ಧರ್ಮ ರಕ್ಷಿಸಲು ಸಂಸ್ಕಾರವಂತರಾಗುವುದು ಅಗತ್ಯ: ಗುಂಡಾಚಾರ್ಯ ನರಿಬೋಳ

ಧರ್ಮ ರಕ್ಷಿಸಲು ಸಂಸ್ಕಾರವಂತರಾಗುವುದು ಅಗತ್ಯ: ಗುಂಡಾಚಾರ್ಯ ನರಿಬೋಳ

ಧರ್ಮ ರಕ್ಷಿಸಲು ಸಂಸ್ಕಾರವಂತರಾಗುವುದು ಅಗತ್ಯ: ಗುಂಡಾಚಾರ್ಯ ನರಿಬೋಳ

ಕಲಬುರ್ಗಿ: ನಗರದ ಪ್ರಶಾಂತ ಪ್ರದೇಶದಲ್ಲಿರುವ ಶ್ರೀ ಹನುಮಾನ ಮಂದಿರದಲ್ಲಿ, ಉತ್ತರಾಧಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆದೇಶದಂತೆ ಹತ್ತು ದಿನಗಳ ಕಾಲ ನಡೆದ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭ ಶುಕ್ರವಾರ ನಡೆಯಿತು.

ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಹಾಗೂ ಹಿರಿಯರಿಗೆ ಸಂಧ್ಯಾವಂದನೆ, ದೇವರ ಪೂಜಾ ವಿಧಾನಗಳು, ಹಾಗೂ ವಿವಿಧ ಸ್ತೋತ್ರಗಳ ಪಾಠ ನೀಡಲಾಯಿತು. ಪಂಡಿತ ಭಾರತೀಶಾಚಾರ್ಯ ಹಾಗೂ ವಲ್ಲಭಾಚಾರ್ಯರು ಪಾಠಗಳನ್ನು ನಿರ್ವಹಿಸಿದರು.

ಶಿಬಿರದ ಮುಖ್ಯ ಆಯೋಜಕರಾಗಿದ್ದ ಗುಂಡಾಚಾರ್ಯ ನರಿಬೋಳ ಮಾತನಾಡುತ್ತಾ, "ಮನೆಮಂದಿಯಲ್ಲಿ ಉತ್ತಮ ಸಂಸ್ಕಾರ ನೀಡಿದರೆ ಮಕ್ಕಳನ್ನು ಧರ್ಮಪರರಾಗಿ ರೂಪಿಸಬಹುದು. ಧರ್ಮಾಚರಣೆ ಮಾಡುವವರು ಸನಾತನ ಧರ್ಮದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಮಕ್ಕಳಿಗೆ ಸಮಯ ಸಿಕ್ಕಾಗ ದೇವರ ಸ್ತೋತ್ರಗಳು, ಭಗವದ್ಗೀತೆ, ರಾಮಾಯಣ, ಮಹಾಭಾರತ, ಪುರಾಣಗಳ ಮಹತ್ವ ತಿಳಿಸುತ್ತಿರಬೇಕು. ಪಾಠದ ಜೊತೆಗೆ ಸಂಸ್ಕಾರವೂ ಅಗತ್ಯ," ಎಂದು ಹೇಳಿದರು.

ಈ ಸಮಾರಂಭದಲ್ಲಿ ನರಸಿಂಹ ಅಗ್ನಿಹೋತ್ರಿ, ಶಾಮರಾವ್ ಕುಲಕರ್ಣಿ, ಗುರುರಾಜ ಕುಲಕರ್ಣಿ, ಗೋಪಾಲರಾವ್ ಸೇರಿದಂತೆ ಅನೇಕ ಮಹಿಳೆಯರು ಭಾಗವಹಿಸಿದ್ದರು.