ವಿದ್ಯಾರ್ಥಿಗಳಿಗೆ ಜೀವನದಲ್ಲಿ ತಾಳ್ಮೆ ಎಂಬುದು ಬಹು ಮುಖ್ಯವಾಗಿರುತ್ತದೆ : ಶಿವಶರಣ ಬಿ.ಗೊಳ್ಳೆ
ವಿದ್ಯಾರ್ಥಿಗಳಿಗೆ ಜೀವನದಲ್ಲಿ ತಾಳ್ಮೆ ಎಂಬುದು ಬಹು ಮುಖ್ಯವಾಗಿರುತ್ತದೆ : ಶಿವಶರಣ ಬಿ.ಗೊಳ್ಳೆ
ಕಲಬುರಗಿ: ಕರ್ನಾಟಕ ಪೀಪಲ್ಸ್ಏಜ್ಯುಕೇಶನ್ ಸೊಸೈಟಿಯ ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯಲ್ಲಿ ಐಕ್ಯೂಎಸಿ ಅಡಿಯಲ್ಲಿಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ವಾರ್ಷಿಕೋತ್ಸವವನ್ನು ಕಾಲೇಜು ಶಿಕ್ಷಣ ಪ್ರಾದೇಶಿಕ ಕಛೇರಿ ಜಂಟಿ ನಿರ್ದೇಶಕರಾದ ಶಿವಶರಣ ಬಿ.ಗೊಳ್ಳೆ ಅವರು ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಜೀವನದಲ್ಲಿ ತಾಳ್ಮೆ ಎಂಬುದು ಬಹು ಮುಖ್ಯವಾಗಿರುತ್ತದೆ ಎಂದು ಸಂದೇಶಕೊಟ್ಟರು. ಅದರಲ್ಲೂ ವಕೀಲ ವೃತ್ತಿಯನ್ನು ಕೈಗೊಳ್ಳುವ ವ್ಯಕ್ತಿಗಳು ಯಾವುದೇ ಪ್ರಕರಣವನ್ನು ತಾಳ್ಮೆಯಿಂದಅಭ್ಯಾಸ ಮಾಡಿ ಅದರ ಎಲ್ಲಾ ನಾಜೂಕುಗಳನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಂಡು ಬಡವರಿಗೆ-ಬಲ್ಲದವರಿಗೆ ನ್ಯಾಯ ಕೊಡಿಸುವುದು ಅವರ ಆದ್ಯಕರ್ತವ್ಯವೆ ಓದು ಓದು ಓದು ಇದು ವಕೀಲರ ಸಂಪತ್ತು ಎಂದು ಹೇಳಿದರು.
ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಕೆ.ಪಿ.ಇ.ಸೊಸೈಟಿ ಆಡಳಿತ ಅಧಿಕಾರಿ ಡಾ.ಚಂದ್ರಶೇಖರ್ ಶೀಲವಂತ ಮಾತನಾಡಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಇನ್ನೂ ಮುಂದೆ ವಕೀಲ ವೃತಿಯನ್ನು ಪ್ರಾರಂಭಿಸುವವರು ಬಹಳ ಶ್ರದ್ಧೆಯಿಂದ ಕಾನೂನುಗಳನ್ನು ಓದಿ ಅದನ್ನುತಮಗೆ ಬಂದ ಪ್ರಕರಣಗಳಿಗೆ ಕೂಲುಂಕುಷವಾಗಿ ನಿರೀಕ್ಷೀಸಿ ಅನ್ವಯ ಮಾಡುವುದನ್ನು ಕಲಿಯುವುದು ಇಂದಿನ ದಿನದಲ್ಲಿಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಅದೇರೀತಿಯಲ್ಲಿ ವಿದ್ಯಾರ್ಥಿಗಳಿಗೆ ತಮ್ಮಜೀವನವು ಯಶಸ್ವಿಯಾಗಲಿ ಮತ್ತು ಒಳ್ಳೆಯದಾಗಲಿ ಎಂದು ಶುಭಕೋರಿದರು.
ಅಧ್ಯಕ್ಷತೆ ಸ್ಥಾನ ವಹಿಸಿದಂತಹ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ಚಂದ್ರಶೇಖರ್ ಅವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಹೆಚ್ಚಿನಜ್ಞಾನವು ಇಂದಿನ ಜಗತ್ತಿನ ಸಂಪತ್ತು ಎಂದು ಹೇಳಿ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಿದರು.
ವರ್ಷದಅಂತಿಮ ವಿದ್ಯಾರ್ಥಿಗಳಿಗೆ ಹಲವಾರು ಪಂದ್ಯಗಳನ್ನು ಹಾಗೂ ಸ್ಪರ್ಧೆಗಳನ್ನು ಎರ್ಪಡಿಸಲಾಗಿತ್ತು. ಎಲ್ಲ ಮಹನೀಯರ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಂಚಿದರು.
ಈ ಸಮಾರಂಭದಲ್ಲಿ ವಿದ್ಯಾರ್ಥಿಯಾದ ಸುಮಿತ್ ಬುದ್ಧ ವಂದನೆ ನಡೆಸಿಕೊಟ್ಟರು, ಸ್ವಾಗತವನ್ನು ವಿನೋದ ನಡೆಸಿಕೊಟ್ಟರು. ನಾಗರಾಜ ಮತ್ತು ಪೂಜಾ ಸಮಾರಂಭನ್ನು ನಡೆಸಿಕೊಟ್ಟರು. ರಾಜೇಂದ್ರ ಶಿಂಧೆ, ಡಾ.ತಿಪ್ಪೇಸ್ವಾಮಿ ಸೇರಿದತೆ ಉಪನ್ಯಾಸಕರು, ಅರೆಉಪನ್ಯಾಸಕರು, ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದರು.