ಜುಲೈ ೨೫, ಶುಕ್ರವಾರ ವಿದ್ಯಾನಗರದಲ್ಲಿ ಹಾನಗಲ್ಲ ಶ್ರೀಕುಮಾರ ಮಹಾಶಿವಯೋಗಿಗಳ ಪುರಾಣ ಉದ್ಘಾಟನೆ

ಜುಲೈ ೨೫, ಶುಕ್ರವಾರ  ವಿದ್ಯಾನಗರದಲ್ಲಿ ಹಾನಗಲ್ಲ ಶ್ರೀಕುಮಾರ ಮಹಾಶಿವಯೋಗಿಗಳ ಪುರಾಣ ಉದ್ಘಾಟನೆ

ವಿದ್ಯಾನಗರದಲ್ಲಿ ಹಾನಗಲ್ಲ ಶ್ರೀಕುಮಾರ ಮಹಾಶಿವಯೋಗಿಗಳ ಪುರಾಣ ಉದ್ಘಾಟನೆ 

 ೧೯ ವರ್ಷದಿಂದ ನಿರಂತರವಾಗಿ ಹಮ್ಮಿಕೊಂಡು ಬರುತ್ತಿರುವ ಪುರಾಣ ಕಾರ್ಯಕ್ರಮ ಈ ವರ್ಷವೂ ಕೂಡಾ ಬಸವೇಶ್ವರ ಆಸ್ಪತ್ರೆಯ ಎದುರುಗಡೆಯಲ್ಲಿರುವ ವಿದ್ಯಾನಗರ ಕಾಲೋನಿಯಲ್ಲಿರುವ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಹಾನಗಲ್ಲ ಶ್ರೀಕುಮಾರ ಮಹಾಶಿವಯೋಗಿಗಳ ಪುರಾಣ ಪ್ರವಚನ ಶ್ರಾವಣ ಮಾಸದ ಅಂಗವಾಗಿ ತಿಂಗಳ ಪರ್ಯಂತ ಪ್ರತಿನಿತ್ಯ ಸಾಯಂಕಾಲ ೬.೩೦ ರಿಂದ ೮.೩೦ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಜುಲೈ ೨೫ರಂದು ರಾತ್ರಿ ೮ ಗಂಟೆಗೆ ವೈದ್ಯಕೀಯ ಹಾಗೂ ಕೌಶಲ್ಯಭಿವೃದ್ಧಿ, ಉದ್ಯಮಶೀಲತೆ ಸಚಿವರಾದ ಶ್ರೀ ಡಾ. ಶರಣಪ್ರಕಾಶ ಪಾಟೀಲ ರವರು ಪುರಾಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

 ಗದ್ದುಗೆ ಮಠದ ಶ್ರೀ ಮ.ನಿ.ಪ್ರ. ಚರಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಗರ ಪೋಲಿಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ. ಅತಿಥಿಗಳಾಗಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಯಂಕಮ್ಮ ಜಗದೀಶ ಗುತ್ತೇದಾರ ಆಗಮಿಸಲಿದ್ದಾರೆ. ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಾಧ್ಯಕ್ಷ ಉಮೇಶ ಶೆಟ್ಟಿ, ಕಾರ್ಯದರ್ಶಿ ಶಿವರಾಜ ಅಂಡಗಿ, ಖಜಾಂಚಿ ಗುರುಲಿಂಗಯ್ಯ ಮಠಪತಿ ಉಪಸ್ಥಿತರಿರುವರು.   

 ಗದ್ದುಗೆ ಮಠದ ಪೂಜ್ಯರಾದ ಶ್ರೀ ಮ.ನಿ.ಪ್ರ. ಚರಲಿಂಗ ಮಹಾಸ್ವಾಮಿಗಳು ಪುರಾಣ ಪ್ರವಚನ ಮಾಡಲಿದ್ದಾರೆ. ಅನೀಲಕುಮಾರ ಮಠಪತಿ ಭೀಮಳ್ಳಿ ಸಂಗೀತ ಸೇವೆ ಹಾಗೂ ಸೋಮಶೇಖರ ಕಲ್ಯಾಣ ಮಕ್ತಂಪೂರ ತಬಲಾ ಸೇವೆ ಮಾಡಲಿದ್ದಾರೆ. 

 ಪುರಾಣ ಉಸ್ತುವಾರಿ ಸಮಿತಿಯ ಸದಸ್ಯರಾದ ಗುರುಲಿಂಗಯ್ಯ ಮಠಪತಿ, ಸುಭಾಷ ಮಂಠಾಳ, ಉದಯಕುಮಾರ ಪಡಶೆಟ್ಟಿ, ನಾಗರಾಜ ಹೆಬ್ಬಾಳ, ಶಾಂತಯ್ಯ ಬೀದಿಮನಿ, ಹಾಗೂ ಪುರಾಣ ಉದ್ಘಾಟನೆ ಸಮಾರಂಭ ಉಸ್ತುವಾರಿ ಸಮಿತಿಯ ಸದಸ್ಯರಾದ ವೀರೇಶ ನಾಗಶೆಟ್ಟಿ, ಕರಣ ಆಂದೋಲ, ಶಶಿಧರ ಪ್ಯಾಟಿ, ಸಂಜು ತಂಬಾಕೆ, ಶ್ರೀವತ್ಸ ಸಂಗೋಳಗಿ, ಸಂಗಮೇಶ ಹೆಬ್ಬಾಳ, ಗುರುರಾಜ ಮುಗಳಿ, ಅಮೀತ ಸಿಕೇದ, ಸುನೀಲ ಮುತ್ತಾ, ಅಕ್ಕಮಹಾದೇವಿ ಮಹಿಳಾ ಟ್ರಸ್ಟಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.