ಮತಕಳ್ಳತನ ವಿರುದ್ಧ ಸಾರ್ವಜನಿಕರಿಗೆ ಜಾಗೃತಿ

ಮತಕಳ್ಳತನ ವಿರುದ್ಧ ಸಾರ್ವಜನಿಕರಿಗೆ ಜಾಗೃತಿ
ಕಲಬುರಗಿ: ದೇಶದಲ್ಲಿ ಮತಗಳ್ಳತನವಾಗಿದೆ ಎಂದು ಆರೋಪಿಸಿ ಬೃಹತ್ ಪ್ರತಿಭಟನೆ ಮಾಡಿರುವ ಹಿನ್ನಲೆ ಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಸಾರ್ವಜನಿಕರಲ್ಲಿ ಮತಗಳ್ಳತನದ ವಿರುದ್ಧ ಪೋಸ್ಟರ್ ಬಿಡುಗಡೆ ಮಾಡಿ ಜಾಗೃತಿ ಮೂಡಿಸಲಾಯಿತು.
ಕಲಬುರ್ಗಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಜಾಗೃತಿ ಸಮಾವೇಶದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಕೀಲ ಸರಡಗಿ ಅವರ ನೇತೃತ್ವದಲ್ಲಿ ನಗರದ ಸರ್ಧಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪೋಸ್ಟರ್ ಅಭಿ ಯಾನವನ್ನು ಬಿಡುಗಡೆ ಮಾಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ಕೇಂದ್ರದ ಚುನಾವಣಾ ಆಯೋಗ ಬಿಜೆಪಿಯವರ ಕೈಗೊಂಬೆ ರೀತಿಯಲ್ಲಿ ವರ್ತಿಸುತ್ತಿದ್ದು ಕೇಂದ್ರ ಚುನಾವಣೆ ಆಯೋಗ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರು ಕೇಳಿದ ಪ್ರಶ್ನೆಗೆ ಉತ್ತರಿಸುವ ಬದಲು ವಿಪಕ್ಷಗಳಿಗೆ ಬೆದರಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಅದಕ್ಕೋಸ್ಕರ 65ಅ ದೇಶದ ಜನರು ಈ ಮತ ಕಳ್ಳತನದ ವಿರುದ್ಧ ಧ್ವನಿ ಎತ್ತಿದ್ದು ಸಾಮಾನ್ಯ ಸದಸ್ಯನಿಗೂ ವೋಟಿನ ಒಬ್ಬ ಮನುಷ್ಯ ಒಂದು ವೋಟ್ ಸಿಗಬೇಕೆಂದು ಹೋರಾಟದ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಈರಣ್ಣ ಪಾಟೀಲ ಝಳಕಿ, ಅಮರ ಶಿರವಾಳ, ಪರಶುರಾಮ ನಾಟೀಕಾರ, ಉಮರ ಜುನೈದಿ, ರಾಜು ಮಾಳಗಿ, ಎಜಾಜ್ ನಿಂಬಾಲ್ಕರ್, ಗಣೇಶ ನಾಗನಹಳ್ಳಿ, ಸಂಘಪಾಲ ಕಾಂಬಳೆ, ಮಿಸ್ತ್ರೀ ಶರಫುದ್ದೀನ್, ಅಸ್ಲಂ ಸಿಂದಗಿ, ಕಾರ್ತಿಕ ಹೊಸಮನಿ ಸೇರಿದಂತೆ ಅನೇಕರಿದ್ದರು.