ಜ್ಞಾನ ಮತ್ತು ಸತ್ಯದ ಸಂಕೇತವೆ ಗುರು ಪೂರ್ಣಿಮಾ

ಜ್ಞಾನ ಮತ್ತು ಸತ್ಯದ ಸಂಕೇತವೆ ಗುರು ಪೂರ್ಣಿಮಾ
ಶಹಾಪುರ : ಗುರು ಹಿರಿಯರನ್ನ ಗೌರವಿಸಿ ಪ್ರೀತಿ ವಾತ್ಸಲ್ಯದಿಂದ ಕಾಣುವುದರ ಜೊತೆಗೆ ಅವರಲ್ಲಿರುವ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನ ಮತ್ತು ಸತ್ಯದೊಡೆಗೆ ಕರೆದು ಹೋದೆ ಗುರುಪೂರ್ಣಿಮೆಯ ಮಹತ್ವ ಎಂದು ವಕ್ಕಲಗೇರಿ ಹಿರೇಮಠದ ಮರುಳ ಮಹಾಂತ ಶಿವಾಚಾರ್ಯರು ಹೇಳಿದರು.
ತಾಲೂಕಿನ ಸಗರ ಗ್ರಾಮದ ಒಕ್ಕಲಿಗೇರಿ ಹಿರೇಮಠ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು, ಗುರುಪೂರ್ಣಿಮೆಯ ಆಚರಣೆಯಿಂದ ಆಧ್ಯಾತ್ಮಿಕ ಬೆಳವಣಿಗೆಗೆ ಪೂರಕವಾಗಿ ಆತ್ಮಾವಲೋಕನ ಚಿಂತನೆಗೆ ಅವಕಾಶ ಒದಗಿಸುತ್ತದೆ ಎಂದು ಎಂದು ನುಡಿದರು.
ಆಧ್ಯಾತ್ಮಿಕ ಪರಂಪರೆಯನ್ನು ವಿಶ್ವದಾದ್ಯಂತ ಇಂದು ಗುರುತಿಸಿದ ಮಹತ್ವ ದಿನವನ್ನ ಗುರುಪೂರ್ಣಿಮೆ ಆಚರಣೆ ಮಾಡಲಾಗುತ್ತಿದೆ ಧಾರ್ಮಿಕ ಜ್ಞಾನ ಸಂಪ್ರದಾಯಗಳನ್ನು ಸಂರಕ್ಷಿಸಿ ಉಳಿಸಿ ಬೆಳೆಸುವುದು ಇಂದಿನ ಯುವ ಸಮೂಹದ ಜವಾಬ್ದಾರಿಯಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಬಸವರಾಜ್ ಕನಗೊಂಡ,ತಿರುಪತಿ ಹಟ್ಟಿಕಟಗಿ,ನಿಂಗಣ್ಣ ಮುದ್ದಾ, ಪಿಡ್ಡಪ್ಪ ನಂದಿಕೋಲ,ಭೀಮರಾಯ ಸೇರಿ,ಮಲ್ಲಿಕಾರ್ಜುನ್ ಕೊಬ್ರಿ, ಸಿದ್ದಯ್ಯ ಸ್ವಾಮಿ ಸ್ಥಾವರಮಠ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್ ಸಿದ್ರಾ,ಶಿವಣ್ಣಗೌಡರ,ಚಂದಣ್ಣ ಚಡಗುಂಡ, ಸಗರ ಗ್ರಾಮದ ಭಕ್ತ ಸಮೂಹವೇ ನೆರೆದಿತ್ತು.