ಹಿರಿಯರನ್ನು ಕೊನೆಗಾಲದಲ್ಲಿ ಯುವಜನ ಸೇವೆ ಮಾಡಿ :ಹಣಮಂತಪ್ಪ ಸೇಡಂಕರ್

ಹಿರಿಯರನ್ನು ಕೊನೆಗಾಲದಲ್ಲಿ ಯುವಜನ ಸೇವೆ ಮಾಡಿ :ಹಣಮಂತಪ್ಪ ಸೇಡಂಕರ್

ಹಿರಿಯರನ್ನು ಕೊನೆಗಾಲದಲ್ಲಿ ಯುವಜನರು ಸೇವೆ ಮಾಡಿ :ಹಣಮಂತಪ್ಪ ಸೇಡಂಕರ್

ಶಹಾಬಾದ್: ಯುವಜನರು ಸಂಪಾದನೆಯ ಬೇಟೆಗೆ ಬಿದ್ದು ಊರು ತೊರೆದು ಹೋಗುವ ಅಥವಾ ಸಂಗಾತಿಯ ಮಾತಿಗೆ ಕಟ್ಟುಬಿದ್ದು ಕುಟುಂಬ ತೊರದು ಹೋಗುವ ಪ್ರವೃತ್ತಿ ಅಥವಾ ಪರಿಸ್ಥಿತಿ ಹೆಚ್ಚುತ್ತಿದೆ.ನಮ್ಮ ಬದುಕಿಗೆ ದಾರಿ ಮಾಡಿಕೊಟ್ಟ ಹಿರಿಯ ನಾಗರಿಕರ ಕೊನೆಗಾಲದ ಬದುಕನ್ನು ಹಸನುಗೊಳಿಸುವುದು ಪ್ರತಿಯೊಬ್ಬ ಯುವಜನರ ಕರ್ತವ್ಯ. ಎಂದು ಸಮಾಜಶಾಸ್ತ್ರದ ಮುಖ್ಯಸ್ಥ.ಹಣಮಂತಪ್ಪ ಸೇಡಂಕರ್ ಹೇಳಿದರು.

ನಗರದ ಹೈ.ಕ.ಶಿಕ್ಷಣ ಸಂಸ್ಥೆಯ ಎಸ್ ಎಸ್ ಮರಗೋಳ ಪದವಿ ಮಹಾವಿದ್ಯಾಲಯದಲ್ಲಿ.ಐಕ್ಯೂಎಸಿ. ಎನ್.ಎಸ್.ಎಸ್. ಸಮಾಜಶಾಸ್ತ್ರದ ವಿಭಾಗದ ವತಿಯಿಂದ.ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ. ಶ್ರೀ ಸುಭಾಷ್ ಇಂಗಿನ್ ಶೆಟ್ಟಿ ಮಾತನಾಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ.ಬಿ.ಬಿಲ್ಲವ್. ಮಾತನಾಡಿ ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದು ಕಾಣುತ್ತೇವೆ ಕುಟುಂಬದಲ್ಲಿ ಹಿರಿಯರು ಇರುವುದರಿಂದ ನಮ್ಮ ಜೀವನ ಸುಂದರವಾಗಿ ಇರಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ. ಎಮ್.ಕೆ.ಭೋತಗಿ. ಡಾ. ಸೋಮಶೇಖರ್.ಡಾ. ವೆಂಕಟೇಶ್ ಪೂಜಾರಿ. ಡಾ . ಶ್ರೀಮಂತ್ ಹೂವಿನಹಳ್ಳಿ. ಡಾ.ಕಾವೇರಿ . ಕೆ.ಟಿ.ಚೌಹಾನ್. ವಿಶಾಲ್. ಡಾ.ಸುರೇಖಾ. ಸ್ವಾಗತಿಸಿದರು. ಶಿವಶಂಕರ ಹಿರೇಮಠ ಕಾರ್ಯಕ್ರಮ ನಿರೋಪಿಸಿ . ಶಿವಕುಮಾರ್ ಕುಸಾಳೆ. ವಂದಿಸಿ.ಹಾಗೂ ಕಾಲೇಜಿನ ಬೋಧಕ ಬೋಧಕೇತರ ವಿದ್ಯಾರ್ಥಿಗಳು. ಉಪಸ್ಥಿತರಿದ್ದರು.