ವೀರ ಕನ್ನಡಿಗ ಸೇನೆಯ ಸಂಘಟನೆಗೆ ಪದಾಧಿಕಾರಿಗಳ ಆಯ್ಕೆ

ವೀರ ಕನ್ನಡಿಗ ಸೇನೆಯ ಸಂಘಟನೆಗೆ ಪದಾಧಿಕಾರಿಗಳ ಆಯ್ಕೆ
ಚಿಂಚೋಳಿ : ವೀರ ಕನ್ನಡಿಗರ ಸೇನೆ ಸಂಸ್ಥಾಪಕ, ಅಧ್ಯಕ್ಷರ ಆದೇಶದ ಮೆರೆಗೆ ಚಿಂಚೋಳಿ ತಾಲೂಕ ಅಧ್ಯಕ್ಷರಾಗಿ ಗೋಪಾಲ ಇಡಗೊಟ್ಟಿ, ಉಪಾಧ್ಯಕ್ಷ ಲಕ್ಷ್ಮೀಕಾಂತ ಜಮಾದಾರ ಹೂಡದಳ್ಳಿ, ಕಾರ್ಯದರ್ಶಿ ಪ್ರಶಾಂತ ಕೊಳಾರ ಸೇರಿ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ ಎಂದು ಕಲ್ಯಾಣ ಕರ್ನಾಟಕ ವಿಭಾಗ ಕಾರ್ಯಾಧ್ಯಕ್ಷ ವಿಠಲ್ ಕುಸಾಳೆ ಅವರು ತಿಳಿಸಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿದವರು, ವೀರ ಕನ್ನಡಿಗ ಸೇನೆಯ ಸಂಸ್ಥಾಪಕ, ರಾಜ್ಯ ಅಧ್ಯಕ್ಷ ಅಮೃತ ಸಿ ಪಾಟೀಲ ಅವರ ಆದೇಶದ ಮೆರೆಗೆ ಪದಾಧಿಕಾರಿಗಳ ಆಯ್ಕೆ ಮಾಡಿ ಸಂಘಟನೆಯ ಜವಾಬ್ದಾರಿ ವಹಿಸಲಾಗಿದೆ.
ಸಂಘಟನೆ ಜವಾಬ್ದಾರಿ ತೆಗೆದುಕೊಳ್ಳುವುದು ದೊಡ್ಡ ವಿಷಯವಲ್ಲ. ಅದನ್ನು ನಿರ್ವಹಿಸಿವುದು ದೊಡ್ಡ ವಿಷಯವಾಗಿದೆ. ಹೀಗಾಗಿ ವೈಯಕ್ತಿಕ ಜೀವನದ ಕೆಲಸಗಳಲ್ಲಿ ಸಮಯ ಮೀಸಲಿಟ್ಟು ಸಂಘನಟನೆಯ ಮೂಲಕ ರಾಜ್ಯದ ನಾಡು, ನುಡಿ, ಜಲ, ಮಣ್ಣು ಸಂಪತ್ತು ಉಳಿಸುವುದರ ಜತೆಗೆ ಸಮಾಜದ ನ್ಯೂನತೆಗಳನ್ನು ಜಾಗೃತಿಗೊಳಿಸುವ ಕೆಲಸ ಮಾಡುವುದರೊಂದಿಗೆ ಸಮಾಜ ಸೇವೆ ಸಲ್ಲಿಸಲು ಅಧ್ಯಕ್ಷ ಮತ್ತು ಪದಾಧಿಕಾರಿಗಳು ಅಣಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಕರಬಸಯ್ಯ ಸ್ವಾಮಿ, ಸಂಘಟಕ ಚೇತನ ನಿರಾಳಕರ್, ರೇವಣಸಿದ್ಧ ಮೋಘ, ವೀರಶೆಟ್ಟಿ, ಅಶ್ವತ್, ಸಂಗಣಗೌಡ ಪಾಟೀಲ್, ವಿಲಸನ್ ರಾಜ್, ಶಿವಾಜಿ ರಾಠೋಡ, ಅನೀಲ ಕ್ರಾಂತಿ, ಶಿವರಾಜ, ಸೋಹೆಲ್ ಖಾನ ಪೋಲಕಪಳ್ಳಿ, ಕಾರ್ತಿಕ, ಮಲ್ಲಿಕಾರ್ಜುನ, ನಾಗೇಶ,ಜಾಫರ್, ಆನಂದ, ಮಜರ್ ಸೇರಿದಂತೆ ಸಂಘಟನೆ ಸದಸ್ಯರು ಮತ್ತು ಪದಾಧಿಕಾರಿಗಳು ಇದ್ದರು.