ದೊಡ್ಡಪ್ಪ ಅಪ್ಪ ಪಿ ಯು ಕಾಲೇಜಿನಲ್ಲಿ ವಿಜ್ಞಾನ ಉತ್ಸವ

ದೊಡ್ಡಪ್ಪ ಅಪ್ಪ ಪಿ ಯು ಕಾಲೇಜಿನಲ್ಲಿ  ವಿಜ್ಞಾನ ಉತ್ಸವ

ದೊಡ್ಡಪ್ಪ ಅಪ್ಪ ಪಿ ಯು ಕಾಲೇಜಿನಲ್ಲಿ ವಿಜ್ಞಾನ ಉತ್ಸವ 

ಕಲಬುರಗಿ: ಕಾರ್ಯಗಾರ 2025 ನಗರದ ದೊಡ್ಡಪ್ಪ ವಸತಿ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ 2025ರ 16ನೇ ವಿಜ್ಞಾನ ಉತ್ಸವ ಕಾರ್ಯಗಾರವನ್ನು ಡಾಕ್ಟರ್ ಅಲ್ಲಮ ಪ್ರಭು ದೇಶಮುಖ್ ಅವರು ಉದ್ಘಾಟಿಸಿದರು. ತಮ್ಮ ಹಿತ ನುಡಿಗಳನ್ನಾಡುತ ಕಲ್ಯಾಣ ಕರ್ನಾಟಕ ಭಾಗಕ್ಕೆ ಡಾಕ್ಟರ್ ಶರಣಬಸಪ್ಪ ಅಪ್ಪ ಅವರ ಶೈಕ್ಷಣಿಕ ಕೊಡುಗೆ ಅಪಾರವಾದದ್ದು ಎಂದು ನುಡಿದರು.

ಮುಖ್ಯ ಅತಿಥಿಗಳಾದ ಡಾಕ್ಟರ ಸೋಹಿಲ್ ಶಾಹಿ ಅವರು ನುಡಿಗಳನ್ನಾಡುತ ವಿದ್ಯಾರ್ಥಿಗಳು ಅಧ್ಯಯನದ ಯೋಜನೆ ಇರಿಸಿಕೊಳ್ಳಬೇಕು ಯೋಜನೆ ಇಲ್ಲದ ಯಾವುದೇ ಕೆಲಸ ಯಶಸ್ವಿ ಯಾಗಲಾರದು ಪರೀಕ್ಷೆಯಲ್ಲಿ ವಿಷಯಗಳ ಅಧ್ಯಯನಕ್ಕೆ ಪೂರ್ವ ಯೋಜನೆ ಅತ್ಯಂತ ಅವಶ್ಯಕವಾಗಿದೆ. ಸಹ ಸಂಬಂಧ ಸ್ಮೃತಿ ಅತ್ಯಂತ ಅವಶ್ಯಕವಾಗಿದೆ. ಕೊನೆಯ ಕ್ಷಣದ ಒತ್ತಡ ಮಾಡಿಕೊಳ್ಳುವುದಕ್ಕಿಂತ ಪೂರ್ವ ಯೋಜನೆ ಅತ್ಯಂತ ಅವಶ್ಯಕವಾಗಿದೆ. ದೈಹಿಕವಾಗಿ ಆಟವಾಡುವುದು ಕೂಡ ಅವಶ್ಯಕವಾಗಿದೆ. ಮೊಬೈಲ್ಗಳು ಅಧ್ಯಯನಕ್ಕೆ ಪೂರಕವಾಗಿರುವುದಕ್ಕಿಂತ ಮಾರಕವಾಗಿದೆ.

ಆದರ್ಶ ಗೋಖಲೆಯವರು ಮಾತನಾಡುತ್ತಾ ವ್ಯಕ್ತಿತ್ವವಂತನಿಗೆ ಜಗತ್ತು ಗುರುತಿಸುತ್ತದೆ ವ್ಯಕ್ತಿಯ ಜ್ಞಾನ, ಸೌಂದರ್ಯ, ದೈಹಿಕ ಶಕ್ತಿಕಿಂತ ಅವನ ವ್ಯಕ್ತಿತ್ವದಿಂದ ಜನ ಗುರುತಿಸುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಹನುಮಂತನಂತಹ ಶಕ್ತಿ ಎಲ್ಲಾ ವಿದ್ಯಾರ್ಥಿಗಳಲ್ಲಿ ಇದೆ. ಆದರೆ ಅದರ ಜಾಗೃತಿಗೊಳಿಸಲು ಪ್ರೇರಣೆಯೂ ಅವಶ್ಯಕವಾಗಿದೆ.ಕಷ್ಟಗಳು ಬಂದಾಗ ಜೀವನದಲ್ಲಿ ನಗುನಗುತ ಎದುರಿಸಬೇಕು ಒಬ್ಬರೇ ಇದ್ದಾಗ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಧನಾತ್ಮಕ ಆಲೋಚನೆಗಳು ಬರಬೇಕು ವಿದ್ಯಾರ್ಥಿಗಳ ಜೀವನದಲ್ಲಿ ಎಂತಹ ವಿಚಾರಗಳು ತಲೆಯಲ್ಲಿ ಇರುತ್ತವೆಯೋ ಅಂತಹ ವ್ಯಕ್ತಿಯಾಗಿ ಬೆಳೆಯುತ್ತಾನೆ. ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾಗಿದ್ದಾಗ ಅಮೆರಿಕದಿಂದ ಕಳಪೆ ಗೋಧಿ ಭಾರತಕ್ಕೆ ಬರುತ್ತಿತ್ತು ಆದ್ದರಿಂದ ಭಾರತೀಯರಿಗೆ ಶಾಸ್ತ್ರೀ ಅವರು ಪ್ರತಿ ಸೋಮವಾರ ಒಂದು ಹೊತ್ತು ಊಟ ಮಾಡಿ ಎಂದು ಕರೆ ನೀಡಿದರು ಭಾರತೀಯರ ಹಾಗೆ ನಡೆದುಕೊಂಡರು.

ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಮಕೃಷ್ಣ ರೆಡ್ಡಿ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಪ್ರಾಚಾರ್ಯರಾದ ವಿನೋದ್ ಕುಮಾರ ಪತಂಗೆ ಸ್ವಾಗತಿಸಿದರು. ಕಲ್ಬುರ್ಗಿ ಉತ್ತರ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿರಾದರ್ ಅವರು ಮಾತನಾಡಿದರು. ಕಲಬುರ್ಗಿ ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿಜಯಕುಮಾರ್ ಜಮಖಂಡಿ ಅವರು ಉಪಸ್ಥಿತರಿದ್ದರು.