ಪ್ರಸಾದ ವಿತರಿಸಿದ ಮಕ್ಕಳ ಕೈಗಳಿಗೆ ದಿವ್ಯ ಶಕ್ತ ನೀಡಲಿ ಅಪ್ಪ ಶಿವರಾಜ ಅಂಡಗಿ
ದಾಸೋಹ ವಿತರಣಾ ಕಾರ್ಯದಲ್ಲಿ ಮಹಿಳಾ ದಿನಾಚರಣೆ
ಪ್ರಸಾದ ವಿತರಿಸಿದ ಮಕ್ಕಳ ಕೈಗಳಿಗೆ ದಿವ್ಯ ಶಕ್ತ ನೀಡಲಿ ಅಪ್ಪ-ಶಿವರಾಜ ಅಂಡಗಿ
ಪ್ರಾರ್ಥಿಸುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳೇ ಶ್ರೇಷ್ಠ ಅನ್ನುವಂತೆ ಹಿಂದೆಂದೂ ಕಾಣದಂತ ಪ್ರಸಾದ ಪರಂಪರೆಯ ಪ್ರಸಾದ ವಿತರಣೆ ಕಲಬುರಗಿಯಲ್ಲಿ ಸಾವಿರಾರು ಭಕ್ತರು ಅಪ್ಪನ ಗುಡಿಯ ಮಾರ್ಗದಲ್ಲಿ ಪ್ರಸಾದ ವಿತರಿಸಿ, ಪ್ರಸಾದ ಅಷ್ಟೇ ಅಲ್ಲ, ನೀರು, ಮಜ್ಜಿಗೆ ಜ್ಯೂಸ್, ಹಣ್ಣು ಹಂಪಲು ವಿತರಿಸುವ ಮೂಲಕ ದಾಸೋಹ ಪರಂಪರೆ ಇಮ್ಮಡಿಗೊಳಿಸಿದ ಭಕ್ತ ಮಕ್ಕಳ ಕೈಗಳಿಗೆ ದಿವ್ಯ ಚೇತನ ನೀಡಲಿ ಎಂದು ದಾಸೋಹ ಮೂರ್ತಿ ಶ್ರೀ ಶರಣಬಸವೇಶ್ವರ ದೇವರಲ್ಲಿ ಶಿವರಾಜ ಅಂಡಗಿರವರು ಪ್ರಾರ್ಥನೆ.
ತನಗಾಗಿ ಮಾಡುವುದು ಜೀವನ, ತನಗಲ್ಲದೇ ಪರ ಹಿತಕ್ಕಾಗಿ ಮಾಡುವುದು ಒಳ್ಳೆಯ ಜೀವನ, ಪರಹಿತದಲ್ಲಿ ಪರಮಾತ್ಮನನ್ನು ಕಾಣುವುದೇ ದಾಸೋಹ ಜೀವನ ಅಂತಹ ಜೀವನ ನಡೆಸಿ ದಾಸೋಹ ಪರಂಪರೆಗೆ ನಾಂದಿ ಹಾಡಿದ ಶರಣಬಸಪ್ಪ ಅಪ್ಪಾ ಅವರ ದಾಸೋಹ ಪರಂಪರೆ ಇಮ್ಮಡಿಗೊಳಿಸುತ್ತಿರುವ ಮಕ್ಕಳ ಕೈಗಳಿಗೆ ದಿವ್ಯ ಶಕ್ತಿ ನೀಡಿ ಆಯುಷ್ಯ ಆರೋಗ್ಯ ನೀಡಿ ಕಾಪಾಡಲಿ ಎಂದು ಮಹಾದಾಸೋಹಿ ಶರಣಬಸವೇಶ್ವರ ಭಾವಚಿತ್ರ ಭಕ್ತರಿಗೆ ನೀಡಿ ದೇವರಲ್ಲಿ ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ಜಗತ್ ವೃತ್ತದಲ್ಲಿ ಪಬ್ಲಿಕ್ ಉದ್ಯಾನವನದಲ್ಲಿ ಯೋಗಾ ಟೀಮ್‌ನ ಸದಸ್ಯರು ಹಾಗೂ ಲಕ್ಷ್ಮೀ ಜರಾಕ್ಸ್ ಸೆಂಟರ್ ಸಂಯುಕ್ತಾಶ್ರಯದಲ್ಲಿ ಪ್ರಸಾದ ವಿತರಿಸುವ ಸಂದರ್ಭದಲ್ಲಿ ಹಿರಿಯ ಜೀವಿ ಶ್ರೀಮತಿ ಶಾರದಾಬಾಯಿ ಶಿವಶರಣಪ್ಪ ಚೌಡಪ್ಪಗೋಳ ಅವರಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯ ಅಂಡಗಿ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗಂಗಾಧರ ಚೌಡಪ್ಪಗೋಳ, ಶರಣಗೌಡ ಬಿರಾದಾರ, ಮಲ್ಲಿಕಾರ್ಜುನ ಸಂಗಶೆಟ್ಟಿ ರಾಜಾಪೂರ, ಸಂಗಪ್ಪ ಚೌರಗಸ್ತಿ ಭೀಮಳ್ಳಿ, ಶ್ರೀನಿವಾಸ ಮಹೇಂದ್ರಕರ್, ಆನಂದ ಪಾಟೀಲ, ಪ್ರಶಾಂತ ಕುಲಕರ್ಣಿ, ಸೋಮನಾಥ ದುಪ್ಪಡ, ಗುರುರಾಜ ಕುಲಕರ್ಣಿ, ನಾಗರಾಜ ಜಿಗಾವನ, ಮಹೇಶ ಕುಕ್ಕಂದ, ಆರ್.ಎಸ್. ಪಾಟೀಲ, ಚಂದ್ರಕಾಂತ ಶಿವಶರಣಪ್ಪ ಕಲ್ಯಾಣಿ, ಜ್ಯೋತಿ ಹೆಬ್ಬಾಳ, ಸಂಗೀತಾ ಚೌಡಪ್ಪಗೋಳ ಉಪಸ್ಥಿತರಿದ್ದರು.
