ಹೈ.ಕ.ಶಿ. ಸಂಸ್ಥೆಯ ಬಸವೇಶ್ವರ ಬೋಧನಾ ಮತ್ತು ಸಾರ್ವಜನಿಕ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಹೈ.ಕ.ಶಿ. ಸಂಸ್ಥೆಯ ಬಸವೇಶ್ವರ ಬೋಧನಾ ಮತ್ತು ಸಾರ್ವಜನಿಕ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಬಸವೇಶ್ವರ ಭೋದನಾ ಹಾಗೂ ಸಾರ್ವಜನಿಕ ಆಸ್ಪತ್ರೆಯು ಕಲ್ಯಾಣ ಕರ್ನಾಟಕ ಭಾಗದ ಜನರಿಗಾಗಿ “ಕಾಮಲೆ ರೋಗ ಮತ್ತು ಯಕೃತ (ಲಿವರ್)” ಸಂಬಂಧಿತ ಕಾಯಿಲೆಗಳನ್ನು ಪತ್ತೆ ಹಚ್ಚುವ ಉಚಿತ ಆರೋಗ್ಯ ತಪಾಸಾಣಿ ಮತ್ತು ಚಿಕಿತ್ಸಾ ಶಿಬಿರವನ್ನು 2 ನೇ ಡಿಸೆಂಬರ್ 2024 ಸೋಮವಾರದಂದು ಹಮ್ಮಿಕೊಳ್ಳಲಾಗಿದೆ.ಸಮಯ ಬೆಳಗ್ಗೆ 9 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ. ಉಸಿರಾಟದ ತೊಂದರೆ. ಹೃದಯ ಸಂಬಂಧಿತ ಸಮಸ್ಯೆಗಳು, ರಕ್ತಹೀನತೆ ಸಮಸ್ಯೆ, ಸಕ್ಕರೆ ಕಾಯಿಲೆ,ಅಧಿಕ ರಕ್ತದೊತ್ತಡ, ಅಸ್ತಮಾ,ಟಿ.ಬಿ,ಕಾಮಲೆ.ನರರೋಗ ಇನ್ನಿತರ ಸಾಮಾನ್ಯ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿತ ಕಾಯಿಲೆಗಳಿಗೆ, ಬಸವೇಶ್ವರ ಆಸ್ಪತ್ರೆಯ ಆಯಾ ವಿಭಾಗದ ಪರಿಣಿತ ವೈದ್ಯರು ಈ ಶಿಬಿರದಲ್ಲಿ ಪಾಲ್ಗೊಂಡು ಉಚಿತ ತಪಾಸಣೆ,ಸಲಹೆ ನೀಡುವರು.
ಆಸ್ಪತ್ರೆಯ ಒಳರೋಗಿಯಾಗಿ ಭರ್ತಿಯಾದ ರೋಗಿಗಳಿಗೆ ಉಚಿತ ನೊಂದಣಿ,ತಪಾಸಣೆ,ಸಲಹೆ, ಔಷದೋಪಚಾರ, ಅವಶ್ಯಕ ರಕ್ತ ಪರೀಕ್ಷೆ (HB, Urine Routine, Blood Group, RBS, HBSAG, HIV) (Ultra Sound) - (X-RAY) ತಪಾಸಣೆಯನ್ನು ಉಚಿತವಾಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಮಾಡಲಾಗುವದು.
ಉಚಿತ ತಪಾಸಣಾ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಶಶೀಲ್.ಜಿ.ನಮೋಶಿ, ಉಪಾಧ್ಯಕ್ಷರಾದ ಶ್ರೀ ರಾಜಾ ಭೀಮಳ್ಳಿ ಮತ್ತು ಕಾರ್ಯದರ್ಶಿಗಳಾದ ಶ್ರೀ ಉದಯ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ.ಕೈಲಾಶ್ ಪಾಟೀಲ್, ಬಸವೇಶ್ವರ ಭೋದನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ಸಂಚಾಲಕರಾದ ಡಾ. ಕಿರಣ್ ದೆಶಮುಖ್, ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಮಹಾದೇವಪ್ಪಾ ರಾಂಪೂರೆ ವೈದ್ಯಕೀಯ ಮಹಾವಿಧ್ಯಾಲಯದ ಡೀನ್‌ರಾದ ಡಾ.ಶರಣಗೌಡ ಪಾಟೀಲ್, ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಆನಂದ ಗಾರಂಪಳ್ಳಿ, ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ.ಸುರೇಶ ಹರಸೂರ ಅವರು ಈ ಮೂಲಕ ಎಲ್ಲ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾಧ್ಯಮ ಸಂಯೋಜಕ ಐ ಕೆ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ