ಜಮೀರ ಹಠಾವೋ ಜಮೀನ ಬಚಾವೋ : ಸಿದ್ದಲಿಂಗ ಮಹಾಸ್ವಾಮಿಗಳು ಆಂದೋಲಾ
ಜಮೀರ ಹಠಾವೋ ಜಮೀನ ಬಚಾವೋ : ಸಿದ್ದಲಿಂಗ ಮಹಾಸ್ವಾಮಿಗಳು ಆಂದೋಲಾ
ಕಲಬುರಗಿ : ರಾಜ್ಯ ಸರಕಾರದ ಗೆಜೆಟ್ ಅಧಿಸೂಚನೆಯ ನಂತರ ರಾಜ್ಯದಲ್ಲಿ ಸಾವಿರಾರು ಎಕರೆ ಭೂಮಿಯನ್ನು ರೈತರ, ಜನಸಾಮಾನ್ಯರ, ಸರಕಾರಿ ಆಸ್ತಿಗಳನ್ನು ಮತ್ತು ಮಠ-ಮಂದಿರಗಳ ಆಸ್ತಿಗಳನ್ನು ವಕ್ಸ್ ಹೆಸರು ಪಹಣಿಯಲ್ಲಿ ನಮೂದಿಸಿ ರೈತರ, ಜನಸಾಮಾನ್ಯರ ನಿದ್ದೆಯನ್ನು ಹಾಳು ಮಾಡಿ ಆತಂಕ ಸೃಷ್ಟಿಸಲಾಗುತ್ತಿದೆ ಎಂದು ಆಂದೋಲಾ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ಇಂದು ಕಲಬುರಗಿ ನಗರದಲ್ಲಿ ನೇಗಿಲಯೋಗಿ ಸ್ವಾಭಿಮಾನ ವೇದಿಕೆ, ಕಲಬುರಗಿ ಸಂಘದ ವತಿಯಿಂದ ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ನಡುಗೆ ಮುಖಾಂತರ ಪ್ರತಿಭಟಿಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
ಅನೇಕ ದಶಕಗಳಿಂದ ಭೂಮಿಯನ್ನು ಉಳಿಮೆ ಮಾಡುತ್ತಿರುವ ರೈತರ ಜಮೀನಿಗೆ ವಕ್ಸ್ ಆಸ್ತಿಯೆಂದು ಪಹಣಿಯಲ್ಲಿ ನಮೂದಿಸಲಾಗಿದೆ. ಕಲಬುರಗಿ ಜಿಲ್ಲೆಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಕಂದಾಯ ಇಲಾಖೆಯು ಭೂಮಿಯನ್ನು ವಕ್ಸ್ ಹೆಸರಿನಲ್ಲಿ ವರ್ಗಾಯಿಸಿ ನೋಟಿಸು ಜಾರಿ ಮಾಡುತ್ತಿದೆ. ರೈತರ, ಸಾಮಾನ್ಯ ನಾಗರೀಕರ ಆತಂಕ, ಧರಣಿ, ಆಂದೋಲನ ವಿರೋಧದ ಕಾವು ಅರಿತ ಮಾನ್ಯ ಮುಖ್ಯಮಂತ್ರಿಗಳು ಪಹಣಿಯಲ್ಲಿಯ ಸದರಿ ನಮೂದು ಹಿಂಪಡೆಯಲಾಗಿದೆ ಎಂದು ಹೇಳಿದರು,ಅಧಿಕಾರಿಗಳು ಕ್ರಮ ಜರುಗಿಸದೆ ಹೊಸದಾಗಿ ನೋಟಿಸ ನಿಡುತ್ತಿರುವದು ಖಂಡನೀಯವಾಗಿದೆ ಎಂದರು
ಸಾಮಾನ್ಯವಾಗಿ ತಂಟೆ-ತಕರಾರು ಬಂದರೆ ದೇಶದ ಪ್ರತಿಯೊಬ್ಬ ಪ್ರಜೆಯು ಟ್ರಯಲ್ ಕೋರ್ಟಿನಿಂದ ಸುಪ್ರಿಂ ಕೋರ್ಟಿನವರೆಗೂ ವಿಚಾರಣೆ ನಡೆಯುತ್ತದೆ. ಆದರೆ ಬೋರ್ಡಿಗೆ ಸಂಬಂಧಿಸಿದ ಯಾವುದೇ ತಕರಾರಿನ ವಿಚಾರಣೆ ಏಕಪಕ್ಷಿಯ ಸದಸ್ಯರನ್ನೊಳಗೊಂಡಿರುವ ಬೋರ್ಡಿನಲ್ಲಿ ನಡೆಯುತ್ತಿದೆ. ಮಂಡಳಿಯ ವಿರುದ್ಧವೇ ತಕರಾರಿದ್ದರು ಅದೇ ಮಂಡಳಿ ಸದಸ್ಯರು ಕೈಗೊಳ್ಳುವ ನಿರ್ಧಾರಗಳೇ ಇಲ್ಲಿ ಅಂತಿಮ, ಮಂಡಳಿ ನಿರ್ಧಾರದ ವಿರುದ್ಧ ಬೇರೆಲ್ಲೂ ಮೇಲ್ಮನವಿ ಹೋಗುವಂತಿಲ್ಲ ಇದೊಂದು ಅಸಂವಿಧಾನಿಕ ಕ್ರಮವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಹೊರಡಿಸಿರುವ ವಕ್ಸ್ ಸಂಬಂಧಿ ಅಧಸೂಚನೆಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಪಾಳಾದ,ಶ್ರೀ ಷ.ಬ್ರ. ಗುರುಮೂರ್ತಿ ಶಿವಾಚಾರ್ಯರು,ಶ್ರೀನಿವಾಸ ಸರಡಗಿಯ,ಶ್ರೀ ಷ.ಬ್ರ. ರೇವಣಸಿದ್ದ ಶಿವಾಚಾರ್ಯರು,ಕಡಗಂಚಿಯು,ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯರು,ಬಬಲಾದ ದೇವಾಪೂರದ,ಶ್ರೀ ಷ.ಬ್ರ. ಶಿವಮೂರ್ತಿ ಶಿವಾಚಾರ್ಯರು,ಗದ್ದುಗೆ ಮಠ ಮಕ್ತಂಪೂರದ,ಶ್ರೀ ಚರಲಿಂಗ ಮಹಾಸ್ವಾಮಿಗಳು,ಶ್ರೀನಿವಾಸ ಸರಡಗಿಯ,ಶ್ರೀ ಅಪ್ಪಾರಾವ ದೇವಿ ಮುತ್ಯಾ,ಬೆಳಗುಂಪಾದ,ಶ್ರೀ ಷ.ಬ್ರ. ಪರ್ವತೇಶ್ವರ ಶಿವಾಚಾರ್ಯರು,ಶ್ರೀ ಮಲ್ಲಿನಾಥ ಕೆ. ಮುಜ್ಜಿ,ಶ್ರೀ ಪ್ರಶಾಂತ ಗುಡ್ಡಾ,ಲ ತಂಬಾಕೆ,ಶ್ರೀ ಶಿವರಾಜ ಸಂಗೋಳಗಿ,ಶ್ರೀಶೈಲ ಮೂಲಗೆ,ಶ್ರೀ ದಯಾನಂದ ಪಾಟೀಲ,ಶ್ರೀ ಅಶ್ವಿನಕುಮಾರ,ಶ್ರೀ ಪ್ರಶಾಂತ ಗುಡ್ಡಾ ಸೇರಿದಂತೆ ಪಾಲ್ಗೊಂಡಿದ್ದರು