ಹೊಳೆ ಸಮುದ್ರ ಗ್ರಾಮದಲ್ಲಿ ಹರಿನಾಥರ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಿತು

ಹೊಳೆ ಸಮುದ್ರ ಗ್ರಾಮದಲ್ಲಿ ಹರಿನಾಥರ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಿತು

ಹೊಳೆ ಸಮುದ್ರ ಗ್ರಾಮದಲ್ಲಿ ಹರಿನಾಥರ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಿತು

ಶನಿವಾರ ಬೆಳಗ್ಗೆ ಶ್ರೀ ಸದ್ಗುರು ಹರಿನಾಥ ಮಹಾರಾಜ ಮಂದಿರದಿಂದ ಭಕ್ತರ ಸಮ್ಮುಖದಲ್ಲಿ ಶ್ರೀ ಅಲಂಕಾರ ಮಾಡಿದ ಪಲ್ಲಕ್ಕಿ ಹೂವುಗಳಿಂದ ಪಲ್ಲಕ್ಕಿಯಲ್ಲಿ ಶ್ರೀ ಸದ್ಗುರು ಹರಿನಾಥ ಮಹಾರಾಜ ಮೂರ್ತಿಯನ್ನು ಕೂಡಿಸಿವಿಶೇಷವಾಗಿ ಸಂಕಲ ವಾದ್ಯ ಮೆರವಣಿಗೆ ಭಜನೆ ಮೇಳಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಭಕ್ತರ ಜಯ ಘೋಷಗಳೊಂದಿಗೆ ಸಡಗರ ಸಂಭ್ರಮದಿಂದ ರಾಮ ಮಂದಿರದ ಸಂಭಾಂಗಣಕ್ಕೆ ಬಂದು ತಲುಪಿತು. 

ದಾರಿಯುದ್ದಕ್ಕೂ ಪಲ್ಲಕ್ಕಿ ಗೆ ಪೂಜೆ ಸಲ್ಲಿಸಿ ಭಕ್ತಿಯಿಂದ ನಮಸ್ಕರಿಸಿ ಕಾಣಿಕೆ ಸಮರ್ಪಿಸಿದರು.

ಸಭಾಂಗಣದಲ್ಲಿ ಸುಮಾರು ಸಮಯದವರೆಗೆ ಬಾಂರುಡ ಸ್ಪರ್ಧೆ ಕಾರ್ಯಕ್ರಮ ನೆರವೇರಿತು.ಕರ್ನಾಟಕ ಅಲದೆ ಮಾಹಾರಾಷ್ಟದ ಚಾಕೂರ ,ನಳೆಗಾಂವ,ಬಟನಸೂರ ಕಲಾವಿದರು ಆಗಮಿಸಿದರು ಸ್ಪರ್ಧೆಯಲ್ಲಿ ಭಾಗವಹಿಸಿದ ಕಲಾವಿದರಿಗೆ ಸತ್ಕರಿಸಿದರು.ಗ್ರಾಮದ ಸದ್ಧಭಕ್ತರು ಪಾಲ್ಗೊಂಡಿದ್ದರು.

ಸಾಮಾಜಿಕ ಆರ್ಥಿಕ ಸಂಸ್ಕೃತಿಕ ಶೈಕ್ಷಣಿಕ ಕ್ಷೇತ್ರಗಳಲ್ಲಿರುವ ವಿಷಯಗಳನ್ನು ಕುರಿತು ಬಾಂರುಡ ಕಾರ್ಯಕ್ರಮವು ಬಹಳ ವಿಶಿಷ್ಟ ರೀತಿಯಲ್ಲಿ ಜರಗಿತು.

ತದನಂತರ ಊರು ಎದುರುಗಡೆ ಇರುವ ಹನುಮಾನ ಮಂದಿರ ದೇವರಿಗೆ ಆರತಿ ಬೆಳಗುವುದರೊಂದಿಗೆ "ಗೊಪಾಳಕಾಲಾ ಗೊಡಝಾಲಾ' ಎಂದೆನ್ನುತ್ತಾ ಮತ್ತೆ ಮೆರವಣಿಗೆ ಹರಿನಾಥ ಮಹಾರಾಜ ಮಂದಿರಕ್ಕೆ ತಲುಪಿ ಮುಕ್ತಾಯ ಗೊಳುತ್ತದೆ.

ಲಖನಗಾಂವ, ಲಾಸೋನ, ಗುರ್ನಾಳ,ದೇವಣಿ ಚವಣಿಪುರಗಾ,ಅಜನಿ ವಾಗ್ದಾರಿ,ತೊಗರಿ,ಮುರ್ಗ, ಖತಗಾಂವ, ರಾಂಪೂರ, 

ಬಾಳೂರು,ಮದನೂರ, ಹಕ್ಯಾಳ, ಕಮಲನಗರ,ಕೊಟ್ಯಾಳ,ತೊರಣಾ, ಡಿಗ್ಗಿ ತೋರಣಾವಾಡಿ, ಸಂಗಮ ಖೇಡ ಬೆಳಕುಣಿ(ಭೋ) ಮುಧೋಳ ಮುಧೋಳ (ಬಿ)ಚಂದೂರಿ ತಪಸ್ಯಾಳ ಬೆಳಕುಣಿ ಅಳಂದಿ ಹಲ್ಲಾಳಿ ಚೀಮ್ಮೇಗಾಂವ , ಹೊಂದಿಕೆರ್ ಮುರ್ಕಿ ಮತ್ತು ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಪಾಲ್ಗೊಂಡಿದ್ದರು.