ಯುವಕರು ಹೆಚ್ಚು ಶಿಕ್ಷಣ ಪಡೆದಾಗ ಬದಲಾವಣೆ ಸಾಧ್ಯ

ಯುವಕರು ಹೆಚ್ಚು ಶಿಕ್ಷಣ ಪಡೆದಾಗ ಬದಲಾವಣೆ ಸಾಧ್ಯ

ಯುವಕರು ಹೆಚ್ಚು ಶಿಕ್ಷಣ ಪಡೆದಾಗ ಬದಲಾವಣೆ ಸಾಧ್ಯ

ಕಮಲಾಪೂರ: ಸ್ವಾತಂತ್ರ ತಂದುಕೊಟ್ಟ ಗಾಂಧೀಜಿ ಅವರು ಹಾಗೂ ಸವಿಂಧಾನ ಜಾರಿಗೆ ತಂದ ಅಂಬೇಡ್ಕರ ನೆನಪು ಅಜರಾಮರವಾಗಿದೆ ಎಂದು ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಅವರು ಅಭಿಪ್ರಾಯಪಟ್ಟರು.

            ತಾಲೂಕಿನ ಡೊಂಗರಗಾಂವ ಗ್ರಾಮದಲ್ಲಿ ಗ್ರಾಮ ಪಂಚಾಯತ ವತಿಯಿಂದ ಹಮ್ಮಿಕೊಂಡ 77ನೇ ಗಣರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಈ ದಿನ ನಮ್ಮೆಲ್ಲರಿಗೊ ಹೆಮ್ಮೆಯ ದಿನವಾಗಿದೆ. 1947 ರಲ್ಲಿ ಸ್ವಾತಂತ್ರ ದೊರಕಿತು. ನಮ್ಮ ಎಲ್ಲಾ ರಾಜ್ಯಗಳು ಸ್ವತಂತ್ರವಾಗಿದ್ದವು. ಅವಾಗ ರಾಜ್ಯದಲ್ಲಿ ರಾಜರ ಆಡಳಿತದಿಂದ ಹೊರಬರುವುದು ಬಹಳ ಕಷ್ಟಕರವಾಗಿತ್ತು. ಸ್ವಾತಂತ್ರ್ಯ ಸಮಾನತೆ ಭಾತೃತ್ವದ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರವನ್ನು ತಂದುಕೊಟ್ಟ ಕೀರ್ತಿ ಗಾಂಧೀಜಿಯವರಿಗೆ ಸಲ್ಲುತ್ತದೆ. ಮಹಾತ್ಮ ಗಾಂಧೀಜಿಯ ಹೋರಾಟದಿಂದ ಅಂಬೇಡ್ಕರ್ ಸವಿಂದಾನ ರಚನೆಯಾಗಿದ್ದರಿಂದ ನಾವು ಇಬ್ಬರನ್ನು ನೆನಪು ಮಾಡಿಕೊಳಬೇಕು. ನಮಗೆ ಸ್ವಾತಂತ್ರ ಸಿಗದೇ ಇದ್ದಿದ್ರೆ ಇಲ್ಲಿ ಜೀವಿಸಲು ಸಾಧ್ಯ ಇರಲಿಲ್ಲ ನಾವು ನೀವು ಎಲ್ಲಾ ಒಂದೇ ಎಂಬ ಭಾವನೆ ಇದೆ. ನಾವು ಬೇರೆ ರಾಷ್ಟ್ರಗಳು ನೋಡಿದಾಗ ನಮ್ಮ ಯುವ ಶಕ್ತಿ ಅಂಬೇಡ್ಕರ್ ಸಂವಿಧಾನ ಇರುವುದರಿಂದ ನಮ್ಮ ದೇಶದಲ್ಲಿ ಅರವತ್ತು ಭಾಗ ಯುವಕರು ಇರುವುದರಿಂದ ಏನಾದರೂ ಬದಲಾವಣೆ ಆಗಬೇಕು ಅಂದರೆ ನಮ್ಮ ಯುವಕರರಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಅನಿಲಕುಮಾರ ಪಿ. ಬೆಳಕೇರಿ,ರವೀಂದ್ರ ಪಾಟೀಲ್,ಡಾ. ಮೇಘರಾಜ, ಶಾಂತಕುಮಾರ ಪಾಟೀಲ, ವಿಜಯಕುಮಾರ ವಡ್ಡನಕೇರ, ಮಹದೇವ ಪಾಟೀಲ, ಸುನಿಲ ಬಿರಾದಾರ, ಬಸವರಾಜ ಸಿಂಗೆ, ಮಾಜಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಗೋಳಾದ, ಮಹದೇವಪ್ಪ ರಾಂಪುರೆ, ಮಧುಕರ ಮುಗುಳವಾಡಿ, ಸಂಜುಕುಮಾರ ರಾಥೋಡ, ತುಕಾರಾಂ ಮೂರ್ತಿ ಸೇರಿದಂತೆ ,ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ಗ್ರಾಮಸ್ಥರು ಇದ್ದರು.