ಶುಭ ದೃಷ್ಟಿಗಳಾಗಿ - ಹಾರಕೂಡ ಶ್ರೀ

ಶುಭ ದೃಷ್ಟಿಗಳಾಗಿ - ಹಾರಕೂಡ ಶ್ರೀ

ಶುಭ ದೃಷ್ಟಿಗಳಾಗಿ - ಹಾರಕೂಡ ಶ್ರೀ

 ಎಲ್ಲೆಡೆ ಶಿವಾಂಶ ತುಂಬು ತುಳುಕುತ್ತಿರುವ ಈ ಸುಂದರ ಜಗತ್ತಿನಲ್ಲಿ ಪ್ರತಿಯೊಬ್ಬರೂ ಶುಭ ದೃಷ್ಟಿಗಳಾಗಿರಬೇಕು, ಎಲ್ಲದರಲ್ಲಿ ಶುಭವನ್ನು ಕಾಣುವ, ಶುಭವನ್ನು ಹಂಚುವ, ಶುಭವನ್ನು ಸೃಷ್ಟಿಸುವ ಶುಭ ಮನಸುಳ್ಳವರಾಗಿರಬೇಕು ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.

 ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯ 2015-16ನೇ ಸಾಲಿನ ವಿದ್ಯಾರ್ಥಿಗಳಿಂದ ಆಯೋಜಿಸಿದ ಗುರುವಂದನೆ ಹಾಗೂ 863ನೇ ತುಲಾಭಾರ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ನಮ್ಮ ಮನಸ್ಸು ಶುಭದ ಗಣಿಯಾದಾಗ ಶುಭ ಕಾರ್ಯಗಳು, ಸಮಾಜೋನ್ನತಿ ಕಾರ್ಯಗಳು ಫಲಿಸುತ್ತವೆ.

 ಗುರುವಿನ ಸಾನಿಧ್ಯದಲ್ಲಿ ಕೈಗೊಳ್ಳುವ ಸತ್ಕಾರ್ಯಗಳು ಸಮಾಜದಲ್ಲಿ ಶುಭದ ಬೆಳಕು ಚೆಲ್ಲುತ್ತವೆ.

 ಹಾಗಾಗಿ ಎಲ್ಲದಕ್ಕೂ ಗುರು ಕಾರುಣ್ಯ ಭದ್ರ ಬುನಾದಿಯನ್ನು ಒದಗಿಸಿಕೊಡುತ್ತದೆ.

 ಎಲ್ಲರಿಗೂ ಒಳಿತನ್ನು ಬಯಸುವ ಮನಸ್ಸಿದ್ದರೆ ನಮ್ಮ ಬದುಕು ಕೂಡ ಒಳಿತಿನಿಂದ ಸಂಭ್ರಮಿಸುತ್ತದೆ ಎಂದು ನುಡಿದರು.

 ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯ 2015-16ನೇ ಸಾಲಿನ ವಿದ್ಯಾರ್ಥಿಗಳ ಧರ್ಮ ಕಾರ್ಯ ನಮಗೆ ಖುಷಿ ನೀಡಿದ್ದು, ಎಲ್ಲರ ಬಾಳು ಶ್ರೇಯಸ್ಸಿನಿಂದ ಕೂಡಿರಲಿ ಎಂದು ಶುಭ ಹಾರೈಸಿದರು.

 ಪ್ರವೀಣ ರೆಡ್ಡಿ ಅನಿಸಿಕೆ ವ್ಯಕ್ತಪಡಿಸಿದರು.

 ಡಾ. ಜ್ಯೋತಿ ಹೋಗಾರ, ಡಾ. ಯೋಗೇಶ್ವರಿ ಹೂಗಾರ, ಡಾ. ನವೀನ ಹೂಗಾರ, ಡಾ. ಶ್ರೀಶೈಲ ಪಾಟೀಲ, ಪರಮೇಶ್ವರ ಹೊಳಕುಂದೆ, ಪಂಡಿತ ಪೂಜಾರಿ, ಡಾ. ರಾಜಶೇಖರ ಮದರಿ ಮುಂತಾದವರು ಉಪಸ್ಥಿತರಿದ್ದರು.

 ವೀರಣ್ಣಗೌಡ ಸ್ವಾಗತಿಸಿದರು.

 ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು.

 ಅಂಬರೀಶ ರೆಡ್ಡಿ ನಿರೂಪಣೆ ಮಾಡಿದರು.

 ಆಕಾಶ ರೆಡ್ಡಿ ವಂದಿಸಿದರು.

ಚಿತ್ರ : ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯ 2015-16ನೇ ಸಾಲಿನ ವಿದ್ಯಾರ್ಥಿಗಳಿಂದ ಆಯೋಜಿಸಿದ ಗುರುವಂದನೆ ಹಾಗೂ ತುಲಾಭಾರ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮವನ್ನು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸು ಉದ್ಘಾಟಿಸಿದರು.

ಡಾ. ಜ್ಯೋತಿ ಹೋಗಾರ, ಡಾ. ಯೋಗೇಶ್ವರಿ ಹೂಗಾರ, ಡಾ. ನವೀನ ಹೂಗಾರ, ಡಾ. ಶ್ರೀಶೈಲ ಪಾಟೀಲ, ಪರಮೇಶ್ವರ ಹೊಳಕುಂದೆ, ಪಂಡಿತ ಪೂಜಾರಿ, ಡಾ. ರಾಜಶೇಖರ ಮದರಿ ಉಪಸ್ಥಿತರಿದ್ದರು.