ESIC: SPREE 2025 ಯೋಜನೆಗೆ ಚಾಲನೆ – ಅಸಂಘಟಿತ ಕಾರ್ಮಿಕರಿಗಾಗಿ ವಿಶೇಷ ನೋಂದಣಿ ಅಭಿಯಾನ
ESIC: SPREE 2025 ಯೋಜನೆಗೆ ಚಾಲನೆ – ಅಸಂಘಟಿತ ಕಾರ್ಮಿಕರಿಗಾಗಿ ವಿಶೇಷ ನೋಂದಣಿ ಅಭಿಯಾನ
ಕಲಬುರಗಿ, ಜುಲೈ 17:ನೌಕರರ ರಾಜ್ಯ ವಿಮಾ ನಿಗಮ (ESIC) ಇದರ SPREE 2025 (Special Registration & Extension Enrolment) ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆಯು ಸಂಘಟಿತ ಮತ್ತು ಅಸಂಘಟಿತ ವಲಯದ ಉದ್ಯೋಗಿಗಳನ್ನು ನೋಂದಾಯಿಸಲು ಮತ್ತು ಅವರನ್ನು ಆರೋಗ್ಯ ವಿಮಾ ಸೌಲಭ್ಯಗಳಿಗೆ ಒಳಪಡಿಸುವ ಗುರಿಯನ್ನು ಹೊಂದಿದೆ.
ಈ ಹಿನ್ನೆಲೆಯಲ್ಲಿ, ESIC ಉಪಪ್ರಾದೇಶಿಕ ಕಚೇರಿ, ಕಲಬುರಗಿ ಯಿಂದ ಪತ್ರಿಕಾ ಪ್ರಕಟಣೆ ಬಿಡುಗಡೆಯಾಗಿದ್ದು, ಸಾರ್ವಜನಿಕರಲ್ಲಿ ಈ ಯೋಜನೆಯ ಬಗ್ಗೆ ಅರಿವು ಮೂಡಿಸಲು ಹಾಗೂ ವ್ಯಾಪಕ ಪ್ರಚಾರ ನಡೆಸಲು ಎಲ್ಲಾ ಮಾಧ್ಯಮ ಸಂಸ್ಥೆಗಳಿಗೆ ವಿನಂತಿಸಲಾಗಿದೆ.
ಜುಲೈ 17 ರಂದು ಈ ಬಗ್ಗೆ ಮಾಹಿತಿ ನೀಡಿದ ESIC ಜಂಟಿ ನಿರ್ದೇಶಕರಾದ ಯುವರಾಜ್ ಎಸ್.ವಿ. ಅವರು, “SPREE 2025 ಯೋಜನೆಯಡಿ ನೋಂದಾಯಿತ ಸಂಸ್ಥೆಗಳು ತಮ್ಮ ಕಾರ್ಮಿಕರನ್ನು ಮತ್ತು ಸಿಬ್ಬಂದಿಯನ್ನು ತ್ವರಿತವಾಗಿ ನೋಂದಣಿ ಮಾಡಿ, ಈ ಯೋಜನೆಯ ಲಾಭ ಪಡೆಯುವಂತೆ ನೋಡಿಕೊಳ್ಳಬೇಕು. ಇದು ಆರೋಗ್ಯ ಹಾಗೂ ಸಾಮಾಜಿಕ ಭದ್ರತೆ ಗುರಿಯಾಗಿರುವ ಕೇಂದ್ರ ಸರ್ಕಾರದ ಪ್ರಮುಖ ಹೆಜ್ಜೆಯಾಗಿದೆ" ಎಂದು ತಿಳಿಸಿದ್ದಾರೆ.
ಮಾಧ್ಯಮಗಳು ಮತ್ತು ಪತ್ರಿಕೆಗಳು ಈ ಕಾರ್ಯಕ್ರಮದ ಮಾಹಿತಿ ಹೆಚ್ಚಿನ ಜನರಿಗೆ ತಲುಪಿಸುವಲ್ಲಿ ಸಹಕರಿಸಬೇಕೆಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ಸಂಪರ್ಕಕ್ಕಾಗಿ: ಯುವರಾಜ್ ಎಸ್.ವಿ.,
ಜಂಟಿ ನಿರ್ದೇಶಕರು (ಐ/ಸಿ),ESIC ಉಪಪ್ರಾದೇಶಿಕ ಕಚೇರಿ,ಕಲಬುರಗಿ – 585 106
VOIP: 28472001