ಸತ್ಯಯುಗಕ್ಕೆ ಅಡಿಗಲ್ಲು ಸಮಾರಂಭ ಕಲಿಯುಗ ಕೊನೆಗಾಣಬೇಕಿದೆ : ನ್ಯಾ. ಗೋಖಲೆ

ಸತ್ಯಯುಗಕ್ಕೆ ಅಡಿಗಲ್ಲು ಸಮಾರಂಭ
ಕಲಿಯುಗ ಕೊನೆಗಾಣಬೇಕಿದೆ : ನ್ಯಾ. ಗೋಖಲೆ
ಸೇಡಂ : ಪಟ್ಟಣದ ಬ್ರಹ್ಮಕುಮಾರಿ ಆಶ್ರಮದಲ್ಲಿ, ಸತ್ಯ ಯುಗ ಫೌಂಡೇಷನ್ ಬೈ ಯುರೇನ್ ನಮಃ ಟ್ರಸ್ಟ್ ಉದ್ಘಾಟನೆ ನಿಮಿತ್ತವಾಗಿ ಸತ್ಯ ಯುಗ ಅಡಿಗಲ್ಲು ಕಾರ್ಯಕ್ರಮ ಜರುಗಿತು.
ಬೆಂಗಳೂರಿನ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಜಿ.ಕೆ.ಗೋಖಲೆ ಮಾತನಾಡಿ, ಜಗತ್ತಿನಲ್ಲಿ ಯುದ್ಧಗಳು, ಅನ್ಯಾಯ, ಅನಾಚಾರ, ಭ್ರಷ್ಟಾಚಾರ ಹೆಚ್ಚಾಗಿದ್ದು ಇದನ್ನು ಕೊನೆಗೊಳಿಸಲು ದುಷ್ಟ ಗುಣಗಳ ಪ್ರತೀಕವಾದ ಕಲಿಯುಗ ಕೊನೆಗೊಳ್ಳಬೇಕಾಗಿದ್ದು ಅವಶ್ಯಕವಾಗಿದೆ. ಜನರಲ್ಲಿ ಸದಾಚಾರ ಸದ್ಗುಣಗಳ ಪ್ರತೀಕವಾಗಿರುವ ಸತ್ಯ ಯುಗದ ಆರಂಭವಾಗುವುದು ಅವಶ್ಯವಾಗಿದೆ ಎಂದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಬ್ರಹ್ಮಕುಮಾರಿ ಕಲಾವತಿ ಅಮ್ಮನವರು ಇದೇ ಭೂಮಿಯಲ್ಲಿ ಒಂದು ಕಾಲಕ್ಕೆ ಸತ್ಯ ಯುಗವು ಇತ್ತು. ಆ ಸತ್ಯ ಯುಗ ಮತ್ತೆ ಆರಂಭವಾಗಲಿದ್ದು, ಲಕ್ಷ್ಮಿ ಮತ್ತು ನಾರಾಯಣರು ಭೂಲೋಕದ ರಾಜ್ಯವನ್ನು ಆಳಲಿದ್ದಾರೆ. ಇದಕ್ಕಾಗಿ ನಮ್ಮೆಲ್ಲರಲ್ಲಿ ಸತ್ಯ ಯುಗದ ಇಚ್ಛೆಯನ್ನು ಹೊಂದುವುದು ಅದಕ್ಕಾಗಿ ಕಾರ್ಯೋನ್ಮುಖರಾಗುವುದು ಅವಶ್ಶವಾಗಿದೆ ಎಂದು ಹೇಳಿದರು. ಅತಿಥಿಗಳಾಗಿ ಪುರಸಭಾ ಸದಸ್ಯೆ ಮಲಕಮ್ಮಾ ಕಣೆಕಲ, ಬಿ.ಕೆ. ಬನ್ನಪ್ಪಾ, ಡಾ. ಬಿ.ಆರ್. ಅಣ್ಣಾಸಾಗರವರು ಆಗಮಿಸಿದ್ದರು.
ವೃತ್ತಿಯಲ್ಲಿ ಸತ್ಯ ಪ್ರಾಮಾಣಿಕತೆಯ ನಿಷ್ಠೆ ತೋರಿಸುತ್ತಿರುವುದಕ್ಕೆ ಸಹಾಯಕ ಕಾರ್ಯನಿರತ ಅಭಿಯಂತರ, ಸಾಹಿತಿ ಸಂತೋಷಕುಮಾರ ತೋಟ್ನಳ್ಳಿಯವರಿಗೆ "ಸತ್ಯ ಯುಗಕ್ಕೆ ಅಡಿಗಲ್ಲಿನ ಸಾಧಕ" ಪ್ರಶಸ್ತಿಯನ್ನು ಟ್ರಸ್ಟ್ ಅಧ್ಯಕ್ಷೆ ಶಿವಕಾಂತಮ್ಮ ಚಿಮ್ಮನಚೋಡಕರ ಪ್ರದಾನ ಮಾಡಿ ಗೌರವಿಸಿದರು.
ಹಿರಿಯ ಸಮಾಜ ಸೇವಕರಾದ ಗಣಪತರಾವ ಚಿಮ್ಮನಚೋಡಕರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಲಿಂಗಾರೆಡ್ಡಿ ಶೇರಿ, ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪಾ ತಳ್ಳಳ್ಳಿ, ನೃಪತುಂಗ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಜೋಶಿ, ವಿಜ್ಞಾನ ಪರಿಷತ್ತಿನ ಕುಂಠೆಪ್ಪಾ ಗೌರೀಪುರ, ಸೋಮಶೇಖರ್ ಪಾಟೀಲ್, ಸೌಭಾಗ್ಯಮ್ಮ ಮಳಗಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸುಮಾ ಚಿಮ್ಮನಚೋಡಕರ್, ವಿಜಯಕುಮಾರ ಗಡಿನಾಡ, ಕಲ್ಪನಾ ಕೊಂಬಿನ, ಬಿಜೆಪಿ ಮುಖಂಡರಾದ ಲಕ್ಷ್ಮಿನಾರಾಯಣ ಚಿಮ್ಮನಚೋಡಕರ, ಗೌತಮ ನಿರಂಜಿ, ಕಲ್ಪನಾ ಕೊಂಬಿನ, ಬಸವರಾಜೇಶ್ನರಿ ಗೌರೀಪುರ, ಸುಭಾಸ ಕಣೇಕಲ ಭೀಮಾಶಂಕರ, ಅಗ್ನಿವೀರ ಸಂಜಯ, ಕೃಷ್ಣಾ, ದೇವಿಂದ್ರ, ವಿಶಾಲ, ರಕ್ಷಿತಾ, ಮುಂತಾದವರು ಭಾಗವಹಿಸಿದ್ದರು.
ಸೂರ್ಯ ನಾರಾಯಣ ಚಿಮ್ಮನಚೋಡಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಸತ್ಯ ಯುಗಕ್ಕೆ ಅಡಿಗಲ್ಲು ಹಾಕುವುದೇ ಟ್ರಸ್ಟ್ ಉದ್ದೇಶವಾಗಿದೆ ಎಂದು ಹೇಳಿದರು.
ಕಾವೇರಿ ನಿರೂಪಿಸಿದರು. ವರ್ಷಾ ಸ್ವಾಗತಿಸಿದರು.