ಕಸ ತಾನಾಗಿ ಬೆಳೆಯುತ್ತದೆ, ದೇವರ ಬೆಳೆಗೆ ಶ್ರಮ ಅಗತ್ಯ" : ಶರಣಬಸವ ಸ್ವಾಮಿಗಳ ಸಂದೇಶ
ಕಸ ತಾನಾಗಿ ಬೆಳೆಯುತ್ತದೆ, ದೇವರ ಬೆಳೆಗೆ ಶ್ರಮ ಅಗತ್ಯ" : ಶರಣಬಸವ ಸ್ವಾಮಿಗಳ ಸಂದೇಶ
ಕಲಬುರಗಿ, ಜೂನ್ 19,ಸಂಗವೆರದುಂಡು ಒಂದು ಹಿಡಿ, ಒಂದು ಬಿಡು – ಸಜ್ಜನರ ಸಂಗ ಹೆಜ್ಜೇನು ಸವಿದಂತೆ” ಎಂಬ ಶ್ಲೋಕವನ್ನು ಉಲ್ಲೇಖಿಸಿದ ಪೂಜ್ಯ ಶರಣಬಸವ ಸ್ವಾಮಿಗಳವರು, ಕಲಬುರ್ಗಿಯ ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ನಡೆಯುತ್ತಿರುವ ಒಂದು ತಿಂಗಳ ವಚನ ಆಷಾಢ ಪ್ರವಚನ ಮಾಲಿಕೆಯ 28ನೇ ದಿನದಂದು ಆಳವಾದ ವಚನ ಸಂದೇಶವನ್ನು ನೀಡಿದರು.
ಬೆಳಗಾವಿಯ ಬಸವ ಬೆಳವಿಯ ಚರಂತೇಶ್ವರ ಮಠದ ಪೂಜ್ಯರಾದ ಶರಣಬಸವ ಸ್ವಾಮಿಗಳು ಮಾತನಾಡುತ್ತಾ, “ಅನುಭವ ಮಂಟಪವೇ ವಿಚಾರ ಮಂಥನದ ಪೀಠಿಕೆಯಾಗಿದ್ದು, ಶರಣರ ಧರ್ಮವು ಎಲ್ಲ ಜಾತಿ ಮತಗಳ ಅಂತರವನ್ನೇ ಮುರಿದು, ಗೌರವ ಹಾಗೂ ಸ್ವಾಭಿಮಾನದ ಬದುಕನ್ನು ರೂಪಿಸುವ ಶಕ್ತಿಯಾಗಿದೆ” ಎಂದು ಅಭಿಪ್ರಾಯಪಟ್ಟರು.
ಅವರು ಮುಂದುವರೆದು, “ವಚನ ಸಾಹಿತ್ಯವು ನೈತಿಕತೆ, ವೈಚಾರಿಕತೆ, ಸಾಮಾಜಿಕ ಭಾತೃತ್ವ, ಆರ್ಥಿಕತೆ ಎಂಬುದರ ಸಮಗ್ರ ಪಠ್ಯವಾಗಿದೆ. ಮಾನವನಲ್ಲಿ ಸದ್ಗುಣ ಬೆಳೆಸಲು ಪ್ರಯತ್ನವಿರಬೇಕು, ಏಕೆಂದರೆ ದುರ್ಗುಣಗಳು ಶ್ರಮವಿಲ್ಲದೇ ತಾನಾಗಿಯೇ ಬೆಳೆಯುತ್ತವೆ” ಎಂದು ತಿಳಿಸಿದರು. ಶರೀರವೆಂಬ ಹೊಲದಲ್ಲಿ ದೇವರ ಬೆಳೆ ಬೆಳೆಯಬೇಕೆಂಬ ಉಪಮೆ ಮೂಲಕ ಭಕ್ತಿಯ ಮಾರ್ಗದ ಮಹತ್ವವನ್ನು ವಿವರಿಸಿದರು.
ಸ್ವಾಮಿಜಿಗಳ ಪ್ರವಚನದಲ್ಲಿ ಸತ್ಸಂಗ, ಇಷ್ಟಲಿಂಗ ಪೂಜೆ, ಶಿವ ಚಿಂತೆ, ಮತ್ತು ಕ್ರಿಯಾತ್ಮಕ ಜ್ಞಾನಾಚರಣೆಯ ಮಹತ್ವವನ್ನು ವಿವರಿಸಿದರು.
ಪತ್ರಿಕಾ ಸಂಪಾದಕರು ಸುಭಾಷ ಬಣಗಾರ ,ಭಿಮಾಶಂಕರ ಫೀರೋಜಾಬಾದ (ಸಂಯುಕ್ತ ಕರ್ನಾಟಕ), ಹಣಮಂತರಾಯ ಬೈರಾಮಡಗಿ (ಉದಯವಾಣಿ) , ಜಯತೀರ್ಥ ಪಾಟೀಲ (ವಿಜಯ ವಾಣಿ)ಇವರಿಗೆ ಸಮಿತಿ ಅಧ್ಯಕ್ಷ ವಿಲಾಸವತಿ ಖುಬಾ ಅವರು ಗೌರವಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸ್ವತಿ ಖೂಬಾ, ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ, ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ, ಶರಣಗೌಡ ಪಾಟೀಲ ಪಾಳಾ, ಡಾ. ಕೆ.ಎಸ್. ವಾಲಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಜೊತೆಗೆ ಹನುಮಂತರೆಡ್ಡಿ ಮುದ್ನಾಳ, ವಿಜಯಲಕ್ಷ್ಮಿ ಬಸವರಾಜ್, ಸಿದ್ದಣ್ಣ, ಉದಯಕುಮಾರ, ಗೀತಾ, ಶಾಂತಬಾಯಿ, ವೀರೇಶ ನಾಗಣ್ಣ, ಪ್ರಭು ಲಿಂಗ ಮೊದಲಾದವರು ಭಾಗವಹಿಸಿದ್ದರು.
ಪ್ರಸಾದ ದಾಶೇಯೋಗಳಿಗೆ ಗೌರವ ಸನ್ಮಾನ.
ಅನುಭವ ಮಂಟಪದಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವಿಸಿ
.