ಗ್ರಾಮ ಪಂಚಾಯತಿಯ ನಿರ್ಲಕ್ಷಕ್ಕೆ ಕೆರೆಯಾಗಿ ಮಾರ್ಪಟ್ಟ ಯಲ್ಹೇರಿ ಸರಕಾರಿ ಪ್ರೌಢಶಾಲೆ ಶಾಲೆಯ ಆಟದ ಮೈದಾನ.

ಗ್ರಾಮ ಪಂಚಾಯತಿಯ ನಿರ್ಲಕ್ಷಕ್ಕೆ   ಕೆರೆಯಾಗಿ ಮಾರ್ಪಟ್ಟ ಯಲ್ಹೇರಿ ಸರಕಾರಿ ಪ್ರೌಢಶಾಲೆ  ಶಾಲೆಯ ಆಟದ ಮೈದಾನ.

ಗ್ರಾಮ ಪಂಚಾಯತಿಯ ನಿರ್ಲಕ್ಷಕ್ಕೆ ಕೆರೆಯಾಗಿ ಮಾರ್ಪಟ್ಟ ಯಲ್ಹೇರಿ

ಸರಕಾರಿ ಪ್ರೌಢಶಾಲೆ ಶಾಲೆಯ ಆಟದ ಮೈದಾನ.

ಗುರುಮಿಠಕಲ್:- ಗುರುಮಿಠಕಲ್ ತಾಲೂಕಿನ ಯಲ್ಹೇರಿ ಸರಕಾರಿ ಹಿರಿಯ ಪ್ರೌಢ ಶಾಲೆ ಸಂಪೂರ್ಣ ಜಲಾವೃತ ಗೊಂಡಿದೆ. ಈ ಪ್ರೌಢಶಾಲೆಯಲ್ಲಿ ಸುಮಾರು 250 ಜನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಮಕ್ಕಳಿಗೆ ಮಳೆಗಾಲದಲ್ಲಿ ಶಾಲೆಯ ಮೈದಾನದಲ್ಲಿ ಆಟವಾಡಲು ಮತ್ತು ಪ್ರಾರ್ಥನೆ ಮಾಡಲು ಶಾಲೆಯ ಕೊಟ್ಟಡಿಗಳಿಗೆ ತೆರಳು ಆಗುವುದಿಲ್ಲ, ಮೈದಾನದಲ್ಲಿ ಮಳೆಯಿಂದ ತುಂಬಾ ನೀರು ನಿಂತುಕೊಳ್ಳುತ್ತದೆ ಇದರ ಬಗ್ಗೆ ಹಲವಾರು ಬಾರಿ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರು ಕೂಡ ಯಾವುದೇ ರೀತಿಯ ಪ್ರಯೋಜನ ಆಗುತ್ತಿಲ್ಲ ಎಂದು ಹೆಸರು ಹೇಳು ಇಚ್ಚಿಸದ ಶಿಕ್ಷಕರು ಹೇಳಿಕೆ ನೀಡಿದರು.

 ಈ ಶಾಲೆಯಲ್ಲಿ ಇಂತಹ ಅನಾಹುತಗಳು ಸಂಭವಿಸಿದ ಸಂದರ್ಭದಲ್ಲಿ ಕಾಟಚಾರಕ್ಕೆ ಸ್ವಲ್ಪ ಮಣ್ಣನ್ನು ಹಾಕಿ ಹಣವನ್ನು ಲೂಟಿ ಮಾಡುವ ಕೆಲಸಕ್ಕೆ ಇಳಿದಿದ್ದಾರೆ ಯಲ್ಹೇರಿ ಗ್ರಾಮ ಪಂಚಾಯಿತಿ ಪಿಡಿಒ ಅವರು ಇಂಥ ಘಟನೆಗಳ ಬಗ್ಗೆ ಗಮನಕ್ಕೆ ತಂದರೆ ಯಾವುದೇ ಪ್ರಯೋಜನ ಇಲ್ಲ ಮತ್ತು ಪ್ರತಿಕ್ರಿಯೆ ಕೂಡ ನೀಡುವುದಿಲ್ಲ. ಅದಲ್ಲದೆ ಶಾಲೆಯ ಅಭಿವೃದ್ಧಿಗಾಗಿ ಅಕ್ಷರ ಆವಿಷ್ಕಾರ ಯೋಜನೆ ಅಡಿಯಲ್ಲಿ ಸುಮಾರು 55 ಲಕ್ಷಗಳು ಅನುದಾನ ಬಂದಿದ್ದು ವರ್ಷಗಳು ಕಳೆದರೂ ಕೂಡ ಇಲ್ಲಿವರೆಗೆ ಪೂರ್ಣಗೊಂಡಿರುವುದಿಲ್ಲ ಮತ್ತು ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿರುತ್ತದೆ. ಆದಷ್ಟು ಬೇಗನೆ ಈ ಶಾಲೆಯ ಮೈದಾನ ವನ್ನು ಸರಿಪಡಿಸಬೇಕು ಇಲ್ಲದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ಗುರುಮಿಟ್ಕಲ್ ಘಟಕವ ವತಿಯಿಂದ ಶಾಲೆಯ ಮೈದಾನದಲ್ಲಿ ಭತ್ತ ನಾಟಿ, ಮೀನು ಸಾಕಾಣಿಕೆ ಮಾಡುವ ಮೂಲಕ ವಿನುತನವಾಗಿ ಪ್ರತಿಭಟನೆ ಮಾಡುತ್ತೇವೆ ಎಂದು ಕ ರ ವೇ ತಾಲೂಕ ಅಧ್ಯಕ್ಷ ಶರಣ ಬಸಪ್ಪ ಹೇಳಿದರು, ಈ ಒಂದು ಸಂರ್ಭದಲ್ಲಿ

,ಕೊಂಕಲ್ ಹೋಬಳಿ ಘಟಕ ಅಧ್ಯಕ್ಷ ಮುನೇಶ್ ಮಾದ್ವಾರ ಅವರು ಕೂಡ ಆಗ್ರಹಿಸಿದರು.