ಸೂಪರ್ ಮಾರ್ಕೆಟ್ ಹರಿದಾಸ್ ಆಸ್ಪತ್ರೆಯಲ್ಲಿ ಉಚಿತ ಹೃದಯ ತಪಾಸಣೆ ಶಿಬಿರ

ಸೂಪರ್ ಮಾರ್ಕೆಟ್ ಹರಿದಾಸ್ ಆಸ್ಪತ್ರೆಯಲ್ಲಿ ಉಚಿತ ಹೃದಯ ತಪಾಸಣೆ ಶಿಬಿರ
ಕಲಬುರಗಿ: ನಗರದ ಸೂಪರ್ ಮಾರ್ಕೆಟ್ ಜವಳಿ ಕಾಂಪ್ಲೆಕ್ಸ್‌ನಲ್ಲಿರುವ ಹರಿದಾಸ್ ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಉಚಿತ ಹೃದಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಡಾ. ಅರುಣಕುಮಾರ ಹರಿದಾಸ್ ಅವರ ನೇತೃತ್ವದಲ್ಲಿ ನಡೆದ ಈ ಶಿಬಿರದಲ್ಲಿ ಹಲವಾರು ನಾಗರಿಕರು ಭಾಗವಹಿಸಿ ಹೃದಯ ಸಂಬಂಧಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಡಾ. ಹರಿದಾಸ್ ಅವರು ಹೃದಯದ ಆರೈಕೆ ಹಾಗೂ ಜೀವನ ಶೈಲಿಯ ಬದಲಾವಣೆಗಳ ಮೂಲಕ ಹೃದಯ ಸಂಬಂಧಿ ರೋಗಗಳನ್ನು ತಡೆಗಟ್ಟುವ ಕುರಿತು ಮಾಹಿತಿ ನೀಡಿದರು. ಶಿಬಿರದಲ್ಲಿ ಇ.ಸಿ.ಜಿ, ರಕ್ತದ ಒತ್ತಡ, ಸಕ್ಕರೆ ಮಟ್ಟ ತಪಾಸಣೆ ಸೇರಿದಂತೆ ವಿವಿಧ ಪರೀಕ್ಷೆಗಳು ಉಚಿತವಾಗಿ ನೆರವೇರಿಸಲ್ಪಟ್ಟವು.