ದಾಸಿಮಯ್ಯ ಕಾನೂನು ಸೇವಾ ಸಂಸ್ಥೆಯಲ್ಲಿ ಶಾಸ್ತ್ರಿ ಯವರ ಜಯಂತಿ
ದಾಸಿಮಯ್ಯ ಕಾನೂನು ಸೇವಾ ಸಂಸ್ಥೆಯಲ್ಲಿ ಶಾಸ್ತ್ರಿ ಯವರ ಜಯಂತಿ ಆಚರಣೆ
ಕಲಬುರಗಿ ನಗರದ ಸದ್ಗುರು ದಾಸಿಮಯ್ಯ ಕಾನೂನು ಸೇವಾ ಸಂಸ್ಥೆಯಲ್ಲಿ ಬುಧವಾರ ರಾತ್ರಿ 8.30 ಕ್ಕೆ, ಹಮ್ಮಿಕೊಂಡ, ಲಾಲ ಭಾಹದ್ದೂರ್ ಶಾಸ್ತ್ರಿ ಯವರ 120ನೇ ಜಯಂತಿ ಕಾರ್ಯಕ್ರಮ ಜರಗಿತು.
ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಕ.ಸಾ.ಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಯವರು ಜೈ ಜವಾನ, ಜೈ ಕಿಸಾನ್ ತತ್ವವನ್ನು ಘೋಷಿಸಿದ್ದಾರೆ, ಭಾರತ ದೇಶವನ್ನು ಸದೃಢ ಗೊಳಿಸುವಲ್ಲಿ ತಮ್ಮ ಇಡೀಜೀವನವನ್ನು ಮೂಡುಪಾಗಿ ಇಟ್ಟು, ದೇಶದ ಹಿತ ಕಾಯುವ ಮೂಲಕ ನೀತಿ ಪಾಠವನ್ನು ಮುಂದಿನ ಪೀಳಿಗೆಗೆ ನೀಡಿದ ಮಹಾ ವ್ಯಕ್ತಿಯಾಗಿದ್ದರು ಎಂದು ತಿಳಿಸಿದರು .
ಸಂಸ್ಥೆಯ ಸಂಸ್ಥಾಪಕ ಶಿವಲಿಂಗಪ್ಪಾ ಅಷ್ಟಗಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಸ್ಥೆಯ ಸಂಚಾಲಕ ನ್ಯಾಯ ವಾದಿ ಜೆ.ವಿನೋದ ಸ್ವಾಗತಿಸಿದರು. ಸಪ್ತ ನೇಕಾರ ಸಮಿತಿಯ ಶ್ರೀನಿವಾಸ ಬಲಪೂರ್ ವಂದಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಅಭಿಯಂತರ ಶ್ರೀ ಸಿದ್ರಾಮಪ್ಪ ಲದ್ದೆ ಪಾಲಗೊಂಡಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಸಂಗಮನಾಥ ರೇವತಗೌಂವ ರವರ ಹುಟ್ಟುಹಬ್ಬದ ನಿಮಿತ್ತ ಅವರನ್ನು ಕೈಮಗ್ಗ ನೇಕಾರರು ನೈಯಿದ ನೂಲಿನ ಹಾರ ಹಾಕಿ ಸನ್ಮಾನಿಸಿ, ಗೌರವಿಸಲಾಯಿತು. ಹಿರಿಯ ಇತಿಹಾಸ ಉಪನ್ಯಾಸಕರಾದ ಶ್ರೀ ಅನಾದಿ ಚಂದ್ರಶೇಖರ್, ಛಾಯಾಗ್ರಾಹಕ ರಾಜು ಕೋಷ್ಟಿ, ಶರಣಪ್ರಸಾದ ಜೇನವೆರಿ ಮತ್ತು ಇತರರು ಉಪಸ್ಥಿತರಿದ್ದರು.