ಕ್ರಿಕೆಟ್ ಸಂಸ್ಥೆಯ ಸದಸ್ಯ ವೆಂಕಟೇಶ್ ಪ್ರಸಾದ್ ಅವರಿಗೆ ಸನ್ಮಾನ
ಕ್ರಿಕೆಟ್ ಸಂಸ್ಥೆಯ ಸದಸ್ಯ ವೆಂಕಟೇಶ್ ಪ್ರಸಾದ್ ಅವರಿಗೆ ಸನ್ಮಾನ
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನೂತನ ಸದಸ್ಯ ವೆಂಕಟೇಶ್ ಪ್ರಸಾದ್ ಅವರಿಗೆ ಕಲಬುರಗಿಯ ನೂತನ ವಿದ್ಯಾಲಯ ಸಂಸ್ಥೆಯಿಂದ ಸನ್ಮಾನ
ಬೆಂಗಳೂರು/ಕಲಬುರಗಿ: ಇತ್ತೀಚೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಸಂಘ)ಗೆ ನೂತನವಾಗಿ ಆಯ್ಕೆಯಾದ ಮಾಜಿ ಕ್ರಿಕೆಟಿಗ ಶ್ರೀ ವೆಂಕಟೇಶ್ ಪ್ರಸಾದ್ ಅವರನ್ನು ಕಲಬುರಗಿಯ ನೂತನ ವಿದ್ಯಾಲಯ ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಅಭಿಜೀತ್ ದೇಶಮುಖ್ ಅವರ ನೇತೃತ್ವದಲ್ಲಿ, ಸದ್ಯಸರುಗಳಾದ ಡಾ. ಗಿರೀಶ್ ಗಲಗಲಿ, ಸುಹಾಸ್ ಖಣಗೆ ಹಾಗೂ ಪ್ರಕಾಶ ಅಯ್ಯಳಕರ ಅವರು ಬೆಂಗಳೂರು ನಗರಕ್ಕೆ ತೆರಳಿ ನಿಯೋಗದ ಮೂಲಕ ಗೌರವ ಸಲ್ಲಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ವೆಂಕಟೇಶ್ ಪ್ರಸಾದ್, ಕಲಬುರಗಿಯ ಪ್ರತಿಷ್ಠಿತ ನೂತನ ವಿದ್ಯಾಲಯ ಸಂಸ್ಥೆಯ ಪರವಾಗಿ ಸನ್ಮಾನ ಸ್ವೀಕರಿಸಿದ್ದು ಸಂತೋಷ ತಂದಿದೆ ಎಂದು ಹೇಳಿದರು. ಕ್ರೀಡೆಗೆ ಮಹತ್ವ ನೀಡುವ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿದಿದ್ದು, ಮುಂದಿನ ದಿನಗಳಲ್ಲಿ ಸಂಸ್ಥೆಗೆ ಭೇಟಿ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದರು.
ಈ ವಿಷಯವನ್ನು ಸಂಸ್ಥೆಯ ಗುರುರಾಜ್ ಎಂ. ಧಮ್ಮರಕರ ಅವರು ತಿಳಿಸಿದ್ದಾರೆ.
