ಶಹಾಬಾದ : ಜು 13 ಕ್ಕೆ ಮರಿಯಪ್ಪ ಹಳ್ಳಿ ಯವರ ಅಭಿನಂದನಾ ಸಮಾರಂಭ :..

ಶಹಾಬಾದ : ಜು 13 ಕ್ಕೆ ಮರಿಯಪ್ಪ ಹಳ್ಳಿ ಯವರ ಅಭಿನಂದನಾ ಸಮಾರಂಭ :..
ಶಹಾಬಾದ : - ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನೀಡಲಾದ ವಚನ ಪಿತಾಮಹ ಫ.ಗು.ಹಳಕಟ್ಟಿ ಪ್ರಶಸ್ತಿ ಪುರಸ್ಕೃತರಾದ ದಸಂಸ ರಾಜ್ಯ ಸಂ.ಸಂಚಾಲಕ ಮರಿಯಪ್ಪ ಹಳ್ಳಿ ಯವರ ಅಭಿನಂದನಾ ಸಮಾರಂಭ ರವಿವಾರ ಜು. 13 ರಂದು ನಡೆಯಲಿದೆ ಎಂದು ದ.ವಿ.ಒ ದ ತಾಲ್ಲೂಕ ಸಂಚಾಲಕ ಪಿ.ಎಸ.ಮೇತ್ರಿ ತಿಳಿಸಿದರು.
ಅವರು ದ.ಸಂ.ಸ ವತಿಯಿಂದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಅಂದು ಬೆಳಗ್ಗೆ 11 ಗಂಟೆಗೆ ನಗರದ ಸಹರಾ ಫಂಕ್ಷನ್ ಹಾಲ್ ನಲ್ಲಿ ನಡೆಯಲಿರುವ ಸಮಾರಂಭದ ದಿವ್ಯಾ ಸಾನಿಧ್ಯವನ್ನು ರಾವೂರಿನ ಸಿದ್ದಲಿಂಗಶ್ವರ ಮಠದ ಪೂಜ್ಯರಾದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿಕೊಳ್ಳುವರು, ಉದ್ಘಾಟನೆಯನ್ನು ಕಾಡಾ ನಿಗಮದ ಅಧ್ಯಕ್ಷ ಡಾ. ಎಂ.ಎ ರಶೀದ ನೇರವೆರಿಸುವರು, ಸಭೆಯ ಅಧ್ಯಕ್ಷತೆ ದಸಂಸ ಜಿಲ್ಲಾ ಸಂಚಾಲಕ ಮರೇಪ್ಪ ಮೇತ್ರಿ ವಹಿಕೊಳ್ಳುವರು, ಪ್ರಶಸ್ತಿ ಪುರಸ್ಕೃತರಾದ ಮರಿಯಪ್ಪ ಹಳ್ಳಿ, ಜಿ.ಪಂ.ಮಾಜಿ ಸದಸ್ಯ ಶಿವಾನಂದ ಪಾಟೀಲ ಪುಸ್ತಕ ಬಿಡುಗಡೆ ಮಾಡುವರು, ವಿಶೇಷ ಉಪನ್ಯಾಸಕರಾಗಿ ಡಾ.ಪಂಡಿತ ಬಿ ಕೆ, ಡಾ.ಶಿವರಂಜನ ಸತ್ಯಂಪೇಟ್, ಡಾ.ಕಪೀಲ ರವರು ಆಗಮಿಸುವರು.
ಮುಖ್ಯ ಅತಿಥಿಗಳಾಗಿ ನಗರ ಸಭೆಯ ಅಧ್ಯಕ್ಷೆ ಚಂಪಾಬಾಯಿ ರಾಜು ಮೇಸ್ತ್ರಿ, ಉಪಾಧ್ಯಕ್ಷೆ ಪಾತೀಮಾಬೇಗಂ ಬಾಕ್ರೋದ್ದಿನ, ಪೌರಾಯುಕ್ತ ಡಾ. ಗುರುಲಿಂಗಪ್ಪ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಅಣವೀರ ಇಂಗಿನಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಸಮಾರಂಭಕ್ಕೆ ಆಗಮಿಸುವರು.
ಇದೇ ಸಂದರ್ಭದಲ್ಲಿ ಈ ದಿನ ಟಿ.ವಿ ಯವರ ಅರಿವೇ ಅಂಬೇಡ್ಕರ ಸಂಚಿಕೆ ಹಾಗೂ ಸಾಹಿತಿ ಮಂಡಲಗಿರಿ ಪ್ರಸನ್ನ ರವರ ರಚಿತ ಕಾಗಿಣಾ ನದಿ ತೀರದಲ್ಲಿ ಎಂಬ ಪುಸ್ತಕ ಬಿಡುಗಡೆ ಮಾಡಲಾಗುವುದು ಜೊತೆಗೆ ವಚನಗಳು ಮತ್ತು ಸಂವಿಧಾನ ಕುರಿತು ಸಂವಾದ ನಡೆಯಲಿದೆ.
ದಸಂಸ, ಕಸಾಪ, ಕರವೇ, ಎಐಡಿಎಸ್ಓ, ರೈತ ಸಂಘ, ವಿಕಲಚೇತನರ ಸಂಘ, ಕಟ್ಟಡ ಕಾರ್ಮಿಕರ ಸಂಘ, ಅಂಗನವಾಡಿ ನೌಕರರ ಸಂಘ, ಬಿಸಿಯೂಟ ನೌಕರರ ಸಂಘ ಹಾಗೆ ಮುಸ್ಲಿಂ ಸಮುದಾಯದ ಸಂಘಟನೆಗಳ ಒಕ್ಕೂಟದ ಸಹ ಭಾಗಿತ್ವದಲ್ಲಿ ಸಮಾರಂಭ ನಡೆಯಲಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಮಲ್ಲಣ್ಣ ಮಸ್ಕಿ, ನರಸಿಂಹಲು ರಾಯಚೂರಕರ, ಮಲ್ಲಿಕಾರ್ಜನ ಕಟ್ಟಿ, ಶರಣಪ್ಪ ಹಿರೇಮನಿ, ಮಲ್ಲಿಕಾರ್ಜನ ಗೌಡ, ಮಲ್ಲಣ್ಣ ಮರತೂರ, ಜೈ ಭೀಮ, ಮಲ್ಲಿಕಾರ್ಜನ ಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.