ನಾಳೆ ಬೃಹತ್ ಪ್ರತಿಭಟನೆ ಬಿಜೆಪಿ ಕಲಬುರಗಿ

ನಾಳೆ ಬೃಹತ್ ಪ್ರತಿಭಟನೆ ಬಿಜೆಪಿ ಕಲಬುರಗಿ

ನಾಳೆ ಬೃಹತ್ ಪ್ರತಿಭಟನೆ ಬಿಜೆಪಿ ಕಲಬುರಗಿ 

ಕಲಬುರಗಿ ,ಕಲಬುರಗಿ ಜಿಲ್ಲೆ ಭಾರತೀಯ ಜನತಾ ಪಾರ್ಟಿಯಿಂದ, ನಾಳೆ ಗುರುವಾರ ದಿನಾಂಕ 22 ಆಗಸ್ಟ್ 2024 ಗುರುವಾರದಂದು ಬೆಳಗ್ಗೆ 10 ಗಂಟೆ 30 ನಿಮಿಷಕ್ಕೆ ಕಲಬುರಗಿ ನಗರದ ಸರ್ದಾರ್ ವಲ್ಲಭಾಯಿ ಪಟೇಲ್ ಚೌಕ್ ನಲ್ಲಿ ಬೃಹತ್ ಪ್ರಮಾಣದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿವರಾಜ್ ಪಾಟೀಲ್, ಚಂದು ಪಾಟೀಲ್ ಜಂಟಿಯಾಗಿ ತಿಳಿಸಿದ್ದಾರೆ.

 ರಾಜ್ಯಪಾಲರು ಪ್ರಾಶಿಕ್ಯೂಷನಗೆ ಅನುಮತಿ ಕೊಟ್ಟಿದ್ದರಿಂದ ಮುಖ್ಯಮಂತ್ರಿ ಶ್ರೀಸಿದ್ದರಾಮಯ್ಯನವರ ರಾಜೀನಾಮೆ ಆಗ್ರಹಿಸಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು ಕಲ್ಬುರ್ಗಿ ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಮಾಜಿ ಸಂಸದರು ಶಾಸಕರು ಮಾಜಿ ಶಾಸಕರು ವಿಧಾನ ಪರಿಷತ್ ಸದಸ್ಯರು ಮಾಜಿ ವಿಧಾನ ಪರಿಷತ್ ಸದಸ್ಯರು ರಾಜ್ಯ ಜಿಲ್ಲೆ ಹಾಗೂ ಮಂಡಲಗಳ ಎಲ್ಲಾ ಪದಾಧಿಕಾರಿಗಳು ಪ್ರಮುಖರು ಜನಪ್ರತಿನಿಧಿಗಳು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ನಡೆಸುವ ಪ್ರತಿಭಟನೆಯಲ್ಲಿ ಭಾಗಿಯಾಗಬೇಕು ಎಂದು ಅಧ್ಯಕ್ಷರು ಕಲಬುರ್ಗಿ ಗ್ರಾಮಾಂತರ ಜಿಲ್ಲೆ ಶ್ರೀ ಶಿವರಾಜ್ ಪಾಟೀಲ್ ರದ್ದೇವಾಡಗಿ, ಹಾಗೂ ಕಲ್ಬುರ್ಗಿ ನಗರ ಜಿಲ್ಲೆ ಅಧ್ಯಕ್ಷರಾದ ಶ್ರೀ ಚಂದು ಪಾಟೀಲ್  ತಿಳಿಸಿದರು.