ಕೆ.ಆರ್.ಎಂ.ಎಂ.ಎಸ್.ಪಿ.ವೇದಿಕೆ ಗೆ ನೇಮಕ
ಕೆ.ಆರ್.ಎಂ.ಎಂ.ಎಸ್.ಪಿ.ವೇದಿಕೆ ಗೆ ನೇಮಕ
ಕಲಬುರಗಿ: ಕರ್ನಾಟಕ ರಾಜ್ಯ ಮಾತಂಗಿ ಮಾದಿಗ ಸಮಾಜ ಪರಿವರ್ತನ ವೇದಿಕೆಯ ರಾಜ್ಯ ಉಪಾಧ್ಯಕ್ಷರಾಗಿ ರವಿ ಸಿಂಗೆ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಸಭಾಧ್ಯಕ್ಷ ಪೂರ್ಣಾನಂದ ಭಾರತಿ ಸ್ವಾಮಿಗಳು,ಮಾತಂಗಾಶ್ರಮ ಹಂಪಿ ಸಂಸ್ಥಾಪಕ ರಾಜ್ಯ ಗೌರವಾಧ್ಯಕ್ಷ ಅಣ್ಣಪ್ಪ ಡಿ.ಎನ್., ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಪ್ರಭು ಹಿತ್ತಲಮನಿ ಇವರ ಆದೇಶದ ಮೇರೆಗೆ ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಇಂದಿನಿಂದ ನೀವು ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸತಕ್ಕದು ಮತ್ತು ಸಂಘದ ತತ್ವ ಸಿದ್ದಾಂತಗಳನುಗುಣವಾಗಿ ಕಾರ್ಯನಿರ್ವಹಿಸತಕ್ಕದು ಎಂದರು.
ನಮ್ಮ ಕೆ.ಆರ್.ಎಂ.ಎಂ.ಎಸ್.ಪಿ.ವಿ ಯಿಂದ ರಾಜ್ಯ & ರಾಷ್ಟ್ರದವರೆಗೂ ಪ್ರತಿಭಾವಂತ ಮಾದಿಗ ಸಮುದಾಯದ ಪ್ರತಿಭೆಗಳನ್ನು ಬೆಳಕಿಗೆ ತರುವ ಮಹತ್ಕಾರ್ಯವನ್ನು ಕೈಗೊಳ್ಳುವ ಮುಖಾಂತರ ನಿಮ್ಮನ್ನು ಅಭಿನಂದಿಸುವೆವು. ಹಾಗೂ ಸರಕಾರಿ ಸೇವೆಯಲ್ಲಿ ಸಾರ್ವಜನಿಕರಿಗೆ ಉತ್ತಮ ಹಾಗೂ ಅಮೋಘ ಸೇವೆ ಸಲ್ಲಿಸುತ್ತಿರುವವರನ್ನು ಪ್ರತಿ ವರ್ಷವು ಗುರುತಿಸಿ ಪ್ರೊತ್ಸಾಹಿಸುವುದರ ಜೊತೆಗೆ ಅಭಿನಂದಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.