ಆಳಂದ ಶಾಸಕರಿಗೆ ನೇಕಾರರ ಗಂಭೀರ ಮನವಿ: "ಟೆಕ್ಸ್ಟೈಲ್ ಪಾರ್ಕ್ ಸ್ಥಾಪನೆಗೆ ನೇತೃತ್ವ ವಹಿಸಿ!"

ಆಳಂದ ಶಾಸಕರಿಗೆ ನೇಕಾರರ ಗಂಭೀರ ಮನವಿ: "ಟೆಕ್ಸ್ಟೈಲ್ ಪಾರ್ಕ್ ಸ್ಥಾಪನೆಗೆ ನೇತೃತ್ವ ವಹಿಸಿ!"

ಆಳಂದ ಶಾಸಕರಿಗೆ ನೇಕಾರರ ಗಂಭೀರ ಮನವಿ: "ಟೆಕ್ಸ್ಟೈಲ್ ಪಾರ್ಕ್ ಸ್ಥಾಪನೆಗೆ ನೇತೃತ್ವ ವಹಿಸಿ!"

ಆಳಂದ: ದಿ. 16-07-2025 ರಂದು ಸ್ಥಳೀಯ ಪ್ರೆಸ್‌ಮೀಟ್‌ನಲ್ಲಿ ಆಳಂದ ಶಾಸಕನವರು ಟೆಕ್ಸ್ಟೈಲ್ ಪಾರ್ಕ್ ಬಗ್ಗೆ ಮಾಡಿದ ಹಳೆಯ ಮಾಹಿತಿ ಪೂರಿತ ಹೇಳಿಕೆ ಬಗ್ಗೆ ಜಿಲ್ಲೆಯ ನೇಕಾರ ಸಮುದಾಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ತಾವು ಸತತವಾಗಿ ನೇಕಾರರ ಬೆಂಬಲದಿಂದ ರಾಜಕೀಯ ಬದುಕು ಕಟ್ಟಿಕೊಂಡಿರುವ ಶಾಸಕರೇ, ಇಂದು ಅವರ ಹಿತಾಸಕ್ತಿಯನ್ನು ಕಡೆಗಣಿಸಿರುವುದು ದುರಂತವೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ನಿಮ್ಮ ಅನುಭವದ ಆಧಾರದ ಮೇಲೆ ಟೇಕ್‌ಸ್ಟೈಲ್ ಪಾರ್ಕ್ ಬಗ್ಗೆ ಮಾತನಾಡಿದಿರಿ. ಆದರೆ ಅದನ್ನು ನೀವು ಒರೆಗೆ ಹಚ್ಚಿ, ಕಾರ್ಯರೂಪಕ್ಕೆ ತರುವ ಪ್ರಯತ್ನವೇ ಇರಲಿಲ್ಲ. ರೈತರ ಬಗ್ಗೆ ಕಾಳಜಿ ಇರುವಷ್ಟು ನೇಕಾರರ ಬಗ್ಗೆ ಯಾಕೆ ಇಲ್ಲ? ಕೇವಲ ಭಾಷಣ ಮಾತ್ರವಲ್ಲ, ನೇತೃತ್ವದ ಅಗತ್ಯವಿದೆ," ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ಎಂ.ಎಸ್‌.ಕೆ ಮೀಲ್‌ ನೇಕಾರರ ಆರ್ಥಿಕ ಬಾಳಿಗೆ ಆಧಾರವಾಗಿದ್ದವು. ಇಂಥಾ ಉದ್ಯೋಗದ ಅಡಿಪಾಯವನ್ನು ಮರುಸ್ಥಾಪಿಸಲು, ನಶಿಸಿ ಹೋಗುತ್ತಿರುವ ಕೈಮಗ್ಗ ಉದ್ಯಮಕ್ಕೆ ನವಜೀವನ ನೀಡಲು ತೆರೆದ ಮನಸ್ಸಿನಿಂದ ಪಕ್ಷ, ನೇಕಾರ ನಿಗಮಗಳ ನಡುವಣ ಸೇತುವೆಯಾಗಿ ಕಾರ್ಯನಿರ್ವಹಿಸಬೇಕೆಂದು ನೇಕಾರರು ಆಗ್ರಹಿಸಿದ್ದಾರೆ.

ಪಿಎಂ ಮಿತ್ರ ಯೋಜನೆಯಡಿ ಜಿಲ್ಲೆಗೆ ಅವಕಾಶ ದೊರೆತಿದ್ದರೂ, ಅದರ ಬಗ್ಗೆ ನಿಮ್ಮ ಮಾತಿನಲ್ಲಿ ಉಲ್ಲೇಖವಿಲ್ಲದಿದ್ದದ್ದು ಬೇಸರ ಮೂಡಿಸಿದೆ. ಇದು ನೇಕಾರ ಸಮುದಾಯದ ಆಶಾಭಾವನೆಗಳಿಗೆ ನಿಲ್ಲದ ನಿಮ್ಮ ನಿಲ್ಲುವ ಕೈಮಗ್ಗ ನೇಕಾರರಿಗೆ ನಿರಾಸೆ ತಂದಿದೆ.

ಇನ್ನೂ ಮುಂದೆ ಕೈಮಗ್ಗ ಉದ್ಯಮ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು. ನೇಕಾರ ನಿಗಮ ಸ್ಥಾಪನೆ, ಬಜೆಟ್ ನಲ್ಲಿ ವಿಶೇಷ ಅನುದಾನ ಮೀಸಲಾತಿ, ಯುವ ನೇಕಾರರಿಗೆ ತರಬೇತಿ ಮತ್ತು ಉದ್ಯೋಗ ಅವಕಾಶಗಳ ಕಲ್ಪನೆ ಸೇರಿದಂತೆ ಹಲವಾರು ಯೋಜನೆಗಳಿಗೆ ತಾವು ಮುಂದಾಗಬೇಕು. ಖಾದಿ ಟೋಪಿ ಧರಿಸಿ ಸಮಾಜವಾದದ ಮಾತು ಆಡಿದರೆ ಸಾಕಾಗುವುದಿಲ್ಲ ಮತ್ತು ಸಾಕಾದಂತಿಲ್ಲ, ನೇಕಾರರ ಭವಿಷ್ಯ ಉತ್ತಮ ಗೊಳಿಸಿ, ಉಳಿಸುವ ನಿಜವಾದ ಕೆಲಸ ಮಾಡಬೇಕು ಎಂದು ನೇಕಾರ ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ. ವಿಶೇಷವಾಗಿ ಇಂದು ವಿಶ್ವ ನ್ಯಾಯ ದಿನ ದಂದು, ಪ್ರಮಾಣ ಮಾಡಬೇಕು ನೈಜ ಸಾಮಾಜಿಕ ನ್ಯಾಯ ನೀಡಿದ, ಧರ್ಮಗುರು ದಾಸಿಮಯ್ಯ ನವರ ತತ್ವ ಸಿದ್ದಾಂತ ವನ್ನ ಅಳವಡಿಸಿ ಕೊಳ್ಳುತ್ತೇನೆ ಎಂದು 

"ನೇಕಾರರ ಮತವಿಲ್ಲದೆ ರಾಜಕೀಯ ಬದುಕು ಸಾಧ್ಯವಿಲ್ಲ. ರೈತ ಮತ್ತು ನೇಕಾರ – ಈ ಎರಡು ಕಣ್ಣುಗಳನ್ನು ಸಮಾನವಾಗಿ ಕಾಣಬೇಕು," ಎಂಬ ಘೋಷವಾಕ್ಯ ವನ್ನು ಮುಂದಿಟ್ಟು ಶಾಸಕರು ಪಿಎಂ ಮಿತ್ರ ಯೋಜನೆಯಡಿ ಜವಳಿ ಪಾರ್ಕ್ ಸ್ಥಾಪನೆಗೆ ಬಲವಾಗಿ ನಿಲ್ಲಬೇಕು ಎಂಬುದು ನೇಕಾರರ ಒತ್ತಾಯ ಹಾಗೂ ಒತ್ತಾಸೆ ಯಾಗಿದೆ ಎಂದು ಜಿಲ್ಲಾ ನೇಕಾರ ಪ್ರತಿನಿಧಿ ನ್ಯಾಯವಾದಿ ಜೆನವೇರಿ ವಿನೋದ ಕುಮಾರ ಆಗ್ರಹಿಸಿದ್ದಾರೆ.