ಮುಖ್ಯ ಕಾರ್ಯದರ್ಶಿಯ ಅವಮಾನ ಖಂಡನಾರ್ಹ: ಎನ್. ರವಿಕುಮಾರ್ ವಿರುದ್ಧ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ ಆಕ್ರೋಶ

ಮುಖ್ಯ ಕಾರ್ಯದರ್ಶಿಯ ಅವಮಾನ ಖಂಡನಾರ್ಹ: ಎನ್. ರವಿಕುಮಾರ್ ವಿರುದ್ಧ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ ಆಕ್ರೋಶ

ಮುಖ್ಯ ಕಾರ್ಯದರ್ಶಿಯ ಅವಮಾನ ಖಂಡನಾರ್ಹ: ಎನ್. ರವಿಕುಮಾರ್ ವಿರುದ್ಧ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ ಆಕ್ರೋಶ

ಮಾನ್ಯ ಮುಖ್ಯ ಕಾರ್ಯದರ್ಶಿಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಧಾಪರಿಷತ್ ಸದಸ್ಯ ರವಿಕುಮಾರ್ ಎನ್ ಖಂಡನೆಗೆ ಗುರಿ

ಬೆಂಗಳೂರು, ಜು.3:ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿರುವ ಶ್ರೀ ಎನ್. ರವಿಕುಮಾರ್ ಅವರು ರಾಜ್ಯ ಸರ್ಕಾರದ ಮಾನ್ಯ ಮುಖ್ಯ ಕಾರ್ಯದರ್ಶಿಯಾದ ಶ್ರೀಮತಿ ಶಾಲಿನಿ ರಜನೀಶ್ ಐ.ಎ.ಎಸ್ ಅವರ ವಿರುದ್ಧ ಅವಹೇಳನಕಾರಿ ಭಾಷೆ ಬಳಕೆ ಮಾಡಿರುವ ಬಗ್ಗೆ, ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ವಿವಿಧ ವಾರ್ತಾ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸಿರುವ ರವಿಕುಮಾರ್ ಅವರ ಹೇಳಿಕೆಗಳಲ್ಲಿ ಮುಖ್ಯ ಕಾರ್ಯದರ್ಶಿಯವರ ವೈಯಕ್ತಿಕ ಹಾಗೂ ಹುದ್ದೆಯ ಗೌರವಕ್ಕೆ ಧಕ್ಕೆಯಾಗುವಂತೆ ಮಾತನಾಡಿರುವುದಾಗಿ ಸಚಿವಾಲಯ ನೌಕರರ ಸಂಘ ಗಂಭೀರವಾಗಿ ಗಮನಿಸಿದೆ.

“ಮುಖ್ಯ ಕಾರ್ಯದರ್ಶಿಯ ಹುದ್ದೆ ರಾಜ್ಯದ ಆಡಳಿತ ವ್ಯವಸ್ಥೆಯ ಅತ್ಯುನ್ನತ ಸ್ಥಾನವಾಗಿದ್ದು, ಆಡಳಿತದ ಸರಳತೆ ಹಾಗೂ ಸಮರ್ಪಕ ನಿರ್ವಹಣೆಗೆ ಅವಿಭಾಜ್ಯವಾಗಿರುತ್ತದೆ. ಅಂತಹ ಹುದ್ದೆಯ ಅಧಿಕಾರಿಗೆ ಗೌರವ ತೋರಿಸಬೇಕಾದಲ್ಲಿ, ಅವಹೇಳನಕಾರಿ ಭಾಷೆ ಬಳಸಿರುವುದು ಪ್ರಜ್ಞಾವಂತ ಜನಪ್ರತಿನಿಧಿಗೆ ತಕ್ಕದಲ್ಲ,” ಎಂದು ರಮೇಶ್ ಸಂಗಾ ಹೇಳಿದ್ದಾರೆ.

ಈ ಕೃತ್ಯವನ್ನು ಅಕ್ಷಮ್ಯವೆಂದು ಪರಿಗಣಿಸಿರುವ ಸಚಿವಾಲಯ ನೌಕರರ ಸಂಘ, ಕೂಡಲೇ ರವಿಕುಮಾರ್ ಎನ್. ಅವರು ವಿಷಾದ ವ್ಯಕ್ತಪಡಿಸಿ, ಮಾನ್ಯ ಮುಖ್ಯ ಕಾರ್ಯದರ್ಶಿಯವರಲ್ಲಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದೆ. ಹಾಗೆಯೇ ಇನ್ನುಮುಂದೆ ಯಾವುದೇ ಜನಪ್ರತಿನಿಧಿಗಳು ಸರ್ಕಾರಿ ಅಧಿಕಾರಿಗಳ ಕುರಿತು ಅಸಾಂವಿಧಾನಿಕ ಅಥವಾ ಅವಹೇಳನಕಾರಿ ಪದ ಬಳಕೆ ಮಾಡಿದರೆ, ಸಂಘ ಉಗ್ರವಾಗಿ ಪ್ರತಿಭಟಿಸುವ ಎಚ್ಚರಿಕೆಯನ್ನು ನೀಡಿದೆ.