ಸರಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿ ವಿದ್ಯಾರ್ಥಿ ಸಂಘ ಮತ್ತು ಕ್ರೀಡಾ ಸಂಘಗಳ ಉದ್ಘಾಟನೆ
ಕಲಬುರಗಿ: ೦೮ ನೇ ಆಗಸ್ಟ್,
ನಗರದ ಸರಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿ ಇಂದು ಬೆಳಿಗ್ಗೆ 11.00 ಘಂಟೆಗೆ ವಿದ್ಯಾರ್ಥಿ ಸಂಘ ಮತ್ತು ಕ್ರೀಡಾ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಯುವುದು ಬಹಳ ಮುಖ್ಯವಾಗಿದೆ.
ದಾಸರು, ಶರಣರು ಖ್ಯಾತ ಕವಿ ಹಾಗೂ ದಾರ್ಶನಿಕರನ್ನು ವಿಶ್ವಕ್ಕೆ ನೀಡಿದ ನಮ್ಮ ರಾಷ್ಟ್ರವು ಅತ್ಯುತ್ತಮ ಸಂಸ್ಕಾರದಿಂದಾಗಿ ವಿಶ್ವಗುರುವಾಗಿದೆ ಎಂದು ಅಭಿಪ್ರಾಯಪಟ್ಟರು.
ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಬದುಕಿಗೆ ಮಾನವೀಯ ಮೌಲ್ಯಗಳನ್ನು ಬೋಧಿಸಬೇಕಿದೆ ಎಂದು ಹೇಳಿದರು.
ವಿಶ್ವದ ಮುಂದುವರೆದ ರಾಷ್ಟ್ರಗಳಾದ ರಷ್ಯಾ, ಜರ್ಮಿನಿ, ಅಮೇರಿಕಾ ಮುಂತಾದ ದೇಶಗಳು ಭಾರತೀಯ ಮೌಲ್ಯಗಳನ್ನು ಅಳವಡಿಸಿಕೊಂಡರೆ ಭಾರತೀಯರಾದ ನಾವು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ವಿಪರ್ಯಾಸವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಹಾಗೂ ಶಾಲೆಯ ಪ್ರಾಚಾರ್ಯ ಡಾ.ಕೆ.ಗಿರಿಮಲ್ಲ ಮಾತನಾಡಿ, ಸರಕಾರಿ ಕಿರಿಯ ತಾಂತ್ರಿಕ ಶಾಲೆಗಳು ಕರ್ನಾಟಕದಲ್ಲಿ ಕೇವಲ ಆರು ಶಾಲೆಗಳಿದ್ದೂ, ಅದರಲ್ಲಿ ಕಲಬುರಗಿಯ ಶಾಲೆ ಕೂಡ ಒಂದು. ಪ್ರೌಢಶಾಲಾ ಹಂತದಲ್ಲಿ ತಾಂತ್ರಿಕ ಶಿಕ್ಷಣ ನೀಡುವ ಶಾಲೆಗಳಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ.
ಮದ್ಯಮ ವರ್ಗದ ಜನರ ಇಂಜಿನಿಯರಿಂಗ್ ಕನಸು ನನಸಾಗಲು ಜೆಟಿಎಸ್ ಶಾಲೆಗಳು ಉತ್ತಮ ಅಡಿಪಾಯ ಹಾಕುತ್ತವೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪ್ರೊ.ಎಂ.ಬಿ. ಪಾಟೀಲ, ಶಾಂತಪ್ಪ ಸಂಗಾವಿ ಮಾತನಾಡಿದರು.
ಸಿದ್ದಲಿಂಗಯ್ಯ ಮಠಪತಿ, ರಾಘವೇಂದ್ರ ಪಿ.ಆರ್. ಭೀಮರಾಯ ಆರ್ ಟಿ ಓ , ಪತ್ರಕರ್ತ ಶರಣಗೌಡ ಪಾಳಾ ಅವರು ವೇದಿಕೆಯಲ್ಲಿದ್ದರು.
ಬಸವ ಪುರಸ್ಕಾರ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಕೆ.ಗಿರಿಮಲ್ಲ ಅವರನ್ನು ಸಹೋದ್ಯೋಗಿಗಳು ವಿಶೇಷವಾಗಿ ಸನ್ಮಾನಿಸಿದರು.
ಚುನಾವಣಾ ಪ್ರಕ್ರಿಯೆ ಮೂಲಕ ಆಯ್ಕೆಗೊಂಡ ವಿದ್ಯಾರ್ಥಿ ಪ್ರತಿನಿಧಿಗಳನ್ನು ಹೂಗೂಚ್ಛ ನೀಡಿ ಗೌರವಿಸಲಾಯಿತು.
ಸಿಬ್ಬಂದಿ ವರ್ಗದ ರಾಕೇಶ ಚವ್ಹಾಣ ನಿರೂಪಿಸಿದರು. ಬಸವರಾಜ ಸ್ವಾಗತಿಸಿದರು. ಶಿವರಾಜ ಪಾಟೀಲ ವಂದಿಸಿದರು. ಕಾರ್ಯಕ್ರಮದಲ್ಲಿ
ನಾಸರಸದ್, ಬಾವುರಾವ ಪಾಟೀಲ, ಸುವರ್ಣ ಚಟೇರ, ಉಮಾಶ್ರೀ, ಸುನಂದಾ ನಿರೋಣಿ, ಅನುಲತಾ, ಸುನಂದಾ ಬಿರಾದಾರ, ಸಂಧ್ಯಾರಾಣಿ, ಚನ್ನಬಸಪ್ಪ, ಪ್ರಿಯಾ, ಸುಧಾರಾಣಿ, ಶಾಮ್ ಮಾನೆ ಸೇರಿದಂತೆ ಪಾಲಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.