ಕಾಳೆಬೆಳಗುಂದಿ ಸರಕಾರಿ ಶಾಲೆಗೆ ಜಾಗ ಗುರುತಿಸಿಕೊಡಲು ಜಯ ಕರ್ನಾಟಕ ಒತ್ತಾಯ

ಕಾಳೆಬೆಳಗುಂದಿ ಸರಕಾರಿ ಶಾಲೆಗೆ ಜಾಗ ಗುರುತಿಸಿಕೊಡಲು ಜಯ ಕರ್ನಾಟಕ ಒತ್ತಾಯ

ಕಾಳೆಬೆಳಗುಂದಿ ಸರಕಾರಿ ಶಾಲೆಗೆ ಜಾಗ ಗುರುತಿಸಿಕೊಡಲು ಜಯ ಕರ್ನಾಟಕ ಒತ್ತಾಯ

ಗುರುಮಠಕಲ್: ತಾಲೂಕಿನ ಕಾಳೆಬೆಳಗುಂದಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಕುಸಿಯುವ ಭೀತಿಯಲ್ಲಿದ್ದು ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಬೇಕು ಎಂದು ತಾಲೂಕ ಜಯ ಕರ್ನಾಟಕ ಸಂಘಟನೆಯು ತಹಸೀಲ್ದಾರ್ ಅವರಿಗೆ ತಾಕೀತು ಮಾಡಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ತಹಸೀಲ್ದಾರ್ ಶಾಂತಗೌಡ ಬಿರಾದರ ಅವರಿಗೆ ತಾಲೂಕ ಜಯ ಕರ್ನಾಟಕ ಸಂಘಟನೆ ವತಿಯಿಂದ ಮನವಿ ನೀಡಿದ ನಂತರ ಸಂಘಟನೆ ತಾಲೂಕ ಅಧ್ಯಕ್ಷ ನಾಗೇಶ್ ಗದ್ದಿಗಿ ಮಾತನಾಡಿ,

ಕಾಳೆಬೆಳಗುಂದಿ ಗ್ರಾಮದ ಪರಂಪೋಕ ಭೂಮಿ ಸ, ನಂ.488 ರಲ್ಲಿ ಒಟ್ಟು 33 ಎಕರೆ 15 ಗುಂಟೆ ಇರುವ ಜಮೀನಿನಲ್ಲಿ 1 ಎಕರೆ ಜಮೀನನ್ನು ಜಿಲ್ಲಾಧಿಕಾರಿಗಳು ಸರಕಾರಿ ಪ್ರಾಥಮಿಕ ಶಾಲೆಗೆ 2011 ರಲ್ಲಿಯೇ ಮಂಜೂರು ಮಾಡಿದ್ದಾರೆ, ಕಂದಾಯ ಇಲಾಖೆ ವತಿಯಿಂದ ನಕ್ಷೆ ಮಾಡಲಾಗಿದೆ ಆದರೂ ಸಹ ಇಲ್ಲಿಯವರೆಗೂ ಶಾಲೆಗೆ ಮಂಜೂರಾದ ಜಾಗವನ್ನು ಗುರುತಿಸಿ ಅದ್ದು ಬಸ್ತು ಮಾಡಿ ಕೊಟ್ಟಿಲ್ಲ ಈ ಕೂಡಲೇ ಜಾಗವನ್ನು ಗುರುತಿಸಿ ಹದ್ದು ಬಸ್ತು ಮಾಡಿಕೊಡಬೇಕೆಂದು ಒತ್ತಾಯಿಸಿದರು.

 ಈ ಹಿಂದೆ ಇರುವ ತಹಸೀಲ್ದಾರರು ಮಂಜೂರಾದ ಜಾಗವನ್ನು ಗುರ್ತಿಸಿ ಕೊಡುವಲ್ಲಿ ವಿಳಂಬ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಶಾಲೆ ಕುಸಿಯುವ ಹಂತದಲ್ಲಿರುವುದರಿಂದ ಜೀವಭಯದಲ್ಲಿ ಮಕ್ಕಳ ವ್ಯಾಸಂಗಕ್ಕೆ ಹಿನ್ನಡೆಯಾಗಬಾರದು ಎಂದು ಶಾಲೆಗೆ ಕಳಿಸುತ್ತಿದ್ದಾರೆ ಆದರೆ ಕಟ್ಟಡದ ಮೇಲ್ಚಾವಣಿ ಕುಸಿದು ಏನಾದರೂ ಅನಾಹುತ ನಡೆದರೆ ಯಾರು ಹೊಣೆಗಾರರು..? ಈ ಹಿಂದೆ ಶಾಲೆ ಜಾಗವನ್ನು ಗುರುತಿಸಿ ಕೊಡಿ ಎಂದು ಹಲವಾರು ಬಾರಿ ಮನವಿ ಪತ್ರ ಕೊಟ್ಟರು ಇದುವರೆಗೂ ಗುರುತಿಸಿ ಕೊಟ್ಟಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಆದಷ್ಟು ಬೇಗ ಶಾಲೆಗೆ ಮಂಜೂರಾದ ನಿಖರವಾದ ಸ್ಥಳವನ್ನು ಗುರುತಿಸಿ ಕೊಡಬೇಕು ಇಲ್ಲವಾದಲ್ಲಿ ಇದೇ ರೀತಿ ವಿಳಂಬ ನೀತಿ ತೋರಿದ್ದಲ್ಲಿ ತಹಸೀಲ್ದಾರ ಕಾರ್ಯಾಲಯದ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ತಾಲೂಕು ಪ್ರದಾನ ಕಾರ್ಯದರ್ಶಿ ಗೋಪಾಲಕೃಷ್ಣ ಮೇಧಾ, ಕಾರ್ಯಾಧ್ಯಕ್ಷರಾದ ನರಸಿಂಹಲು ಗಂಗನೋಳ, ಉಪಾಧ್ಯಕ್ಷರಾದ ಕಾಶಪ್ಪ ದೊರೆ, ಭೀಮಶಪ್ಪ ತಲಾರಿ, ರಾಮುಲು ಕೊಡಿಗಂಟಿ, ತಿಮ್ಮಯ್ಯ ನಾಯಕ, ಎಸ್ಡಿಎಂಸಿ ಅಧ್ಯಕ್ಷ ಈರದಿಮ್ಮ, ಮರೆಪ್ಪ ನಾಯಕ ಮಹಾಂತಯ್ಯ ಸ್ವಾಮಿ, ಲಕ್ಷ್ಮಣ ನಾಯಕ, ಮೋಹನರಾಜ, ಸಾಬರೆಡ್ಡಿ ಉಪ್ಪಾರ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಪದಾಧಿಕಾರಿಗಳು ಇನ್ನಿತರರು ಇದ್ದರು.