ಸಮಾಜ ಸೇವಾ ಮನೋಭಾವನೆಯಿಂದ ಜೀವನದ ಸಾರ್ಥಕತೆ ಸಾಧ್ಯ ಶಿವಾನಂದ ಶ್ರೀಗಳ
ಪೂಜ್ಯ ಶಿವಾನಂದ ಶ್ರೀಗಳ ಹೇಳಿಕೆ |ಮಕ್ತಂಪುರ ಗುರುಬಸವ ಮಠದಲ್ಲಿ ಕಾರ್ಯಕ್ರಮ
ಸಮಾಜ ಸೇವಾ ಮನೋಭಾವನೆಯಿಂದ ಜೀವನದ ಸಾರ್ಥಕತೆ ಸಾಧ್ಯ : ಶಿವಾನಂದ ಶ್ರೀಗಳ
ಕಲಬುರಗಿ: ದೇಶ, ಸಮಾಜ ನಮಗೇನು ಮಾಡಿದೆ ಎಂಬುದುವುಕ್ಕಿAತ, ದೇಶಕ್ಕಾಗಿ ನಾವೇನೂ ನೀಡಿದ್ದೇವೆಂದು ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಸಲುವಾಗಿಯೇ ಸ್ವಾರ್ಥ ಜೀವನ ನಡೆಸಿದರೆ ಉಪಯೋಗವಿಲ್ಲ.ಬದಲಿಗೆ ಸಮಾಜದಲ್ಲಿರುವ ಅನಾಥರು, ಬಡವರು, ಸಮಾಜದ ಒಳಿತಿಗೆ ಕೈಲಾದ ಸೇವೆಯನ್ನು ಮಾಡುವ ಗುಣ ಬೆಳೆಸಿಕೊಂಡರೆ ಸಾರ್ಥಕ ಜೀವನ ನಮ್ಮದಾಗಲು ಸಾಧ್ಯವಿದೆ ಎಂದು ಪೂಜ್ಯ ಶಿವಾನಂದ ಶ್ರೀಗಳು ಹೇಳಿದರು.
ನಗರದ ಮಕ್ತಂಪುರ ಗುರುಬಸವ ಮಠದಲ್ಲಿ ಕನ್ನಡ ಉಪನ್ಯಾಸಕ ಹಾಗೂ ಸಮಾಜ ಸೇವಕರಾದ ಮಲ್ಲಯ್ಯ ಬೀಳಗಿಮಠ ಅವರ 10ನೇ ವರ್ಷದ ಲಿಂಗೈಕ್ಯ ಸ್ಮರಣೋತ್ಸವದ ನಿಮಿತ್ಯ ಬೀಳಗಿಮಠ ಪರಿವಾರದ ವತಿಯಿಂದ ಮಠದಲ್ಲಿ ಅಧ್ಯಯನ ಮಾಡುತ್ತಿರುವ ಅನೇಕ ನಿರ್ಗತಿಕ ವಿದ್ಯಾರ್ಥಿಗಳಿಗೆ ಊಟದ ತಟ್ಟೆ, ಗ್ಲಾಸ್ ವಿತರಿಸಿ ಅವರು ಆಶೀರ್ವಚನ ನೀಡುತ್ತಿದ್ದರು.
ಉಪನ್ಯಾಸಕ ಹಾಗೂ ಚಿಂತಕ ಎಚ್.ಬಿ.ಪಾಟೀಲ ಮಾತನಾಡಿ, ನಾವು ಮಾಡುವ ಜನ್ಮದಿನ, ಮದುವೆ ವಾರ್ಷಿಕೋತ್ಸವ, ಹಬ್ಬ, ಉತ್ಸವಗಳು ಸಮಾಜಮುಖಿಯಾಗಿರಬೇಕು. ಇವುಗಳ ನೆಪದಲ್ಲಿ ದುಂದು ವೆಚ್ಚ, ಮೋಜು-ಮಸ್ತಿಗಾಗಿ ವೆಚ್ಚ ಮಾಡುವುದರಿಂದ ಪ್ರಯೋಜನೆಯಿಲ್ಲ. ಬದಲಿಗೆ ಸಮಾಜದಲ್ಲಿರುವ ಅಸಹಾಯಕರಿಗೆ ನೆರವಿನ ಹಸ್ತ ಚಾಚುವ ಸಹಾಯ ಮಾಡುವುದು ಅಗತ್ಯ. ಇದರಿಂದ ಆಚರಣೆಗಳು ಅರ್ಥಪೂರ್ಣ ಮತ್ತು ಸಮಾಜಮುಖಿಯಾಗಿರಲು ಸಾಧ್ಯವಾಗುತ್ತವೆ. ಈ ನಿಟ್ಟಿನಲ್ಲಿ ಬೀಳಗಿಮಠ ಪರಿವಾರ ಉತ್ತಮವಾದ ಕಾರ್ಯ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಸೋಮಶೇಖರ ಪುರಾಣ ಕ,ಸಿದ್ದರಾಮಯ್ಯ ಪುರಾಣ ಕ, ಶಾಂತಾ ಮಠ, ಸಂಗಮೇಶ್ವರಿ ಎಂ.ಬೀಳಗಿಮಠ, ನೇಸರ ಎಂ.ಬೀಳಗಿಮಠ, ಚೈತ್ರಾ ಎನ್.ಬೀಳಗಿಮಠ, ಪ್ರಕೃತಿ ಎಂ.ಬೀಳಗಿಮಠ, ಮಲ್ಲಿಕಾರ್ಜುನ ಕಾಖಂಡಕಿ ಸೇರಿದಂತೆ ಬೀಳಗಿಮಠ ಪರಿವಾರದ ಬಂಧುಗಳು, ಮಿತ್ರರು, ಹಿತೈಸಿಗಳು, ಮಠದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.