ಪ್ರಾಥಮಿಕ ಹಂತದ ಶಿಕ್ಷಣ ಮಕ್ಕಳಿಗೆ ಸರಿಯಾಗಿ ಸಿಗದೇ ಇರುವುದಕ್ಕೆ ಹತ್ತನೇ ಫಲಿತಾಂಶ ಕುಸಿಯಲು ಕಾರಣ : ಇಒ ಎಸ್. ಚವ್ಹಾಣ

ಚಂದಾಪೂರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನ ಆಚರಣೆ

 ಪ್ರಾಥಮಿಕ ಹಂತದ ಶಿಕ್ಷಣ ಮಕ್ಕಳಿಗೆ ಸರಿಯಾಗಿ ಸಿಗದೇ ಇರುವುದಕ್ಕೆ ಹತ್ತನೇ ಫಲಿತಾಂಶ ಕುಸಿಯಲು ಕಾರಣ : ಇಒ ಎಸ್. ಚವ್ಹಾಣ

ಚಿಂಚೋಳಿ : ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದಲ್ಲಿ ಏರಿಕೆ ಕಾಣದೇ ಇರುವುದಕ್ಕೆ ಮಕ್ಕಳಿಗೆ ಪ್ರಾಥಮಿಕ ಹಂತದ ಮೌಲ್ಯಯುತ ಗುಣಮಟ್ಟದ ಬೂನಾಧಿ ಶಿಕ್ಷಣ ಬೋಧನೆ ಆಗದೇ ಇರುವುದಕ್ಕೆ ಫಲಿತಾಂಶ ಕುಸಿಯಲು ಮುಖ್ಯ ಕಾರಣವಾಗಿದೆ ಎಂದು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಚವ್ಹಾಣ ಹೇಳಿದರು. 

ಅವರು ಇಲ್ಲಿನ ಚಂದಾಪೂರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಕೆಪಿಎಸ್) ಯಲ್ಲಿ ನಡೆದ ಮಕ್ಕಳ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಾಥಮಿಕ ಶಿಕ್ಷಣದ ಬೋಧನೆಯ ಗುಣಮಟ್ಟ ಕುಸಿತ ಕಂಡಿದರಿಂದ ಮಕ್ಕಳು ಎಸ್ ಎಸ್ ಎಲ್ ಸಿ ಪರೀಕ್ಷೆ ಪಾಸಾಗಲು ಸಾಧ್ಯವಾಗುತ್ತಿಲ್ಲ. ಪ್ರಾಥಮಿಕ ಹಂತದ ಶಿಕ್ಷಕರು ಮಕ್ಕಳಿಗೆ ಮೌಲ್ಯಯುತ್ತ ಬೂನಾದಿ ಶಿಕ್ಷಣವನ್ನು ಬೋಧನೆ ಮಾಡುವುದರ ಕಡೆಗೆ ಗಮನಹರಿಸಬೇಕು. ಶಿಕ್ಷಕರ ಮತ್ತು ಮಕ್ಕಳ ನಡುವೆ ಒಳ್ಳೆಯ ಬಾಂಧವ್ಯ ಬೆಳೆಸಿಕೊಂಡು ಪಾಠದ ಕಡೆಗೆ ಮಕ್ಕಳನ್ನು ಸೇಲಿಸಿಕೊಂಡು ಶಿಕ್ಷಕರು ಪಾಠ ಬೋಧನೆ ಮಾಡಬೇಕೆಂದರು.

 ಕ್ಷೇತ್ರ ಶಿಕ್ಷಣಾಧಿಕಾರಿ ವಿ. ಲಕ್ಷ್ಮಯ್ಯ, ಅಕ್ಷರ ದಾಸೋಹ ಅಧಿಕಾರಿ ಜಯಪ್ಪ ಚಾಪೆಲ್, ಸಂಘಟಕ ಗೌತಮ್ ಬೊಮ್ಮನಹಳ್ಳಿ ಮಾತನಾಡಿದರು. ಚಿಂಚೋಳಿ ವಲಯ ಸಂಪನ್ಮೂಲ ಅಧಿಕಾರಿ ಮೀನಾಕ್ಷಿ ಬಿಂದು ಪ್ರಾಸ್ತವಿಕ ನುಡಿಗಳು ಆಡಿದರು.

ಶಿಕ್ಷಣ ಪ್ರೇಮಿ ಅನಿಲಕುಮಾರ ಬಿರಾದಾರ ಅವರು ಮಕ್ಕಳಿಗೆ ನೋಟ್ ಬುಕ್, ಪರೀಕ್ಷೆ ಪ್ಯಾಡ್, ಪೆನ್ನು, ಪೆನ್ಸಿಲ್ ಗಳು ಉಚಿತವಾಗಿ ವಿತರಿಸಿದರು.

ಈ ಸಂಧರ್ಭದಲ್ಲಿ ತಾಲೂಕ ವೈದ್ಯಾಧಿಕಾರಿ ಡಾ. ಗಫಾರ್, ಅಗ್ನಿಶಾಮಕ ಅಧಿಕಾರಿ ಎಸ್.ಕೆ ಹುಸೇನ್, ಶಾಲೆಯ ಮುಖ್ಯಗುರು ಗೋಪಾಲ ಯಂಪಳ್ಳಿ, ಶಿಕ್ಷಕ ಯಶವಂತ ಪೂಜಾರಿ, ಸಾಬು ಕಾಂಬಳೆ, ವಿಜಯಕುಮಾರ, ಸಂಗಾರೆಡ್ಡಿ, ಆಶೀಯಾ ಬೇಗಂ, ಸುನೀತಾ, ಶಿಲ್ಪಾ, ಸಂಗಣಬಸಮ್ಮ, ಗೌತಮ್ ಬೊಮ್ಮನಹಳ್ಳಿ, ಕೆ. ಎಂ. ಬಾರಿ, ಅನೀಲ್ ಬಿರಾದಾರ್,ಹಣಮಂತ ಪೂಜಾರಿ, ನಾರಾಯಣ ನಾಟಿಕಾರ, ಚೇತನ ನಿರಾಳ್ಕರ್, ಉಲ್ಲಾಸ ಕೆರೋಳ್ಳಿ, ವಿಜಯಕುಮಾರ ಶಾಬಾದಿ ಅವರು ಉಪಸ್ಥಿತರಿದ್ದರು.