ಗುಲ್ಬರ್ಗಾ ವಿಶ್ವವಿದ್ಯಾಲಯ ನಿವೃತ್ತ ನೌಕರರ ಸಂಘದ ನೇತೃತ್ವದಲ್ಲಿ ಕುಲಸಚಿವರ ಕಚೇರಿಯಲ್ಲೆ ಕುಳಿತು ಪ್ರತಿಭಟನೆ

ಗುಲ್ಬರ್ಗಾ ವಿಶ್ವವಿದ್ಯಾಲಯ ನಿವೃತ್ತ ನೌಕರರ ಸಂಘದ ನೇತೃತ್ವದಲ್ಲಿ ಕುಲಸಚಿವರ ಕಚೇರಿಯಲ್ಲೆ ಕುಳಿತು ಪ್ರತಿಭಟನೆ

ಗುಲ್ಬರ್ಗಾ ವಿಶ್ವವಿದ್ಯಾಲಯ ನಿವೃತ್ತ ನೌಕರರ ಸಂಘದ ನೇತೃತ್ವದಲ್ಲಿ ಕುಲಸಚಿವರ ಕಚೇರಿಯಲ್ಲೆ ಕುಳಿತು ಪ್ರತಿಭಟನೆ

ಕಲಬುರಗಿ: ರಾಜ್ಯ ಸರ್ಕಾರವು ರಚಿಸಿದ 7ನೇ ರಾಜ್ಯ ವೇತನ ಆಯೋಗ ಶಿಫಾರಸ್ಸು ಮಾಡಿದರುವಂತೆ ಕನಿಷ್ಠ ಮತ್ತು ಗರಿಷ್ಠ ವಯೋ ನಿವೃತ್ತಿ ಹೊಂದಿದ ವಿಶ್ವವಿದ್ಯಾಲಯದ ನಿವೃತ್ತಿ ನೌಕರರ ಪಿಂಚಣಿ ಮತ್ತು ಕುಟುಂಬ ಪಿಂಚಣಿ ಪರಿಷ್ಕರಿಸಿ ಮಂಜೂರು ಮಾಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಗುಲ್ಬರ್ಗಾ ವಿಶ್ವವಿದ್ಯಾಲಯ ನಿವೃತ್ತ ನೌಕರರ ಸಂಘದ ನೇತೃತ್ವದಲ್ಲಿ ವಿಶ್ವವಿದ್ಯಾಲಯದ ಕುಲಸಚಿವರ ಕಚೇರಿಯ ಎದುರು ಪ್ರತಿಭಟನೆಯನ್ನು ನಡೆಸಿದ ನಿವೃತ್ತ ನೌಕರರು ವಿಶ್ವವಿದ್ಯಾಲಯ ಆಡಳಿತ ಮಂಡಳಿಯ ವಿರುದ್ಧ ಘೋಷಣೆ ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು. 

ಈ ವೇಳೆ ಮಾತನಾಡಿದ ಹೋರಾಟಗಾರ ಎಮ್ ಬಿ ಸಜ್ಜನ್ ಅವರು, ರಾಜ್ಯ ಸರ್ಕಾರವು ಆಗಸ್ಟ್ 28ರಂದು ವಿಶ್ವವಿದ್ಯಾಲಯದ ನಿವೃತ್ತಿ ನೌಕರರ ನಿವೃತ್ತಿ ಸೌಲಭ್ಯಗಳನ್ನು ಕನಿಷ್ಠ ಮತ್ತು ಗರಿಷ್ಠ ಪಿಂಚಣಿಯನ್ನು ಪರಿಷ್ಕರಣೆ ಮಾಡಲು ಆದೇಶ ನೀಡಿದೆ. ಆದರೆ, ವಿಶ್ವವಿದ್ಯಾಲಯ ಆಡಳಿತ ಮಂಡಿಯು ಇಲ್ಲಿಯವರೆಗೆ ನಿವೃತ್ತಿ ನೌಕರರ ಪಿಂಚಣಿಯನ್ನು ಪರಿಷ್ಕರಿಸಿಲ್ಲ ಈ ಹಿಂದೆಯೂ ಆರನೇ ವೇತನದ ಪಿಂಚಣಿಯನ್ನು ಪರಿಷ್ಕರಿಸುವ ಸಂದರ್ಭದಲ್ಲಿಯೂ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದ್ರು. 

ಪ್ರತಿಭಟನೆ ವೇಳೆ ಹೋರಾಟಗಾರರು ಸಮಸ್ಯೆಗೆ ಪರಿಹಾರ ನೀಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲವೆಂದು ಕುಲಸಚಿವರ ಕಚೇರಿಯಲ್ಲೆ ಕುಳಿತು ಪ್ರತಿಭಟಿಸಿದ ಪ್ರಸಂಗ ಜರುಗಿತು. 

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷರಾದ ಡಾ.ಎಸ್ ಡಿ ಅಮೋಜಿ, ಪ್ರಧಾನ ಕಾರ್ಯದರ್ಶಿ ಹೆಚ್ ಹೆಚ್ ಭಜಂತ್ರಿ, ಎಂ.ಬಿ.ಸಜ್ಜನ್, ಆರ್.ಎಸ್.ಹೋಸಮಠ, ಕೆ.ಎಲ್.ಕಾಂಬಳೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.