹಾಗು ಶಾಸಕರಾದ ಡಾ. ಅವಿನಾಶ ಜಾಧವ ಶಾಸಕರ ಅಣ್ಣನ ಮಗನಾದ ರಘುನಾಥ್ ತಂದೆ ಉದಯಕುಮಾರ್ ಜಾಧವ್ ( 37 ) ದುಬೈ - ಅಬುದಾಬಿಯಲ್ಲಿ ಜುಲೈ 13 ರಂದು ಬೆಳಗ್ಗೆ 11 ಗಂಟೆಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ರಘುನಾಥ್ ಜಾಧವ್ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದು ಇವರು ತಮ್ಮ ಮಡದಿ, ಇಬ್ಬರು ಹೆಣ್ಣು ಮಕ್ಕಳು, ಸಹೋದರ, ತಂದೆ, ತಾಯಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ
ಪಾರ್ಥಿವ ಶರೀರದ ಅಂತ್ಯ ಕ್ರಿಯೆಯನ್ನು ಜುಲೈ 18 ರಂದು ಶುಕ್ರವಾರ ಮಧ್ಯಾಹ್ನ 11 ಗಂಟೆಗೆ ಸ್ವಂತ ಗ್ರಾಮ ಸುಗೂರ (ಕೆ) ತಾಂಡಾದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸುವೆ.
*ಮಾಜಿ ಸಂಸದ ಜಾಧವ್ ಸಂತಾಪ*
ರಘುನಾಥ ಜಾಧವ್ ಅವರ ಅಗಲುವಿಕೆಯಿಂದ ತೀವ್ರ ಆಘಾತವಾಗಿದೆ ಮತ್ತು ಕುಟುಂಬ ವರ್ಗದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮ ದಯಪಾಲಿಸಲಿ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ.ಉಮೇಶ ಜಾಧವ ಹಾಗೂ ಶಾಸಕರಾದ ಡಾ.ಅವಿನಾಶ ಜಾಧವ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.