ಮತದಾರರ ಪ್ರಾಮಾಣಿಕತೆ, ಪ್ರತಿನಿಧಿಗಳ ಸೇವಾ ಮನೋಭಾವದಿಂದ ಪ್ರಜಾಪ್ರಭುತ್ವ ಗಟ್ಟಿಗೊಳಿಸಬಹುದು – ಚಿತ್ರಲೇಖಾ ಟೇಂಗಳಿಕರ

ಮತದಾರರ ಪ್ರಾಮಾಣಿಕತೆ, ಪ್ರತಿನಿಧಿಗಳ ಸೇವಾ ಮನೋಭಾವದಿಂದ ಪ್ರಜಾಪ್ರಭುತ್ವ ಗಟ್ಟಿಗೊಳಿಸಬಹುದು – ಚಿತ್ರಲೇಖಾ ಟೇಂಗಳಿಕರ
ಮತದಾರರ ಪ್ರಾಮಾಣಿಕತೆ, ಪ್ರತಿನಿಧಿಗಳ ಸೇವಾ ಮನೋಭಾವದಿಂದ ಪ್ರಜಾಪ್ರಭುತ್ವ ಗಟ್ಟಿಗೊಳಿಸಬಹುದು – ಚಿತ್ರಲೇಖಾ ಟೇಂಗಳಿಕರ

ಕಲಬುರಗಿ:“ಮತದಾರರು ಪ್ರಾಮಾಣಿಕತೆ ಮೆರೆದರೆ, ಜನಪ್ರತಿನಿಧಿಗಳು ಸೇವಾ ಮನೋಭಾವ ಬೆಳೆಸಿಕೊಂಡರೆ ಮಾತ್ರ ಪ್ರಜಾಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು” ಎಂದು ಎಂ.ಎ. ಟೇಂಗಳಿಕರ ಕಾಲೇಜಿನ ಅಧ್ಯಕ್ಷರಾದ ಚಿತ್ರಲೇಖಾ ಟೇಂಗಳಿಕರ ಅಭಿಪ್ರಾಯಪಟ್ಟರು.

ಜಾತಿ, ಹಣ ಹಾಗೂ ಪ್ರವರ್ಗಗಳ ಸಂಘರ್ಷದಿಂದ ಇಂದಿನ ರಾಜಕೀಯ ಸ್ವರೂಪ ಬದಲಾಗುತ್ತಿದೆ. ಗ್ರಾಮ, ತಾಲೂಕು, ಜಿಲ್ಲಾಮಟ್ಟದ ರಾಜಕೀಯ ಸಮಾರಂಭಗಳಲ್ಲಿ ಹುಟ್ಟುಹಬ್ಬ, ಹರಿದಿನ ಹಾಗೂ ಪುಣ್ಯತಿಥಿಗಳ ಆಚರಣೆಯಲ್ಲಿ ರಾಜಕೀಯ ಬೆರೆತು ಸಂಬಂಧಗಳು ಕಳಚುತ್ತಿರುವುದಕ್ಕೆ ಮತದಾರರ ನಿಷ್ಕಾಳಜಿಯೇ ಕಾರಣ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಆಮಿಷಕ್ಕೊಳಗಾಗದೆ ಸಮಾಜಮುಖಿ ವ್ಯಕ್ತಿಗಳಿಗೆ ಬಹುಮತ ನೀಡಿ ಆಯ್ಕೆ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವ ಬಲವಾಗುತ್ತದೆ ಎಂದು ಅವರು ಹೇಳಿದರು.

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ 17-09-2025ರಂದು ಸರಸ್ವತಿಪುರಂ ಬಡಾವಣೆಯ ಎಂ.ಎ. ಟೇಂಗಳಿಕರ ಕಾಲೇಜಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅಂಡಗಿ ಪ್ರತಿಷ್ಠಾನ ಟೇಂಗಳಿ ಅಧ್ಯಕ್ಷ ಶಿವರಾಜ ಅಂಡಗಿ, “ಇಡೀ ಜಗತ್ತಿನಲ್ಲಿಯೇ ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆ ಭಾರತದಲ್ಲಿದೆ. ವಿಶೇಷವಾಗಿ ಯುವಕರು ಸಂವಿಧಾನ ನೀಡಿರುವ ಹಕ್ಕು-ಜವಾಬ್ದಾರಿಗಳನ್ನು ತಿಳಿದುಕೊಳ್ಳುವುದು ಅವಶ್ಯ, ಜೊತೆಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಮಕ್ಕಳ ಭವಿಷ್ಯ ಕಟ್ಟಲು ಮಹತ್ವದ್ದಾಗಿದೆ. ಏಕೆಂದರೆ ಇಂದಿನ ಮಕ್ಕಳು ನಾಳಿನ ನಾಗರಿಕರು” ಎಂದರು.

ನಿವೃತ್ತ ಪ್ರಾಚಾರ್ಯರು ದೇವಿಂದ್ರಪ್ಪ ಸಲಗರ, ಸಿದ್ರಾಮ ತಾವರಖೇಡ, ವಿರೇಶ ಮಾಲಿಪಾಟೀಲ, ಶುಭವರ್ಧನ ಟೇಂಗಳಿಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಕಾರ್ಯದರ್ಶಿ ಶುಭವರ್ಧನ ಟೇಂಗಳಿಕರ ಸ್ವಾಗತಿಸಿದರು. ಶ್ರೀಮತಿ ಶ್ರೀಲಕ್ಷ್ಮಿ ದೀಕ್ಷಿತ ವಂದಿಸಿದರು.

ಕಾರ್ಯಕ್ರಮದಲ್ಲಿ ಸಂದ್ಯಾ ವಳಕೇರಿ, ಭೂಮಿಕಾ ಗಾರಂಪಳ್ಳಿ, ಗಿರೀಶ, ವರುಣ ಬಬಲಾದ, ಶಶಿಕುಮಾರ ಹಾಗೂ ಅನೇಕ ವಿದ್ಯಾರ್ಥಿಗಳು ಹಾಜರಿದ್ದರು. ಅಂತಿಮವಾಗಿ ಅತಿಥಿಗಳು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸಾಮೂಹಿಕವಾಗಿ ಪ್ರಜಾಪ್ರಭುತ್ವ ಪ್ರತಿಜ್ಞಾ ಪ್ರಮಾಣವಚನ ಸ್ವೀಕರಿಸಿದರು.