ವಿಜೃಂಭಣೆಯಿಂದ ನೂತನ ರಥ ಲೋಕಾರ್ಪಣೆ ಕಾರ್ಯಕ್ರಮ ಜರಗಿತ್ತು

ವಿಜೃಂಭಣೆಯಿಂದ ನೂತನ ರಥ ಲೋಕಾರ್ಪಣೆ  ಕಾರ್ಯಕ್ರಮ ಜರಗಿತ್ತು

ವಿಜೃಂಭಣೆಯಿಂದ ನೂತನ ರಥ ಲೋಕಾರ್ಪಣೆ ಕಾರ್ಯಕ್ರಮ ಜರಗಿತ್ತು 

ಕಮಲನಗರ: ತಾಲೂಕಿನ ಸೋನಾಳ ಶ್ರೀ ವಿರಕ್ತಮಠದ ಲಿಂ ಶ್ರೀ ಮ.ನಿ.ಪ್ರ. ನಿರಂಜನ ಮಹಾಸ್ವಾಮಿಗಳವರ 15ನೇ ಪುಣ್ಯ ಸ್ಮರಣೋತ್ಸವ ಹಾಗೂ ನೂತನ ರಥೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.

ಈ ಕಾರ್ಯಕ್ರಮವು ಭವ್ಯ ಮತ್ತು ದಿವ್ಯವಾಗಿ ನಡೆಯಿತು. 21ನೇ ಡಿಸೆಂಬರ್ ತಿಂಗಳು ಶನಿವಾರದಂದು ಸಾಯಂಕಾಲ ನಾಲ್ಕು ಗಂಟೆಗೆ ವಿರಕ್ತಮಠದ ಸಾವಿರಾರು ಜನ ಸಮೂಹ ಮಧ್ಯದಲ್ಲಿ ಮಹಾಮಂಗಲ ಕಾರ್ಯಕ್ರಮವು ವೈಭವದಿಂದ ನೇರವೇರಿತು.

ಶ್ರೀ ಮ.ನಿ.ಪ್ರ.ನಿರಂಜನ ಮಹಾಸ್ವಾಮಿಗಳವರ 15ನೇ ಪುಣ್ಯಸ್ಮರಣೋತ್ಸವ ನಿಮಿತ್ಯ 15 ಜನ ಪರಮ ಪೂಜ್ಯರ ಪಾದ ಪೂಜೆ ಸಲ್ಲಿಸಿ ಪೂಜ್ಯರ ಪಾವನ ಹಸ್ತದಿಂದ ನೂತನ ರಥವನ್ನು ಲೋಕಾರ್ಪಣೆಗೊಳಿಸಿ ವಿವಿಧ ವೈಭವಗಳೊಂದಿಗೆ ನೂತನ ರಥೋತ್ಸವಕ್ಕೆ ಚಾಲನೆ ನೀಡಿದರು.

  ಮೆರವಣಿಗೆ ಉದ್ದಕ್ಕೂ ನೂರಾರು ಜನ ಭಕ್ತರ ಮಧ್ಯ ಸುಮಂಗಲಿಯರು ಕುಂಭ ಮೇಳ,ಕಳಸದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿ ಜನರ ಕಣ್ಮನ ಸೆಳೆದರು.

ಭಜಂತ್ರಿ ಡೋಳು ಕುಣಿತದಿಂದ ಇಡಿ ಗ್ರಾಮವೇ ಉತ್ಸವ ಉಲ್ಲಾಸದಿಂದ ಕುಣಿದು ಕುಪ್ಪಳಿಸಿದರು.

 ಹನುಮಾನ ಮಂದಿರದಿಂದ ಈ ಕಾರ್ಯಕ್ರಮವನ್ನು ಸಂಭ್ರಮ ಸಡಗರ ನೆರವೇರಿತು.

ಈ ಕಾರ್ಯಕ್ರಮದಲ್ಲಿ ಸೋನಾಳ ,ಲಖನಗಾಂವ, ಚಂದನವಾಡಿ,ಹೊರಂಡಿ,ಖೇಡ, ಚಾಡೇಶ್ವರ, ಡಿಗ್ಗಿ, ಕಮಲನಗರ ,ಬಾಲೂರ, ಹೊಳಸಮುದ್ರ,ಸಂಗಮ,ಹುಲಸುರ, ಉದಗೀರ,ಮದನೂರ, ಹೂವಿನ ಶಿಗ್ಲಿ, ನಾಗುರ, ಮುಂತಾದ ಕಡೆಗಳಿಂದ ಭಕ್ತರು ಪಾಲ್ಗೊಂಡಿದರು. 

 ವಿರಕ್ತ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಮ.ನಿ.ಪ್ರ. ಚನ್ನವೀರ ಮಹಾಸ್ವಾಮಿಗಳು ರಥಕ್ಕೆ ಪೂಜೆ ನೆರವೇರಿಸಿದರು. ತೆಂಗು ನೈವೇದ್ಯ ಅರ್ಪಿಸಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶುಭ ಮಂಗಲ ಹಾಡಿದರು. 

ಈ ರಥವು ಗ್ರಾಮೀಂಟ್ ಕಲ್ಲಿನಿಂದ ಮಾಡಿಸಲಾಗಿದೆ.21 ಅಡಿಉದ್ದ12ಫೀಟ್ಅಗಲ, ಈ ರಥದ ಮೇಲೆ ಲಿಂಗಾಯತ ಧರ್ಮದ ಸೂತ್ರಗಳಾಗಿರುವ *ಅಷ್ಟಾವರಣ*: ಗುರು ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ಮಂತ್ರ ಪಾದೋದಕ ಪ್ರಸಾದ *ಪಂಚಾಚಾರ*: ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಭೃತ್ಯಚಾರ *ಷಟಸ್ಥಲ*: ಭಕ್ತಸ್ಥಲ ಮಾಹೇಶಸ್ಥಲ ಪ್ರಾಣಲಿಂಗಿ ಸ್ಥಲ ಪ್ರಸಾದಿಸ್ಥಲ ಶರಣಸ್ಥಲ ಐಕ್ಯಸ್ಥಲ ಸುತ್ತಲೂ ಕೆತ್ತಿರುತ್ತಾರೆ ಅನೇಕ ಚಿತ್ರಗಳನ್ನು ತೆಗೆದಿರುತ್ತಾರೆ ಅದರ ವೈಭವವನ್ನು ಬಹಳ ಸುಂದರ ಅಪರೂಪ ಇರುವುದನ್ನು ಕಂಡುಕೊಳ್ಳಬಹುದು

ಮಹಾಪ್ರಸಾದ ವ್ಯವಸ್ಥೆ

ಅಂದಿನ ದಿನ ಲೋಕೇಶ್ ಧನರಾಜ ಹಣಮಶೆಟ್ಟಿ ಇವರು ಬಂದಿರುವ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆಯನ್ನು ಮಾಡಿಸಿರುವರು.

 ಈ ಮಧ್ಯ ಯಾವುದೇ ಅಹಿತರ ಘಟನೆ ಯಾಗದಂತೆ ಪೋಲಿಸರ ಬೀಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.