ಅಂತಾರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ಕಲಬುರಗಿಗೆ

ಅಂತಾರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್  ಕಲಬುರಗಿಗೆ

ಅಂತಾರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ಕಲಬುರಗಿಗೆ

ಕಲಬುರಗಿ : ಸೇಡಂನಲ್ಲಿ ಜನವರಿ 29ರಿಂದ ಫೆಬ್ರವರಿ ಆರರ ತನಕ ನಡೆಯಲಿರುವ 7ನೆಯ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಜಾದೂ ಮೂಲಕ ಪ್ರಚಾರ ಅಭಿಯಾನ ಕೈಗೊಳ್ಳಲು ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಜನವರಿ 5 ಮತ್ತು 6 ರಂದು (ಇಂದು ಮತ್ತು ನಾಳೆ) ಕಲಬುರಗಿಗೆ ಆಗಮಿಸಿದ್ದು ಜಾಗೃತಿ ಜಾದೂ ಪ್ರದರ್ಶನ ನೀಡಲಿದ್ದಾರೆ. 

     ಬೀದರ್ ಜಿಲ್ಲೆಯ ಕಾರ್ಯಕ್ರಮವನ್ನು ಮುಗಿಸಿ ಕಲಬುರಗಿಯಲ್ಲಿ ಜನವರಿ 5 ಮತ್ತು 6 ರಂದು ಜಾಗೃತಿ ಜಾದೂ ಪ್ರದರ್ಶನಕ್ಕಾಗಿ ಆಗಮಿಸಿದ ಕುದ್ರೋಳಿ ಗಣೇಶ್ ಅವರು ಒಟ್ಟು ನಾಲ್ಕು ಪ್ರದರ್ಶನಗಳನ್ನು ನೀಡಲಿದ್ದಾರೆ. ಜನವರಿ 5ರಂದು ಭಾನುವಾರ ಬೆಳಗ್ಗೆ 10.30 ಕ್ಕೆ ಶ್ರೀ ಶರಣಬಸವೇಶ್ವರ ವಸತಿ ಶಾಲೆ ಹಾಗೂ ಮಧ್ಯಾಹ್ನ 2 ಗಂಟೆಗೆ ಸರ್ವಜ್ಞ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಜನವರಿ ಆರರಂದು ಸೋಮವಾರ ಬೆಳಿಗ್ಗೆ 10:30ಕ್ಕೆ ಕಲಬುರಗಿಯ ಸಂತೋಷ್ ಕಾಲೋನಿಯ ಮಿಲೇನಿಯಂ ಶಾಲೆ ಹಾಗು 12.30ಕ್ಕೆ ನೆಹರು ಗಂಜ್ ನ ನಗರೇಶ್ವರ ಶಾಲೆಯಲ್ಲಿ ಹಾಗೂ ಮಧ್ಯಾಹ್ನ 3:30ಕ್ಕೆ ಕಲಬುರಗಿಯ ಆರಾಧನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಾಗೃತಿ ಜಾದೂ ಏರ್ಪಡಿಸಲಾಗಿದೆ.

    ಜಾಗೃತಿ ಜಾದು ಪ್ರದರ್ಶನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ವಿದ್ಯಾರ್ಥಿಗಳು ಯೋಜನಾರು ಹಾಗೂ ಸಾರ್ವಜನಿಕರು ಕಿಕ್ಕಿರಿದು ತುಂಬಿದ ಸಭಾಂಗಣದಲ್ಲಿ ಆಕರ್ಷಕ ಜಾದೂ ಪ್ರದರ್ಶನಗೊಂಡಿತು. ಜಾಗೃತಿ ಜಾದೂ ವೀಕ್ಷಿಸಲು ಉಚಿತ ಪ್ರವೇಶವಿದೆ. ಕಲಬುರಗಿಯಲ್ಲಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಯುವಜನರು ಹಾಗೂ ಸಾರ್ವಜನಿಕರು ಜಾಗೃತಿ ಜಾದು ಪ್ರದರ್ಶನ ವೀಕ್ಷಿಸುವಂತೆ ಭಾರತೀಯ ಸಂಸ್ಕೃತಿ ಉತ್ಸವದ ಪ್ರಧಾನ ಸಂಯೋಜಕರಾದ ಬಸವರಾಜ್ ಪಾಟೀಲ್ ಸೇಡಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.