ದಲಿತರಿಗೆ ಭೂಮಿ ವಸತಿ ನೀಡಿ : ಶರಣಬಸಪ್ಪ ಕಸನಕರ

ದಲಿತರಿಗೆ ಭೂಮಿ ವಸತಿ ನೀಡಿ : ಶರಣಬಸಪ್ಪ ಕಸನಕರ

ದಲಿತರಿಗೆ ಭೂಮಿ ವಸತಿ ನೀಡಿ : ಶರಣಬಸಪ್ಪ ಕಸನಕರ

ಆಳಂದ : ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಮಿತಿ ಹಾಗೂ ಜಿಲ್ಲಾ ಸಮಿತಿ ಆದೇಶದ ಮೇರೆಗೆ ಆಳಂದ ತಾಲೂಕು ಪ್ರಧಾನ ಸಂಚಾಲಕರ ಶರಣಬಸಪ್ಪ ಕಸನಕರ ಅವರ ನೇತೃತ್ವದಲ್ಲಿ ದಲಿತರ ಭೂಮಿ ವಸತಿ ಹಕ್ಕಿಗಾಗಿ ಮತ್ತು ಇತರೆ ಹಕ್ಕೊತ್ತಾಯಗಳ ಕುರಿತು ಆಳಂದ ತಹಸಿಲ್ದಾರ ಅಣ್ಣಾರಾವ ಪಾಟೀಲ್ ಅವರಿಗೆ ಮನವಿ ಪತ್ರ ನೀಡಲಾಯಿತು. 

ಪರಿಶಿಷ್ಟ ಜಾತಿ ಹಾಗೂ ಭೂರಹಿತ ತಳ ಸಮುದಾಯಗಳು ಉಳುಮೆ ಮಾಡುತ್ತಿರುವ ಬಗರ್ ಹುಕುಂ ಸಾಗುವಳಿ ದರಖಾಸ್ತು ಮಂಜು ರಾತಿ ಸಕ್ರಮೀಕರಣ ಕಾಲಮಿತಿಯೊಳಗೆ ಇತ್ಯರ್ಥಗೊಳಿಸಬೇಕು,ವಿನಾಕಾರಣ ವಜಾಗೊಳಿಸುವ ಬಗರ ಹುಕುಂ ಅರ್ಜಿಗಳನ್ನು ಮರುಪರಿಶೀಲನೆ ಮಾಡಬೇಕು,ಪರಿಶಿಷ್ಟ ಪಿ .ಟಿ. ಸಿ. ಎಲ್. ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯನ್ನು ಮಾನ್ಯ ಮಾಡದ ಕಂದಾಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆ ನೀಡಬೇಕು ಪಿಟಿಸಿಎಲ್ ಪ್ರಕರಣಗಳು ವಜಾಗೊಳ್ಳುತ್ತಿದ್ದು ನುರಿತ ಹಿರಿಯ ವಕೀಲರನ್ನು ನೇಮಿಸಿ ಈ ಪ್ರಕರಣಗಳನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬೇಕು20 -30 ವರ್ಷಗಳಿಂದ ಸಾಗುವಳಿ ಮಾಡಿದ ಎಲ್ಲಾ ರೈತರಿಗೆ ಹಕ್ಕು ಪತ್ರ ವಿತರಣೆ ಮಾಡಬೇಕು,

ಪರಿಶಿಷ್ಟರ ಮೇಲಿನ ದೌರ್ಜನ್ಯಪ್ರಕರಣ ನಿರ್ವಹಣೆಗೆ ಸರಕಾರ ಸ್ಥಾಪಿಸಿರುವ ಡಿಸಿಆರ್‌ಇ ಪೊಲೀಸ್ ಠಾಣೆಗಳಿಗೆ ಅಗತ್ಯವಿರುವ ಸಿಬ್ಬಂದಿ ಮತ್ತು ಮೂಲಭೂತ ಸೌಕರ್ಯ ಒದಗಿಸಬೇಕು ಎಸ್ಪಿ ಸಿ ಎಸ್ ಪಿ -ಟಿ ಎಸ್ ಪಿ ನಿರ್ವಹಣೆಗೆ ಪ್ರತ್ಯೇಕ ನಿರ್ದೇಶನಲಯ ಅಥವಾ ಏಕಗವಾಕ್ಷಿ ಯೋಜನೆ ವ್ಯವಸ್ಥೆ ಜಾರಿಗೆ ಗೊಳಿಸಬೇಕು

ಸಮಾಜ ಕಲ್ಯಾಣ ಇಲಾಖೆ ಅಡಿಯ ವಿದ್ಯಾರ್ಥಿ ನಿಲಯಗಳನ್ನು ಉನ್ನತಿಕರಣಗೊಳಿಸಿ,ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು ಎಂದು ತಹಸಿಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಆಳಂದ ತಾಲೂಕಿನ ಪ್ರಧಾನ ಸಂಚಾಲಕರಾದ ಶರಣಬಸಪ್ಪ ಕಸನಕರ . ಹೊನ್ನಪ್ಪ ಹಾಗರಗಿಸಂಘಟನಾ ಸಂಚಾಲಕರು,ಜೈ ಭೀಮ್ ಹರ್ಸೂರೆ,ದತ್ತಾ ಮೇಲಿನಕೇರಿ ಸಂಘಟನಾ ಸಂಚಾಲಕರು,ಅರ್ಜುನ್ ಸರ್ಪಂಚ್ ಸಂಘಟನಾ ಸಂಚಾಲಕರು ಮುಂತಾದವರು ಉಪಸ್ಥಿತರಿದ್ದರು.

ವರದಿ ಡಾ .ಅವಿನಾಶ S ದೇವನೂರ