ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ: ಮಾಜಿ ಸಚಿವ ರೇವೂನಾಯಕ್ ಬೆಳಮಗಿ

ಮಕ್ಕಳಿಗೆ ಉತ್ತಮ  ಶಿಕ್ಷಣ ನೀಡಿ: ಮಾಜಿ ಸಚಿವ ರೇವೂನಾಯಕ್ ಬೆಳಮಗಿ

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ: ಮಾಜಿ ಸಚಿವ ರೇವೂನಾಯಕ್ ಬೆಳಮಗಿ

          ಇಂದು ಕಲ್ಬುರ್ಗಿಯ ಜಿಲ್ಲೆಯ ಕಮಲಾಪುರ್ ತಾಲೂಕಿನ ಮಹಗಾಂವ ಕ್ರಾಸ್ ಬಳಿ ಶ್ರೀ ಸಂತ ಸೇವಾಲಾಲ್ 286ನೇ ಮಹಾರಾಜರು ಜಯಂತಿ ಆಚರಣೆ ಮಾಡಲಾಯಿತು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಮತ್ತು ಉದ್ಘಾಟನೆ ಪೂಜ್ಯ ಶ್ರೀ ವಿರೂಪಾಕ್ಷ ದೇವ್ರು ಕಳ್ಳಿಮಠ ಮಹಾಗಾಂವ್ ಪೂಜ್ಯಶ್ರೀ ಶಂಕರ್ ಮಹಾರಾಜರು ಮಡಿಕಿ ತಾಂಡ ಹಾಗೂ ಅಧ್ಯಕ್ಷತೆ ವಹಿಸಿದ ಕರ್ನಾಟಕ ಸರ್ಕಾರದ ಮಾಜಿ ಸಚಿವ ರೇವೂನಾಯಕ್ ಬೆಳಮಗಿ ಕಾರ್ಯಕ್ರಮದ ಉದ್ದೇಶಿಸಿ ಮಾತಾಡಿ ಸಂತ ಸೇವಾಲಾಲ್ ಮಹಾರಾಜ್ ಅವರು ಭಾರತೀಯ ಸಾಮಾಜಿಕ-ಧಾರ್ಮಿಕ ಸುಧಾರಕ ಮತ್ತು ಸಮುದಾಯದ ನಾಯಕರಾಗಿದ್ದರು. ಇವರು ಗೋರ್ ಬಂಜಾರ ಸಮುದಾಯದಿಂದ ಆಧ್ಯಾತ್ಮಿಕ ಗುರು ಎಂದು ಗೌರವಿಸಲ್ಪಡುತ್ತಾರೆ.

 ಸಂತ ಸೇವಾಲಾಲ್ ಮಹಾರಾಜ್ ಅವರು 1739 ಫೆಬ್ರವರಿ 15ರಂದು ಜನಿಸಿದರು.

 ಇವರ ತಂದೆ ಭೀಮಾ ನಾಯ್ಕ್ ಮತ್ತು ತಾಯಿ ಧರಮಣಿ ಯಾದಿ.

 ಇವರು 1806 ಡಿಸೆಂಬರ್ 4ರಂದು ನಿಧನರಾದರು.

 ಸಂತ ಸೇವಾಲಾಲ್ ಮಹಾರಾಜ್ ಅವರು ಬಂಜಾರ ಸಮುದಾಯದ ಆರಾಧ್ಯ ದೈವವಾಗಿದ್ದಾರೆ.

 ಅವರು ಸಮಾಜದ ಪ್ರಗತಿಯಲ್ಲಿ ಧರ್ಮದ ಪಾತ್ರವನ್ನು ಒತ್ತಿ ಹೇಳಿದವರು.

 ಅವರು ತಮ್ಮ ಪವಾಡ, ಲೀಲೆಗಳನ್ನು ಪ್ರದರ್ಶನ ಮಾಡುತ್ತಾ, ಜನ ಮನದಲ್ಲಿ ಗುರುವಿನ ಸ್ಥಾನ ಪಡೆದವರು.

 ಜನತೆಗೆ ವ್ಯಸನ ಮುಕ್ತರಾಗಿ ಎಂದು ಬೋಧಿಸಿದ ಸೇವಾಲಾಲರು ಸತ್ಯ, ಅಹಿಂಸೆ, ತ್ಯಾಗ ಮನೋಭಾವದ ನೀತಿ ಮಾತು ಹೇಳಿದ್ದರು.

 ಭರತ ಖಂಡದ ಧಾರ್ಮಿಕ ರಾಯಭಾರಿ ಎಂದೇ ಹೆಸರಾಗಿದ್ದ ಸಂತ ಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು.

 ಜನರ ಅಂಧಕಾರ ಹೋಗಲಾಡಿಸಿದವರು.

ಸಂತ ಸೇವಾಲಾಲ್ ಮಹಾರಾಜ್ ಅವರ ಜನ್ಮಸ್ಥಳದ ಬಗ್ಗೆ ಕೆಲವು ಭಿನ್ನಾಭಿಪ್ರಾಯಗಳಿವೆ. ಕೆಲವು ಮೂಲಗಳ ಪ್ರಕಾರ, ಅವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸೂರಗೊಂಡನಕೊಪ್ಪದಲ್ಲಿ ಜನಿಸಿದರು. ಇತರ ಮೂಲಗಳ ಪ್ರಕಾರ, ಅವರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗುತ್ತಿ ತಾಲ್ಲೂಕಿನ ಸೇವಾಗಡದಲ್ಲಿ ಜನಿಸಿದರು. ಕಾರ್ಯಕ್ರಮದಲ್ಲಿ ಆಸೆ ನುಡಿ ಶ್ರೀ ವಿಶ್ವನಾಥ್ ಠಾಕೂರ್ ಶಿಕ್ಷಕರು ಕುರಿತು ಸೇವಾಲಾಲ ವಿಚಾರಗಳನ್ನು ಮಂಡಿಸಿದರು ಕಾರ್ಯಕ್ರಮದ ಸ್ವಾಗತ ರಾಜಕುಮಾರ್ ಚೌಹಾಣ್ ನೆರವೇರಿಸಿದರೂ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಮೇಶ್ ನಾಯಕ್ ಗಿರೀಶ್ ಮಾಲಿ ಪಾಟೀಲ್ ಮನಿಷಾ ನಂದುಕುಮಾರ್ ಗೋರಕ್ನಾಥ್ ರಾಥೋಡ್ ಜಗದೇವಿ ಚೌಹಾಣ್ ಸವಿತಾ ಚೌಹಾನ್ ಮಹೇಶ್ ರಾಜಕುಮಾರ್ ಕೆ ಕಾಂತು ರಾಥೋಡ್ ಲಿಂಗಪ್ಪ ಪ್ರಬುದ್ಕರ್ ಅನೇಕ ಗಣ್ಯರು ಸಮಾಜದ ಮುಖಂಡರು ಮಹಿಳೆಯರು ಮಕ್ಕಳು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ ಜರಿಗಿತ್ತು ಕಾರ್ಯಕ್ರಮದ ನಿರೂಪಣೆ ಅಶೋಕ್ ಕೋಟೆ ನೆರವೇರಿಸಿದ್ದಾರು ವರದಿ: ಮಛಂದ್ರನಾಥ ಕಾಂಬ್ಳೆ ಬೀದರ್