ದೇಹದ ಸದೃಢತೆಗೆ ಕ್ರೀಡೆ ಮುಖ್ಯ ತಹಸಿಲ್ದಾರ ಜಗದೀಶ ಚೌರ್ ಸಲಹೆ ನೀಡಿದರು.

ದೇಹದ ಸದೃಢತೆಗೆ ಕ್ರೀಡೆ ಮುಖ್ಯ ತಹಸಿಲ್ದಾರ ಜಗದೀಶ ಚೌರ್ ಸಲಹೆ ನೀಡಿದರು.

ದೇಹದ ಸದೃಢತೆಗೆ ಕ್ರೀಡೆ ಮುಖ್ಯ ತಹಸಿಲ್ದಾರ ಜಗದೀಶ ಚೌರ್ ಸಲಹೆ ನೀಡಿದರು.

ಶಹಾಬಾದ್: ಪ್ರತಿಯೊಬ್ಬರು ತಮ್ಮ ಆರೋಗ್ಯ ಮತ್ತು ದೇಹದ ಸದೃಢತೆಯನ್ನು ಕಾಪಾಡಿಕೊಳ್ಳಲು ಕ್ರೀಡೆಯ ಬಹು ಮುಖ್ಯ ಪಾತ್ರ ವಹಿಸುತ್ತದೆ, ಪ್ರತಿಯೊಬ್ಬರು ದಿನನಿತ್ಯ ಕ್ರೀಡೆಯನ್ನು ಆಡಬೇಕು, ವಿದ್ಯಾರ್ಥಿಗಳು ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯಿಂದ ಕ್ರೀಡೆಯನ್ನು ಆಡಬೇಕು ಎಂದು ತಾಲೂಕು ತಹಸಿಲ್ದಾರ ಜಗದೀಶ ಚೌರ್ ಸಲಹೆ ನೀಡಿದರು.

ನಗರದ ಬಾಲ ವಿದ್ಯಾ ಮಂದಿರ ಶಾಲೆಯ ಆವರಣದಲ್ಲಿ ಐದು ದಿನಗಳ ಕಾಲ ನಡೆಯುವ ಶಹಾಬಾದ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದ ಧ್ವಜಹರಣವನ್ನು ನೆರವೇರಿಸಿ ಅವರು ಮಾತನಾಡಿದರು.

ಶಹಾಬಾದ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಕಾಡ ಅಧ್ಯಕ್ಷರಾದ ಡಾ. ಎಂ.ಎ ರಶೀದ್ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಚನ್ನಬಸಪ್ಪ ಕೊಲ್ಲುರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ದೈಹಿಕ ಶಿಕ್ಷಣ ತುಂಬಾ ಅಗತ್ಯವಾಗಿದೆ. ದೈಹಿಕ ಮಾನಸಿಕವಾಗಿ ಅವರು ಸದೃಢರಾಗಲು ದೈಹಿಕ ಶಿಕ್ಷಣ ಅತ್ಯವಶ್ಯಕವಾಗಿ ಬೇಕು. ಆದರೆ ಸರ್ಕಾರ 17 ವರ್ಷದಿಂದ ದೈಹಿಕ ಶಿಕ್ಷಕರ ನೇಮಕಾತಿ ಮಾಡಿಕೊಳ್ಳದೆ ಇರುವುದು ನೋವಿನ ಸಂಗತಿ ಎಂದರು. ದೈಹಿಕ ಶಿಕ್ಷಕರು ಇಲ್ಲದೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕಗಳು ತರುವುದಾದರೂ ಹೀಗೆ ಎಂದು ಕಳವಳ ವ್ಯಕ್ತಪಡಿಸಿದರು.

ವೇದಿಕೆಯ ಮೇಲೆ ಬಿಆರಸಿ ಮಲ್ಲಿಕಾರ್ಜುನ್ ಸೇಡಂ, ಶಿವಶರಣಪ್ಪ ಮಠಾಳೆ, ಬಸವರಾಜ ಬಳ್ಳೋಡಗಿ, ಚಿದಾನಂದ ಕುಡ್ಡನ, ಶಿವಪುತ್ರಪ್ಪ ಕರಣಿಕ, ಸಂತೋಷ ಸಲಗಾರ, ಎಚ್. ವೈ .ರೆಡ್ಡಿ, ಸಿದ್ದಲಿಂಗ ಬುಳ್ಳ, ಪ್ರವೀಣ್ ಹೆರೂರ ಈರಣ್ಣ ಕೊಲ್ಲೂರ, ವಿಜಯಲಕ್ಷ್ಮಿ ಪಾಟೀಲ್ ಮತ್ತು ಎಲ್ಲಾ ಸಿ ಆರ್ ಪಿ ಅಧಿಕಾರಿಗಳು ಹಾಗೂ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ದೈಹಿಕ 

ಈ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಒಟ್ಟು 29 ಶಾಲೆಯಿಂದ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳ ತಂಡಗಳು ಮತ್ತು ಶಿಕ್ಷಕರು ಆಗಮಿಸಿದ್ದರು, ದೈಹಿಕ ಶಿಕ್ಷಕರಾದ ಬನ್ನಪ್ಪ ಸೈದಾಪುರ ಕಾರ್ಯಕ್ರಮವನ್ನು ನಿರ್ವಹಿಸಿದ್ದರು.