ಎಂ ಎಸ್ ಇರಾಣಿ ಪದವಿಪೂರ್ವ ಕಾಲೇಜಿನಲ್ಲಿ ನೋಡಿ ತಿಳಿ ಮಾಡಿ ಕಲಿ ಪ್ರಯೋಗ

ಎಂ ಎಸ್ ಇರಾಣಿ ಪದವಿಪೂರ್ವ ಕಾಲೇಜಿನಲ್ಲಿ ನೋಡಿ ತಿಳಿ ಮಾಡಿ ಕಲಿ ಪ್ರಯೋಗ

ಎಂ ಎಸ್ ಇರಾಣಿ ಪದವಿಪೂರ್ವ ಕಾಲೇಜಿನಲ್ಲಿ ನೋಡಿ ತಿಳಿ ಮಾಡಿ ಕಲಿ ಪ್ರಯೋಗ

ನೋಡಿ ತಿಳಿ ಮಾಡಿ ಕಲಿ ಎಂಬ ನುಡಿಯಂತೆ ಇಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಷಯದ ಅನೇಕ ಉಪಕ್ರಮಗಳನ್ನು ರಂಗೋಲಿ ಚಿತ್ರ ಬಿಡಿಸುವ ಮುಖಾಂತರ ವಿದ್ಯಾರ್ಥಿಗಳು ವಿಶೇಷ ಶೈಲಿಯಲ್ಲಿ ಅಭ್ಯಾಸ ಮಾಡಿದರು. ವಿದ್ಯಾರ್ಥಿಗಳಿಗೆ ಅರ್ಥಶಾಸ್ತ್ರ ವಿಷಯ ಬೋಧಿಸುವ ಪ್ರಾಚಾರ್ಯರಾದ ಶಿಲ್ಪಾ ಅಲ್ಲದ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದರು. ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾಧ್ಯಮ ಸಂಯೋಜಕ ಹಾಗೂ ಕಾಲೇಜಿನ ಉಪನ್ಯಾಸಕ ಐ ಕೆ ಪಾಟೀಲ್ ವಿದ್ಯಾರ್ಥಿಗಳ ಚಿತ್ರಗಳನ್ನು ವೀಕ್ಷಿಸಿ ಪ್ರಶಂಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಚಂದ್ರಶೇಖರ ಪಟ್ಟಣಕರ, ಕೃಷ್ಣವೇಣಿ ಪಾಟೀಲ್, ಸಂಗೀತಾ ಸಡಕೀನ್, ಅಶ್ವಿನಿ ಪಾಟೀಲ್, ಶ್ವೇತಾ ಶೆಟ್ಟಿ, ಭಾಗ್ಯಶ್ರೀ ಬೇನೂರ, ರುದ್ರಾಂಬಿಕಾ ಕಿರಾಣಿ, ವಿಜಯಲಕ್ಷ್ಮಿ ಶಾಬಾದಿ ಉಪಸ್ಥಿತರಿದ್ದರು